ಫ್ರೇ. 24ಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ರ 134 ಜಯಂತ್ಯುತ್ಸವ ಪದಾಧಿಕಾರಿಗಳ ಆಯ್ಕೆ

ಫ್ರೇ. 24ಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ರ 134 ಜಯಂತ್ಯುತ್ಸವ  ಪದಾಧಿಕಾರಿಗಳ ಆಯ್ಕೆ

ಫ್ರೇ. 24ಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ರ 134 ಜಯಂತ್ಯುತ್ಸವ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ನಿಮಿತ್ತ ಜಿಲ್ಲಾ ಜಯಂತ್ಯುತ್ಸವ ಸಮಿತಿ ಪದಾಧಿ ಕಾರಿಗಳ ಆಯ್ಕೆ ಸಭೆ ಫೆ.24ರಂದು ನಡೆಯಲಿದೆ ಎಂದು ಹಿಂದಿನ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಭಂಡಾರಿ ಮಾಹಿತಿ ನೀಡಿದರು. ನಂತರ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುವುದು.

ಅದರ ಕುರಿತು ಚರ್ಚೆ ನಡೆಸಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಫೆ.24ರಂದು ನಗರದ ಕನ್ನಡ ಭವನದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಸಲಾಗುವುದು. ಇದಕ್ಕೆ ಅನುಯಾಯಿಗಳು, ಹಿಂದೂಪರ, ಕನ್ನಡಪರ ಸೇರಿ ಎಲ್ಲ ಸಂಘಟನೆಗಳ ಮುಖಂಡರು ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕು ಎಂದು ಹೇಳಿದರು. 

ಕಳೆದ ಬಾರಿ ಜಯಂತ್ಯುತ್ಸವ ನಂತರ ಸುಮಾರು 1 ಲಕ್ಷ ರೂ. ಉಳಿದಿದ್ದವು. ಅಮಿತ್ ಶಾ ಹೇಳಿಕೆ ಖಂಡಿಸಿ ಕೆಲ ದಿನಗಳ ಹಿಂದೆ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಊಟ ಹಾಗೂ ನೀರಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ ಅವರು, ಇನ್ನೊಂದು ಜಿಲ್ಲಾ ಜಯಂತ್ಯುತ್ಸವ ಸಮಿತಿ ಆಚರಣೆ ನಂತರ ಲೆಕ್ಕ ನೀಡಬೇಕು ಎಂಬುದು ನಮ್ಮ ಮೊದಲಿನಿಂದಲು ಆಗ್ರಹವಾಗಿದೆ ಎಂದು ಹೇಳಿದರು. 

ಹಿಂದಿನ ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಲಕ್ಷ್ಮಣ ಮೂಲಭಾರತಿ, ಅರವಿಂದ ಕಮಲಾಪುರ, ಉದಯ ಸಿ.ಖಣಗೆ, ಸಂತೋಷ ಪಾಳಾ, ಕಾನು ಕೋವಿ, ನಾಗರಾಜ ಕುಡಳ್ಳಿ ಇದ್ದರು