ರಾಯಚೂರು ಜಿಲ್ಲಾ ಉತ್ಸವ,ಕುರ್ಚಿಗಳು ಖಾಲಿ ಖಾಲಿ.
ರಾಯಚೂರು ಜಿಲ್ಲಾ ಉತ್ಸವ,ಕುರ್ಚಿಗಳು ಖಾಲಿ ಖಾಲಿ.
ರಾಯಚೂರು : ರಾಯಚೂರು ಜಿಲ್ಲಾಡಳಿತ ಈ ಬಾರಿ ರಾಯಚೂರು ಜಿಲ್ಲಾ ಉತ್ಸವ ಹಮ್ಮಿಕೊಂಡಿರುವುದು ನಿಜಕ್ಕೂ ಸಂತೋಷದ ಸಂಗತಿ,ಆದರೆ ಬಸವೇಶ್ವರ ಅಡಿಟೋರಿಯಂ ಪ್ರೇಕ್ಷಕರು ಇಲ್ಲದೆ ಬಿಕೋ ಎನ್ನುತ್ತಿದ್ದವು,ಆಸನಗಳು ಬಹುತೇಕವಾಗಿ ಖಾಲಿ ಖಾಲಿಯಾಗಿದ್ದದ್ದು ಕಂಡುಬಂದಿತು.
ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿರಲಿಲ್ಲ,ಈ ಅವಸ್ಥೆಯನ್ನು ಕಂಡು ಪ್ರಶ್ನಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆಯನ್ನಲಿಲ್ಲ.ಪ್ರತಿಯೊಂದು ಸಮಸ್ಯೆಗೆ ಜಿಲ್ಲಾಧಿಕಾರಿಗಳನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದರು.
ವೇದಿಕೆ ಮೇಲೆ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿರುವ ಕಲಾವಿದರಿಗೆ ಅರ್ಧಕ್ಕೆ ಮುಟಕುಗೊಳಿಸುವಂತೆ ಸೂಚಿಸಿ ಅವಮಾನಿಸಿದ್ದಾರೆ.ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಬೆಂಗಳೂರಿನಿಂದ ಉತ್ಸವ ನೋಡಲು ಆಗಮಿಸಿದ ಸಾಂಸ್ಕೃತಿಕ ಸಂಘಟಕ ಜಯಸಿಂಹ ಎಸ್. ಆರೋಪಿಸಿದ್ದಾರೆ.
ರಾಯಚೂರು ಉತ್ಸವ ಎಲ್ಲಾ ವೇದಿಕೆಗಳಲ್ಲೂ ವಿಜ್ರಂಬಣೆಯಿಂದ ಜರುಗಿದರೆ,ಬಸವೇಶ್ವರ ಆಡಿಟೋರಿಯಂನಲ್ಲಿ ಮಾತ್ರ ಕಾಟಾಚಾರಕ್ಕಾಗಿ ಮಾತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ಮೇಲ್ನೋಟಕ್ಕೆ ಕಂಡುಬರುತ್ತಿತ್ತು.
ಗಾಯನವನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಸೂಚಿಸುತ್ತಿರುವುದು ತಮ್ಮ ವಿಡಿಯೋದಲ್ಲಿ ರೆಕಾರ್ಡ್ ಆಗಿರುವುದನ್ನು ತಾವು ಖುದ್ದಾಗಿ ಗಮನಿಸಬಹುದು.ಸಂಗೀತ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿ ಕಲಾವಿದರಿಗೆ ಅವಮಾನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ನೆರೆದಿದ್ದ ಕಲಾವಿದರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
