ಪ್ರಮೋದಕುಮಾರ ಅವರ ಜನ್ಮದಿನದ ಆಚರಣೆಯ
ಪ್ರಮೋದಕುಮಾರ ಅವರ ಜನ್ಮದಿನದ ಆಚರಣೆಯ
ಕಲಬುರಗಿ: ನಗರದ ರಾಜಾಪೂರ ಬಡಾವಣೆಯಲ್ಲಿ ಯುವ ಮುಖಂಡರು ಹಾಗೂ ಸಮಾಜ ಸೇವಕರು ಮತ್ತು ಆಲ್ ಇಂಡಿಯಾ ಕ್ರಿಶ್ಚಿಯನ್ ವೆಲ್ಪೇರ್ ಸೊಸೈಟಿ ಅಧ್ಯಕ್ಷರಾದ ಪ್ರಮೋದಕುಮಾರ (ಮೊಂಟಿ) ಅವರ ಜನ್ಮದಿನವನ್ನು ದಕ್ಷೀಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರ ಸಮ್ಮುಖದಲ್ಲಿ ಕೇಕ್ ಕತರಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೂಜ್ಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಮಾಜಿ ಮಹಾಪೌರರಾದ ರವಿಂದ್ರನಾಥ ಹೋನ್ನಳ್ಳಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ ಹೋನ್ನಳ್ಳಿ, ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರ ಕೆ.ಯಾದವ್, ಕಾಂಗ್ರೆಸ್ ಮುಖಂಡ ಸಂಘಪಾಲ ಕಾಂಬಳೆ ಸೇರಿದಂತೆ ಇತರರು ಇದ್ದರು.
