ತಾಳೆ ಬೆಳೆಗಾರರಾದ ರಾಜಕುಮಾರ್ ಕೋಟೆ ಯವರ ಹೋಸ ತಾಳೆ ತಳಿ ಬೆಳೆಗಳ ವಿಕ್ಷಣೆ ಹೋಸ ತಾಳೆ ಬೆಳೆ ಬೆಳೆಯಿಂದ ಅಧಿಕ ಲಾಭ*ಕೃಷಿ ಶ್ರೀ ಪುರಸ್ಕೃತ ರೈತ ಪ್ರೊ ಯಶವಂತರಾಯ ಅಷ್ಠಗಿ ಅಭಿಮತ

ತಾಳೆ ಬೆಳೆಗಾರರಾದ ರಾಜಕುಮಾರ್ ಕೋಟೆ ಯವರ ಹೋಸ ತಾಳೆ ತಳಿ ಬೆಳೆಗಳ ವಿಕ್ಷಣೆ ಹೋಸ ತಾಳೆ ಬೆಳೆ ಬೆಳೆಯಿಂದ ಅಧಿಕ ಲಾಭ*ಕೃಷಿ ಶ್ರೀ ಪುರಸ್ಕೃತ ರೈತ ಪ್ರೊ ಯಶವಂತರಾಯ ಅಷ್ಠಗಿ ಅಭಿಮತ

 
ಕಮಲಾಪುರ: ೨೬ ನೇ ಜುಲೈ 
ಕಲಬುರಗಿ ಎ ಪಿ ಎಂ ಸಿ ಉಪಾಧ್ಯಕ್ಷರು ಹಾಗೂ ಪ್ರಗತಿಪರ ರೈತರಾದ  ರಾಜಕುಮಾರ್ ಕೋಟೆ ಯವರ ತೋಟಕ್ಕೆ ೨೦೨೩-೩೪ ಸಾಲಿನ ಜಿಲ್ಲಾಡಳಿತ ಕೊಡಮಾಡುವ ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಪ್ರೊ ಯಶವಂತರಾಯ ಅಷ್ಠಗಿ ಭೇಟಿ ವಿಕ್ಷೀಸಿದರು.


 ಹೋಸ ತಾಳೆ ಬೆಳೆಯನ್ನು ಕರ್ಣಾಕಾರದಲ್ಲಿ ೯ ಮೀಟರ್ ಅಂತರದಲ್ಲಿ ಸಾಲಿನಿಂದ ಸಾಲಿಗೆ ಹಾಗೂ ತಾಳೆ ಬೆಳೆಯಿಂದ ಬೆಳೆಗೆ ನೆಟ್ಟಿರುವವುದರಿಂದ ತಾಳೆ ಬೆಳೆಗೆ ಸೂರ್ಯನ ಬಿಸಿಲು ನೇರವಾಗಿ  ದೊರೆಯುವುದರಿಂದ ಬೆಳೆಗಳ ಫಲವತ್ತತೆ ಹೆಚ್ಚುತ್ತದೆ.  ಕೇವಲ ಮೂರು ವರ್ಷಗಳಲ್ಲಿ ಇಳುವರಿ ಪಡೆಯಬಹುದು. ಆದ್ದರಿಂದ ರೈತರು ಈ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಲ್ಲದೆ ಆಧುನಿಕ ತಂತ್ರಜ್ಞಾನದಿಂದ ಕುಡಿರುವ  
ಮಿಶ್ರ ಕೃಷಿಯಾದ ತೊಗರಿ  (೧೫೨  ಜಿ ಆರ್ ಜಿ ತಳಿ) ಮತ್ತು ಉದ್ದಿನ ಬೆಳೆಗಳನ್ನು ಸಹ ವೀಕ್ಷಣೆ ಮಾಡಿ ಕೀಟ ಹಾಗೂ ಹೇನು ಬಾಧೆ ಇರುವ ಕಾರಣ ಪ್ರೊಪೆನೊಪಾಸ್, ಬೆಂಜಿಮ್ ಗೋಲ್ಡ  ಹಾಗೂ ಸಾಫ್ ಪೌಡರ್ ಔಷಧಿ ಸಿಂಪರಣೆ ಮಾಡಲು ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಶರಣಗೌಡ ಪಾಟೀಲ್ ಪಾಳಾ  ಪ್ರಗತಿಪರ ರೈತ ಹಾಗೂ ತೋಟದ ಮಾಲೀಕರಾದ ರಾಜಕುಮಾರ್ ಕೋಟೆ ಇದ್ದರು.