ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಲು ಕರೆ
ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳಲು ಕರೆ
ಕಲಬುರಗಿ: ವಿದ್ಯಾರ್ಥಿಗಳು ಬದುಕಿನಲ್ಲಿ ಬರುವ ಅನೇಕ ಸವಾಲು ಹಾಗೂ ತಿರುವುಗಳನ್ನು ಧೈರ್ಯದಿಂದ ಎದುರಿಸಿ ಸಫಲರಾಗಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ತೃಪ್ತಿ ಎಸ್. ಲಾಖೆ ಕರೆ ನೀಡಿದರು.
ಕರ್ನಾಟಕ ಪ್ರತಿಭಾ ಅಜಾಡೆಮಿ ಕಲಬುರಗಿ ಘಟಕದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಗರದ ಬಸವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಬರುವ ಕಷ್ಟ ನಷ್ಟಗಳಿಗೆ ಹೆದರಬಾರದು. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಸೋಲು ಒಪ್ಪಿಕೊಳ್ಳದೆ ಮುನ್ನಡೆಯಬೇಕು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಬದುಕು ಹಾಗೂ ಭವಿಷ್ಯಕ್ಕೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡಗಳಂತಾಗಬಾರದು. ಅದು ನಿರ್ಧಿಷ್ಟವಾಗಿ, ನಿಖರವಾಗಿ ಚಲಿಸುವ ಮಶಿನ್ ಗನ್ ರೀತಿಯಲ್ಲಿ ಇರಬೇಕು. ನಮ್ಮಲ್ಲಿರುವ ಆಸ್ತಿ, ಐಶ್ವರ್ಯವನ್ನು ಯಾರಾದರೂ ಕಸಿದುಕೊಳ್ಳಬಹುದು. ಆದರೆ ಜ್ಞಾನವನ್ನು ಮಾತ್ರ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕಲಬುರಗಿ ಮಹಾನಗರ ಪಾಲಿಕೆ ವಲಯ ಕಚೇರಿ-1 ಆಯುಕ್ತ ಗೌತಮ ಕಾಂಬಳೆ, ಹಿರಿಯ ವಕೀಲ ಸೈಯದ್ ಮಜರ್ ಹುಸೇನ್, ಕೋಲಿ ಸಮಾಜದ ಮುಖಂಡ ಹುಲಿಗೆಪ್ಪ ಕನಕಗಿರಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಆನಂದ ವಾರಿಕ್, ವಸತಿ ನಿಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಧರ ಕಾಂಬಳೆ, ಸರಕಾರಿ ನೌಕರರ ಸಂಘದ ಸಂತೋಷ ಸರಡಗಿ ಮಾತನಾಡಿದರು.
ಕರ್ನಾಟಕ ಪ್ರತಿಭಾ ಅಕಾಡೆಮಿ ಜಿಲ್ಲಾ ಸಂಚಾಲಕ ನಾಗೇಂದ್ರ ಕೆ. ಜವಳಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಸುನಿಲ ಮಾನಪಡೆ ಪ್ರಸ್ತಾವಿಕ ಮಾತನಾಡಿದರು.
ಶ್ರವಣಕುಮಾರ ಮೋಸಲಗಿ, ಮೈಲಾರಿ ದೊಡ್ಡಮನಿ, ಭಗವಂತ ವಗ್ಗೆ, ಮಂಜುನಾಥ ಗಂಗಕರ್, ಮಲ್ಲಿಕಾರ್ಜುನ ಬೋಳಣಿ, ಕಾಶಿನಾಥ ಸಿಂಧೆ, ಆಕಾಶ ನಂದಾ ಅನಿಲ್ ಮಂಗಾ, ಸಂಜುಕುಮಾರ ಸಾಸರಗಾಂವ,ರೇಣುಕಾ ಸರಡಗಿ, ಗೌರಮ್ಮ ಇತರರು ಭಾಗವಹಿಸಿದ್ದರು.
ಇದೇವೇಳೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 80 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು
.
