ಪ್ರತಿಯೊಂದು ಕ್ರೀಡೆಗೂ ಸರ್ಕಾರ ಬೆಂಬಲ ನೀಡಬೇಕು: ಮಹಂತಗೌಡ ಆರ್. ಪಾಟೀಲ

ಪ್ರತಿಯೊಂದು ಕ್ರೀಡೆಗೂ ಸರ್ಕಾರ ಬೆಂಬಲ ನೀಡಬೇಕು: ಮಹಂತಗೌಡ ಆರ್. ಪಾಟೀಲ
ಯಡ್ರಾಮಿ- ಕರ್ನಾಟಕ ರಾಜ್ಯದಾದ್ಯಂತ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಭಾಗವಹಿಸಿ ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಈ ಪ್ರತಿಭಾವಂತರಿಗೆ ಸರಿಯಾದ ಬೆಂಬಲ ಹಾಗೂ ಪ್ರೋತ್ಸಾಹ ದೊರೆಯದಿರುವುದು ಖರಾಬ ಸಂಗತಿಯಾಗಿದೆ ಎಂದು ಯಡ್ರಾಮಿ ತಾಲೂಕಿನ ರಾಷ್ಟ್ರೀಯ ಅಹಿಂದ ಸಂಘಟನೆಯ ತಾಲೂಕು ಅಧ್ಯಕ್ಷರಾದ ಮಹಂತಗೌಡ ಆರ್. ಪಾಟೀಲ ಹಂಗರಗಾ ಕೆ. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, "ಇಂದಿನ ಪರಿಸ್ಥಿತಿಯಲ್ಲಿ ಕೆಲವರು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲು ರಾಜಕಾರಣಿಗಳ ಕಚೇರಿಗಳ ಬಾಗಿಲು ತಟ್ಟಬೇಕಾದ ಸ್ಥಿತಿಯಿದೆ. ಆದರೆ ಬಹುತೇಕ ಬಾರಿ ಅವರಿಗೆ ಸ್ಪೋನ್ಸರ್ ಅಥವಾ ಹಣಕಾಸು ಸಹಾಯ ಸಿಗುತ್ತಿಲ್ಲ. ಇದು ನೈಜ ಪ್ರತಿಭೆಗಳ ಮುಚ್ಚುಮರೆಯಾಗಲು ಕಾರಣವಾಗಿದೆ," ಎಂದಿದ್ದಾರೆ.
ಮಹಂತಗೌಡ ಆರ್. ಪಾಟೀಲ ಅವರು ಸರ್ಕಾರಗಳಿಗೆ ಮನವಿ ಮಾಡಿದ್ದು, ಪ್ರತಿಯೊಂದು ಕ್ರೀಡೆಗೂ ಸಮಾನ ಪ್ರಮಾಣದಲ್ಲಿ ಆರ್ಥಿಕ ಸಹಾಯಧನ ಹಾಗೂ ಸೌಲಭ್ಯಗಳನ್ನು ನೀಡಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಚಿತ ಪ್ರಯಾಣ ವೆಚ್ಚ ಸೇರಿದಂತೆ ಎಲ್ಲಾ ಅಗತ್ಯಗಳನ್ನು ಸರ್ಕಾರವೇ ಭರಿಸಬೇಕು. ಹಾಗಾದರೆ ಮಾತ್ರ ಭಾರತದ ಕ್ರೀಡಾ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬಹುದಾಗಿದೆ ಎಂಬ ನಂಬಿಕೆ ಅವರು ವ್ಯಕ್ತಪಡಿಸಿದರು.
ವರದಿ: ಜೆಟ್ಟೆಪ್ಪ ಎಸ್. ಪೂಜಾರಿ
.