ಆಳಂದ: ಚಿತಲಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಿಕ್ಷಕ–ಮಕ್ಕಳ ಮಹಾಸಭೆ

ಆಳಂದ: ಚಿತಲಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಿಕ್ಷಕ–ಮಕ್ಕಳ ಮಹಾಸಭೆ

ಆಳಂದ: ಚಿತಲಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಿಕ್ಷಕ–ಮಕ್ಕಳ ಮಹಾಸಭೆ

ಆಳಂದ ತಾಲೂಕಿನ ಚಿತಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮಕ್ಕಳ ದಿನಾಚರಣೆ ಪ್ರಯುಕ್ತ ಶಿಕ್ಷಕ–ಮಕ್ಕಳ ಮಹಾಸಭೆ ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಪ್ರೌಢಶಾಲೆಯ SDMC ಅಧ್ಯಕ್ಷರಾದ ಪ್ರತಿಭಾ ಶಾಂತಯ್ಯ ಹಾಗೂ ಸಾಗರ್ ಪಾಟೀಲ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಗುರು ಶ್ರೀ ಸೋಮನಾಥ ಜಳಕೋಟಿ ವಹಿಸಿದ್ದರು. ಉಪಾಧ್ಯಕ್ಷ ಸ್ಥಾನವನ್ನು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಸಿದ್ದರಾಮ ವಹಿಸಿದ್ದರು.

ಸಭೆಯಲ್ಲಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರು, ಕಿಣಿ–ಸುಲ್ತಾನ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚನ್ನಬಸಪ್ಪ ಕೋಟೆ, ಗ್ರಾಮ ಪಂಚಾಯಿತಿ ಸದಸ್ಯರಾದ ಸರಸ್ವತಿ ಚನ್ನಶೆಟ್ಟಿ ಮತ್ತು ಅಂಬುಬಾಯಿ ಬೇಡರ್ ಮುಂತಾದ ಅತಿಥಿಗಳು ಭಾಗವಹಿಸಿದರು.

ಶಾಲೆಯ ಶಿಕ್ಷಕರಾದ ಶಿವಕುಮಾರ್ ಬೇಳೆ, ಸುಭಾಷ್ ಬಿರಾದಾರ್, ಸಹದೇವ್, ಸುರೇಶ್ ಹಂಚಿನಾಳ, ಕವಿತಾಬಾಯಿ ಹೊಸಮನಿ, ಧರ್ಮಣ್ಣ, ಜಗನ್ನಾಥ್ ಸೇರಿದಂತೆ ಗ್ರಾಮದ ಅನೇಕ ಪಾಲಕರು, ಪೋಷಕರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ, ಬಾಲಕಾರ್ಮಿಕ ನಿಷೇಧ, ಬಾಲ್ಯವಿವಾಹ ತಡೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳ ಕುರಿತು ಪಾಲಕರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ಪಾಲಕರಿಗಾಗಿ ವಿವಿಧ ಆಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವರದಿ: ಡಾ. ಅವಿನಾಶ್ ಎಸ್. ದೇವನೂರ