ವಚನಾಂತರಂಗ {ಆಧುನಿಕ ವಚನಗಳು}
ವಚನಾಂತರಂಗ {ಆಧುನಿಕ ವಚನಗಳು}
ಲೇಖಕರು :-ಪಂಪಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ.
ಪ್ರಕಾಶಕರು :-ಶ್ರೀ ಗುರುವರೆಣ್ಯ ಗ್ರಾಮೀಣ ವಿದ್ಯಾಪೀಠ (ಶಿವಯೋಗಿಶ್ವರ ಹಿರೇಮಠ -ಭಾಗೋಜಿಕೊಪ್ಪ, ತಾ. ರಾಮದುರ್ಗ
ಬೆಲೆ :-೧೫೦
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಡಿಗನ್ನಡದ ವಚನಸಾಹಿತ್ಯವು ಒಂದು ಚಳುವಳಿ ಸಾಹಿತ್ಯವಾಗಿ ಸಾಮಾಜಿಕ ಬದ್ಧತೆಯೊಂದಿಗೆ ರಚನೆಗೊಂಡು ಮಾನವೀಯತೆಯ ತಾತ್ವಿಕಮೌಲ್ಯತೆಯನ್ನು ಮಂಡಿಸುವ ನಿಟ್ಟಿನಲ್ಲಿ ಸಮಾಜದಲಿಂದು ಅಸಮಾನತೆಯನ್ನು ತೊಡೆದುಹಾಕಲು ೧೨ನೇ ಶತಮಾನದ ಶರಣರು ಪಟ್ಟ ಪರಿಶ್ರಮ ಅನುಭವಿಸಿದ ಯಾತನೆಗಳು ಕಠೋರತೆಯಿಂದ ಕೂಡಿದವು.
ಅದೇ ರೀತಿ ಶರಣರ ಪಥದಲ್ಲಿ ನಡೆಯುತ್ತಿರುವ ಪ್ರಸ್ತುತ ಸಿಂಧನೂರಿನ ತಾಲೂಕು ಘಟಕದ ಅಧ್ಯಕ್ಷರು ಆಗಿರುವ ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಇವರು ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಪರಿಷತ್ ಚಟುವಟಿಕೆ ಜೊತೆಗೆ ಸಾಹಿತ್ಯ ಕೃಷಿಯನ್ನು ಮಾಡುವ ನಿಟ್ಟಿನಲ್ಲಿ ""ವಚನಾಂತರಂಗ""ಎಂಬ ಆಧುನಿಕ ವಚನಗಳನ್ನು ರಚಿಸಿದ್ದಾರೆ.
ವಚನಾಂತರಂಗ ಆಧುನಿಕ ವಚನಗಳ ಕೃತಿ ಸಮಾಜದ ಓರೆಕೊರೆಗಳನ್ನು ತಿದ್ದುವದರ ಜೊತೆಗೆ ಆತ್ಮನುಸಂಧಾನ ಆತ್ಮವಿಮರ್ಶೆ,ಮೌಢ್ಯತೆ ಎಲ್ಲವೂ ಈ ಕೃತಿಯಲ್ಲಿ ಕಂಡುಬರುತ್ತದೆ.
ವಚನಾತರಂಗ ಕೃತಿಯು ಜನರಧ್ವನಿಯ ಭಾಗವಾಗಿ ಸಾಮಾಜಿಕ ಅನುಭವಗಳ ಅನಾವರಣವಾಗಿದ್ದು ಬದುಕಿನ ಹಲವು ಮಗ್ಗುಲುಗಳನ್ನು ಸೂಕ್ಷಮಾತಿಸೂಕ್ಷ್ಮವಾಗಿ ಅರಿತ ಲೇಖಕರಾದ ಪಂಪಯ್ಯ ಸ್ವಾಮಿಯವರು ತಮ್ಮ ವಚನಗಳಲ್ಲಿ ಸವಿಸ್ತಾರವಾಗಿ ಬಿಚ್ಚಿಟ್ಟಿದ್ದಾರೆ.
""ಪಂಪಯ್ಯಪ್ರೀಯ ಶಿವಲಿಂಗದೇವ"" ಎಂಬ ಅಂಕಿತನಾಮದೊಂದಿಗೆ ವಚನ ರಚಿಸಿರುವ ಇವರು ತಮ್ಮ ಕೃತಿಯಲ್ಲಿ ಸುಮಾರು ೩೧೮ ಆಧುನಿಕ ವಚನಗಳು ರಚಿಸಿರುವರು.
ನೆಲ, ಜಲ, ಗಾಳಿ ಬೆಳಕು ಪ್ರಕೃತಿ ಕುರಿತು ವಚನ ರೂಪದಲ್ಲಿ
. ''ಪ್ರಕೃತಿ, ಉಳಿಸೋಣ ಬೆಳೆಸೋಣವಯ್ಯ!
. ಪ್ರಕೃತಿ ಉಳಿದರೆ ನಮಗೆ ಉಳಿಗಾಲ''
ಎಂಬ ವಚನ ವಚನಕಾರರ ಸಾಮಾಜಿಕ ಕಳಕಳಿಯನ್ನು ತೋರುತ್ತದೆ.
ಪ್ರಕೃತಿ ಮೇಲೆ ಮನುಷ್ಯನು ನಡೆಸುವ ದೌರ್ಜನ್ಯ ಹಾಗು ಅದರ ಪರಿಣಾಮ ಭಯಾನಕ ದಿನಗಳ ಭೀಕರತೆಯನ್ನು ಕಣ್ಮುಂದೆ ತರುತ್ತದೆ.
. ''ಬಾಡುತಿದೆ ಸಂಭಂದದ ಅಂದದ ಹೂಗಳು" ಚಿಗುರೊಡೆಯುತ್ತವೆ, ದ್ವೇಷ ಭಾವನೆಗಳ ಚಿಗುರೆಲೆಗಳು""
ಕುಸಿಯುತ್ತಿವೆ ಅನುಬಂಧ, ಅನುಕಂಪಗಳು ""
ಸಂಬಂಧದಲ್ಲಿ ಸುಖ, ಶಾಂತಿ, ಹುಡುಕಿದರೆ ಎಲ್ಲಿ
ಸಿಗುವುದು ನಿನ್ನ ಭಜಿಸಿದೊಡೆ,
ಸುಖಿಯಾಗುವನು ಗುರುರಾಯ!
ಯಾಂತ್ರಿಕ ಜೀವನದ ಭರಾಟೆಯಲ್ಲಿ ಸಂಭಂದಗಳು ನೆಲಕಚ್ಚುತ್ತಿರುವ ಪರಿಸ್ಥಿತಿಯನ್ನು ತಮ್ಮ ವಚನದ ಮೂಲಕ ಹೇಳಿದ್ದಾರೆ.
"ಜನಪ್ರತಿನಿದಿಗಳು ಚುನಾವಣೆಯಲ್ಲಿ
ಭರವಸೆ ಹೇಳಿದ್ದೂ ನೂರಾರು!
ಗೆದ್ದು ಬಂದ ಮೇಲೆ ಏನೂ ಮಾಡಲಿಲ್ಲ ಒಂಚೂರು!
ಏನ್ ಸರ್ ಕೆಲಸ ಅಂತ ಕೇಳಿದರೆ..
ನಾ ಗೆದಿಬೇಕಾದ್ರೆ ಕೊಟ್ಟಿಲೇನಪ್ಪ ಮತದಾರರಿಗೆ ರೂಪಾಯಿ ಸಾವಿರಾರು!
ಅನ್ನುವ ವಚನದ ಸಾಲುಗಳು ನಮ್ಮ ಅಂತರಂಗವನ್ನು ನೇರವಾಗಿ ಆತ್ಮಸಾಕ್ಷಿಯನ್ನು ಬಡಿದೇಬ್ಬಿಸುತ್ತದೆ.
. "ಖಾಲಿ ಕುಳಿತುಕೊಂಡು ಸಮಯವ ಹಾಳುಗೆಡವದಿರು ಮನುಜ ""
ಈ ವಚನ ಮನುಷ್ಯನ ಆಲಸ್ಯವನ್ನು ಎಚ್ಚರಿಸಿ ಕಾಯಕದಲ್ಲಿ ಕ್ರಿಯಾಶೀಲನಾಗುವಂತೆ ಪ್ರೇರಣೆ ನೀಡುತ್ತದೆ.
ಹೀಗೆ ಒಟ್ಟಾಗಿ ಹೇಳುವದಾದರೆ ಶರಣ ಜೀವಿಗಳಾದ ಪಂಪಯ್ಯ ಸ್ವಾಮಿ ಸಾಲಿಮಠರವರ ವಚನಾತರಂಗ ಕೃತಿಯು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ.
ಓಂಕಾರ ಪಾಟೀಲ{ಕಾರ್ಯದರ್ಶಿ
ಗಳು :-ಜಿಲ್ಲಾ ಮಕ್ಕಳ ಸಾಹಿತ್ಯ ಬೀದರ}