ಗಂಡೆದೆಯ ಗುರು ಡಾ.ಚನ್ನಬಸವ

ಗಂಡೆದೆಯ ಗುರು ಡಾ.ಚನ್ನಬಸವ

ಗಂಡೆದೆಯ ಗುರು ಡಾ.ಚನ್ನಬಸವ

ಪುಸ್ತಕ :-ಗಂಡೇದೆಯ ಗುರು ಡಾ. ಚೆನ್ನಬಸವ 

ಲೇಖಕರು:-ದೇಶಾoಶ ಹುಡುಗಿ.

ಪ್ರಕಾಶಕರು:-ಬಸವ ಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ ಭಾಲ್ಕಿ.

ಬೆಲೆ :-೧೦೦ (ನೂರು ರೂಪಾಯಿ)

ಕನ್ನಡದ ಗುಡಿಯಲ್ಲಿ!

ಕನ್ನಡದ ಕಾವಲಿಗ!

ಬಂದೂಕು ಬಡಿಗೆ ಹಿಡಿ!

ಯದ ವೀರ ಧೀರ!

ಕಣ್ಣೊಂದು ಬಸವಣ್ಣ!

ಕನ್ನಡವು ಇನ್ನೊಂದು!

ಕನ್ನಡದ ಕುಲದೈವ!

ಚೆನ್ನಬಸವ

ಈ ಮೇಲಿನ ಮಾತು ಅಕ್ಷರಸಹ ಸತ್ಯವಾದ ನುಡಿ.

೧೨ನೇ ಶತಮಾನದ ಶರಣರು ಕಲ್ಯಾಣ ಕ್ರಾಂತಿಯನಂತರ ಕಲ್ಯಾಣ ನಾಡಿನಲ್ಲಿ ಮತ್ತೊಮ್ಮೆ ಶಿಕ್ಷಣದ ಕ್ರಾಂತಿ ಮಾಡಿದ ಕನ್ನಡದ ಪಟ್ಟದೇವರೆಂದೆ ಹೆಸರಾದ ಹಿರೇಮಠ ಸಂಸ್ಥಾನದ ಪಟ್ಟಾಧಿಕಾರಿ ಪೂಜ್ಯ ಚೆನ್ನಬಸವ ಪಟ್ಟದೇವರು

ಲಿಂಗಯೈಕ್ಯ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು ಸಮಾಜದಲ್ಲಿ ಪ್ರಗತಿಪರ ವಿಚಾರಗಳನ್ನು ಬಿತ್ತುವಂಥ ಸಂಘರ್ಷ ಪೂರ್ಣವಾದ ಕಾರ್ಯವನ್ನು ಕೈಗೊಂಡಿರುವದನ್ನು ದೇಶಾಂಶ ಹುಡಗಿಯವರು ಗಂಡೇದೆಯ ಗುರು ಡಾ. ಚೆನ್ನಬಸವ ಕೃತಿಯಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ.

ಈ ಪುಸ್ತಕವು ಗದ್ಯ-ಪದ್ಯ ಮಿಶ್ರಿತವಾದ ಕೃತಿಯಾಗಿದ್ದು ಶತಾಯುಷಿ ಡಾ. ಚೆನ್ನಬಸವ ಪಟ್ಟದೇವರ ಕನ್ನಡ ಕೈoಕರ್ಯ, ಬಸವಧರ್ಮ ಪ್ರಸಾರ, ಜಾತಿ ನಿರ್ಮೂಲನ ಹೋರಾಟ, ಶುದ್ಧಿ ಸಂಘಟನೆ ಹೋರಾಟ, ಸತ್ಯಾಗ್ರಹ ಅನುಷ್ಠಾನ, ರಜಾಕರ ಹಾವಳಿಯ ಪ್ರತಿಭಟನೆ ಮತ್ತು ಶಿಕ್ಷಣದ ಬಗ್ಗೆ ಅಪ್ಪನವರ ಕಾಳಜಿ ಶ್ರಮದ ಬಗ್ಗೆ ಪುಸ್ತಕದಲ್ಲಿ ವಿವರಿಸಿದ್ದಾರೆ.

ಈ ಪುಸ್ತಕವು ಒಟ್ಟು ೨೧ ಲೇಖನಗಳಿಂದ ಕೂಡಿದ್ದು ಪೂಜ್ಯ ಚನ್ನಬಸವ ಅವರ ಸಮಗ್ರ ಜೀವನ ಹೋರಾಟ ಅವರ ಶ್ರಮದಾನ, ಮುಷ್ಠಿದಾನದ ಹಾಗು ಇಡೀ ಭಾಲ್ಕಿ ಮಠ ಮತ್ತು ಶಾಖಾ ಮಠಗಳ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಮಾಹಿತಿಯು ಗಂಡೇದೆಯ ಗುರು ಡಾ. ಚೆನ್ನಬಸವ ಪುಸ್ತಕದ ಮೂಲಕ ಲೇಖಕರು ಓದುಗರಿಗೆ ಮಾಹಿತಿ ಒದಗಿಸಿದ್ದಾರೆ.

  ವಿಮರ್ಶೆಕಾರರು:- ಓಂಕಾರ ಪಾಟೀಲ(ಕಾರ್ಯದರ್ಶಿಗಳು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.)ಮೊ:-೬೩೬೦೪೧೩೯೩೩