ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಆಳಂದ ಅಫ್ಜಲ್ ಮಶಾಕಬೀ ತಾಹೇರ್ ಅನಸಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಳಂದ ಗ್ರಂಥಾಲಯ ವಿಭಾಗ ಹಾಗೂ ಐ.ಕ್ಯ.ಎ.ಸಿ ವತಿಯಿಂದ ಸ್ಪರ್ದಾತ್ಮಕ ಪರೀಕ್ಷೆಯ ಪುಸ್ತಕ ಪ್ರದರ್ಶನ ಹಾಗೂ ಪದ್ಮಶ್ರೀ ಡಾ ಎಸ್.ಆರ್ ರಂಗನಾಥನ ಇವರ ೧೩೨ನೇ ಜನ್ಮ ದಿನದ ವರ್ಷಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಜಗನ್ನಾಥ ಹುಮ್ನಾಬಾದೆ ನಿವೃತ ಗ್ರಂಥಪಾಲಕರು ಮುಖ್ಯ ಅತಿಥಿಯಾಗಿ ಆಗಮಿಸಿ ಸ್ಪರ್ದಾತ್ಮಕ ಪರೀಕ್ಷೆಯ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಕಾಲೇಜಿನ ಗ್ರಂಥಪಾಲಕರಾದ ಡಾ ವಿನೋದಕುಮಾರ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡಾ ಎಸ್ ಆರ್ ರಂಗನಾಥನ ಅವರ ಜೀವನ ಚತಿತ್ರೆ ಹಾಗೂ ಭಾರತದಲ್ಲಿ ಗ್ರಂಥಾಲಯದ ಅಭಿವೃಧ್ದಿ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಈಗಿನ ಡಿಜಿಟಲ ಯುಗದಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೆಕೆಂದು ವಿವರಿಸಿದರು.
ಕಾಲೇಜಿನ ಗ್ರಂಥಪಾಲಕರಾದ ಡಾ ಅರವಿಂದಕುಮಾರ ಭದ್ರಶೆಟ್ಟಿರವರು ಪ್ರಾಸ್ತಾವಿಕ ಮಾತುಗಳಲ್ಲಿ ಸ್ಪರ್ದಾತ್ಮಕ ಪರೀಕ್ಷೆಯ ಮತ್ತು ಪುಸ್ತಕ ಪ್ರದರ್ಶನವನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅದ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ರವಿಚಂದ್ರ ಜಿ ಕಂಟೆಕುರೆ ವಹಿಸಿಕೊಂಡು ವಿದ್ಯಾರ್ಥಗಳಲ್ಲಿ ಪುಸ್ತಕ ಓದುವ ಹವ್ಯಾಸ ಸ್ಪರ್ದಾತ್ಮಕ ಮನೋಭಾವ ಬೆಳೆಯಬೇಕೆಂದು ತಿಳಿಹೆಳಿದರು.
ಶ್ರೀ ರವಿಂದ್ರ ಗೌಡಗೇರಿ ಕನ್ನಡ ಸಹಾಯಕ ಪ್ರಾದ್ಯಾಕರು ಅತಿಥಿಗಳನ್ನು ಸ್ವಾಗತಿಸಿದರು, ಡಾ ರಮೇಶ ಮಾಳಗಿ ಸಮಜಶಾಸ್ತç ಸಹ ಪ್ರಾದ್ಯಾಪಕರು ವಂದಿಸಿದರು.
ಕು. ಅನಿತಾ ಬಿಎಸ್ಸಿ ಐದನೆಯ ಸಿಮಿಸ್ಟರ ವಿದ್ಯಾರ್ಥಿನಿ ಕಾಯಕ್ರಮ ನಿರುಪಿಸಿದರು.
ಕಾರ್ಯಕ್ರದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಡಾ ಅರವಿಂದ ಅಂಗಡಿ, ಡಾ ದೋಂಡಿಬಾ ನಿಕ್ಕಂ, ಡಾ ಶೋಭಾ ಕಣ್ಣಿ, ಡಾ ಪ್ರಮಿಳಾ ಅಂಬಾರಾಯ, ಶ್ರೀಮತಿ ನಫೀಸ್ ಫಾತಿಮಾ, ಶ್ರೀಮತಿ ಗೀತಾ ಅರ್ಜುನ, ಬಸವರಾಜ ಅಸಂಗಿಹಾಳ, ಶಾಂತಮಲ್ಲಪ್ಪ ಪಾಟೀಲ, ಶರಣು ಭಾವಿ ಮತ್ತು ಅತಿಥಿ ಉಪನ್ಯಾಸಕರು ಉಪಸ್ತಿತರಿದ್ದರು