ಕ್ಯಾನ್ಸರ್:ಭಯ ಬೇಡ ಜಾಗೃತರಾಗಿರಿ ಡಾ ಶಾಂತಲಿಂಗ ನಿಗ್ಗುಡಗಿ

ಕ್ಯಾನ್ಸರ್:ಭಯ ಬೇಡ ಜಾಗೃತರಾಗಿರಿ ಡಾ ಶಾಂತಲಿಂಗ ನಿಗ್ಗುಡಗಿ
ಬದಲಾದ ಜೀವನಶೈಲಿ, ಮನೋಧೋರಣೆಗಳು ಮನುಷ್ಯನನ್ನು ಸ್ವಸ್ಥ ಬದುಕಿನಿಂದ ದೂರ ಉಳಿಯುವಂತೆ ಮಾಡುತ್ತವೆ. ಜೊತೆಗೆ ಅತಿಯಾಗಿ ಬಳಕೆಯಾಗುತ್ತಿರುವ ಆಹಾರ ಸಂರಕ್ಷಕಗಳು, ರಾಸಾಯನಿಕ ಪದಾರ್ಥಗಳು, ಕೃಷಿಯಲ್ಲಿನ ರಸಗೊಬ್ಬರ, ಕೀಟನಾಶಕಗಳು.. ಇವು ಮನುಷ್ಯರಲ್ಲಿ ಕ್ಯಾನ್ಸರ್‌ನಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಲು ಕಾರಣವಾಗುತ್ತವೆ ಎಚ್ ಸಿ ಜಿ ಕಲಬುರ್ಗಿಯ ಹಿರಿಯ ಕ್ಯಾನ್ಸರ್ ತಜ್ಞ ಡಾ ಶಾಂತಲಿಂಗ ನಿಗ್ಗುಡಗಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗದ ನಿರ್ವಹಣೆ, ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ ವಿಷಯದ ಕುರಿತು ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಬಾಯಿ,ಗಂಟಲು,ಕತ್ತಿನ ಕ್ಯಾನ್ಸರ್ ದ ರೋಗಿಗಳು ಹೆಚ್ಚಾಗಿ ಕಾಣಿಸುತ್ತಿವೆ ಎಂದು ಹೇಳಿದರು.
ಅದರಲ್ಲೂ ಮಹಿಳೆಯರಿಗೆ ಕಂಡುಬರುವ ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ 2ನೇ ಅತಿ ದೊಡ್ಡ ಮಾರಕ ಕಾಯಿಲೆಯಾಗಿ ವ್ಯಾಪಿಸಿದೆ. ಈ ಒಂದು ಜೀವಕ್ಕೆ ಮಾರಕವಾಗಿರುವ ಕಾಯಿಲೆ ಬರುವ ಮುಂಚೆ ಕೆಲವೊಂದು ಸೂಚನೆಗಳು ಸಿಗುತ್ತವೆ. ಮಹಿಳೆಯರು ಆ ಸಂದರ್ಭದಲ್ಲಿ ವೈದ್ಯರ ನ್ನು ಭೇಟಿ ಮಾಡಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಕೊಳ್ಳುವುದು ಒಳ್ಳೆಯದು. ಹಾಗಾದ್ರೆ ಯಾವೆಲ್ಲ ಬದಲಾವಣೆಗಳನ್ನು ಮಹಿಳೆಯರು ಗಮನಿಸಬಹುದು ಎಂದು ನೋಡುವುದಾದರೆ ಸ್ತನ ಕ್ಯಾನ್ಸರ್ ಕಂಡು ಬರುವ ಮಹಿಳೆಯರಲ್ಲಿ ಪ್ರಪ್ರಥಮವಾಗಿ ಕಂಡುಬರುವ ಲಕ್ಷಣ ಇದು. ಅಂದರೆ ಸ್ತನಗಳು ಊದಿಕೊಳ್ಳು ವುದು, ಕೆಂಪು ಬಣ್ಣಕ್ಕೆ ತಿರುಗುವುದು, ನಿಪ್ಪಲ್ ಅಥವಾ ಅದರ ಸುತ್ತ ಮುತ್ತ ಚರ್ಮ ಸಿಪ್ಪೆ ಸುಲಿದುಕೊಳ್ಳುವುದು, ಸ್ತನದ ಯಾವು ದಾದರೂ ಕಡೆ ಇದ್ದಕ್ಕಿದ್ದಂತೆ ಚರ್ಮ ಗಟ್ಟಿಯಾದಂತೆ ಕಾಣು ವುದು, ಚರ್ಮದ ಕೆರೆತ ಕಂಡುಬರುವುದು ಇತ್ಯಾದಿ ಸಮಸ್ಯೆಗಳು ಇರುತ್ತವೆ ಎಂದು ಹೇಳಿದರು.
ತುಂಬಾ ಮಹಿಳೆಯರಿಗೆ ಒಂದು ವೇಳೆ ಬ್ರೆಸ್ಟ್ ಕ್ಯಾನ್ಸರ್ ಬರುವು ದಿದ್ದರೆ ದುಗ್ದರಸ ಗ್ರಂಥಿಗಳ ದ್ರವ ಕ್ಯಾನ್ಸರ್ ಜೀವಕೋಶಗಳ ಕಾರಣದಿಂದ ತುಂಬಿಕೊಂಡು ಸ್ತನಗಳು ಊದಿ ಕೊಳ್ಳುತ್ತವೆ ಮತ್ತು ಅಲ್ಲಲ್ಲಿ ಗುಳಿ ಬಿದ್ದಂತೆ ಕಾಣುತ್ತವೆ. ಇದು ಸಹ ಉರಿ ಯುತದ ಕಾರಣದಿಂದ ಉಂಟಾದ ರೋಗ ಲಕ್ಷಣವಾಗಿದೆ.ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಏನೆಂದರೆ ಕ್ಯಾನ್ಸರ್ ನಮ್ಮ ದೇಹದಲ್ಲಿ ಹರಡುವ ಗುಣವನ್ನು ಹೊಂದಿ ರುತ್ತದೆ. ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಕೂಡ ಇದೇ ರೀತಿ ಮಾಡುತ್ತದೆ.
ದೇಹದ ಯಾವ ಭಾಗದ ಸ್ತನ ಕ್ಯಾನ್ಸರ್ ಸಮಸ್ಯೆಗೆ ಒಳಗಾಗಿ ರುತ್ತದೆ ಅದೇ ಭಾಗದಲ್ಲಿ ಅದು ಕಂಕುಳಿನ ವರೆಗೂ ಹರಡಿ ಅಲ್ಲಿರುವ ದುಗ್ಧರಸ ಗ್ರಂಥಿಗಳು ಊದಿ ಕೊಳ್ಳುವ ಹಾಗೆ ಮಾಡುತ್ತದೆ ಎಂದು ಹೇಳಿದರು. ಮಹಿಳೆಯರು ಇಂತಹ ಹಲವಾರು ಲಕ್ಷಣಗಳು ಕಂಡಾಗ ಕೂಡಲೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪ್ರಥಮ ಹಂತದಲ್ಲಿ ಪಡೆದುಕೊಂಡರೆ ಕ್ಯಾನ್ಸರ್ ರೋಗದಿಂದ ಮುಕ್ತಿಯಾಗಬಹುದು ಆದರೆ ಕೊನೆಯ ಹಂತದಲ್ಲಿ ರೋಗಿಗಳು ಬಂದರೆ ಅಪಾಯವನ್ನು ತಡೆಗಟ್ಟುವುದು ಅಸಾಧ್ಯ ಎಂದು ಹೇಳಿದರು.
ನಮ್ಮ ಭಾಗದ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವ ಬಾಯಿ ಗಂಟಲು ಕ್ಯಾನ್ಸರ್ ಲಕ್ಷಣಗಳು ಈ ರೀತಿಯಾಗಿದ್ದು ಸಾಮಾನ್ಯವಾಗಿ ದೂಮ್ರಪಾನದಿಂದ ಹೆಚ್ಚಾಗಿ ಕಂಡುಬರುತ್ತದೆ
ಆರಂಭಿಕ ಹಂತಗಳಲ್ಲಿ, ಗಂಟಲು ಕ್ಯಾನ್ಸರ್ ಯಾವುದೇ ಲಕ್ಷಣಗಳನ್ನು ಉಂಟುಮಾಡದಿರಬಹುದು.
ನಿಮಗೆ ಲಕ್ಷಣಗಳು ಇದ್ದಲ್ಲಿ, ಅವುಗಳು ಇವುಗಳನ್ನು ಒಳಗೊಂಡಿರಬಹುದು:
ಕುತ್ತಿಗೆ ಅಥವಾ ಗಂಟಲಿನಲ್ಲಿ ಒಂದು ಗಡ್ಡೆ
ಗಂಟಲು ನೋವು ಅಥವಾ ಕೆಮ್ಮು ಕಡಿಮೆಯಾಗುವುದಿಲ್ಲ
ಗಟ್ಟಿಯಾದ ಧ್ವನಿ
ನುಂಗಲು ತೊಂದರೆ
ರಕ್ತದೊಂದಿಗೆ ಕಫ (ಲೋಳೆ) ಕೆಮ್ಮುವುದು
ನಿರಂತರ ಅಥವಾ ಪುನರಾವರ್ತಿತ ಮೂಗು ಕಟ್ಟಿಕೊಳ್ಳುವಿಕೆ ಅಥವಾ ಮೂಗಿನ ರಕ್ತಸ್ರಾವ
ವಿವರಿಸಲಾಗದ ತೂಕ ನಷ್ಟ ಇವೆಲ್ಲವುಗಳನ್ನು ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ತೆಗೆದುಕೊಂಡು ಅಮೂಲ್ಯ ಜೀವನ ಉಳಿಸಿಕೊಳ್ಳಬಹುದು ಆದರೆ ಕೊನೆಯ ಹಂತದಲ್ಲಿ ಬಂದು ಜೀವನಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಔಷಧಿ ವಿಭಾಗ ಮುಖ್ಯಸ್ಥರಾದ ಡಾ ಸುರೇಶ್ ಹರಸೂರ್ ಮಾತನಾಡಿ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನ(February 4 World Cancer Day) ವನ್ನು ಆಚರಣೆ ಮಾಡಲಾಗುತ್ತದೆ. ಮನುಷ್ಯನಿಗೆ ಶತ್ರುವಿನ ರೀತಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಗಾಳಿಯಲ್ಲಿ ಬಲೂನ್ ಗಳನ್ನು ಹಾರಿ ಬಿಡಲಾಯಿತು.
ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ ಆನಂದ ಗಾರಂಪಳ್ಳಿ ಹಾಗೂ ಅನೇಕ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.