"ಒಂದು ದಿನದ ಭಾಷಾ ಕಾರ್ಯಗಾರ"

"ಒಂದು ದಿನದ ಭಾಷಾ ಕಾರ್ಯಗಾರ"

"ಒಂದು ದಿನದ ಭಾಷಾ ಕಾರ್ಯಗಾರ"  

ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಂದ ಮತ್ತು ಐಕ್ಯೂ.ಎ.ಸಿ ಸಹಯೋಗದ ಅಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಭಾಷಾ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರವನ್ನು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಡಾ. ಶಿವಶರಣಪ್ಪ ಗೊಳ್ಳೆ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಸಾಹಿತ್ಯ ಮತ್ತು ಭಾಷಾ ಕಲಿಕೆಯ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಎಂಬ ವಿಷಯವನ್ನು ಕುರಿತು ಸಮಗ್ರವಾಗಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ. ರಾಜೇಂದ್ರ ಸಿಂಧೆ,ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ದವಲಪ್ಪ ಬಿ.ಹೆಚ್ ಉಪಸ್ಥಿತರಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾದ ಡಾ. ಗಣೇಶ ಪವಾರ ರವರು ಸಂಶೋಧನಾ ವಿಧಾನಗಳು (ಅನುಸಂಧಾನ) ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸ್ತ್ರಿಯ ಕನ್ನಡ ಕೇಂದ್ರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಬಿ. ಬಿ ಪೂಜಾರಿ ಅವರು ಭಾಷಾ ಅನುವಾದ ಪ್ರಕ್ರಿಯೆಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಲಬುರಗಿಯ ಜ್ಞಾನಜ್ಯೋತಿ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ.ಎನ್. ಎಸ್ ಹಿರೇಮಠ್ ರವರು ಸ್ಪರ್ಧಾತ್ಮಕ ಪರೀಕ್ಷೆಗಳು ಎಂಬ ವಿಷಯದ ಬಗ್ಗೆ ಸಮಗ್ರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ನಾರಾಯಣ ರೋಲೇಕರ್, ಡಾ.ಸುರೇಂದ್ರಕುಮಾರ ಕೆರಮಗಿ,ಡಾ. ಶಾರದಾ ಜಾಧವ, ಡಾ. ಅನುಸೂಯ ಗಾಯಕವಾಡ, ಡಾ. ವಿಜಯಲಕ್ಷ್ಮಿ ಪಾಟೀಲ್ ಡಾ.ಭಾಗ್ಯಲಕ್ಷ್ಮಿ,ಡಾ. ಬಲಭೀಮ ಸಾಂಗ್ಲಿ,ಡಾ. ನಾಗಪ್ಪ ಗೋಗಿ, ಡಾ ವಿಜಯಕುಮಾರ ಗೋಪಾಳೆ, ಡಾ. ಶಾಮಲಾಸ್ವಾಮಿ, ಡಾ. ಮಿಲನ್ ಕಾಂಬಳೆ,ಡಾ. ಪ್ರಭುನಾರಾಯಣ ಬಡಿಗೇರ, ಡಾ.ಮಲ್ಲಿಕಾರ್ಜುನ ಬುಕ್ಕಾ, ಡಾ. ನಂದುಕುಮಾರ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಾದ ಶುಭ ಪ್ರಾರ್ಥಿಸಿದರು. ಡಾ. ಭಾಗ್ಯಲಕ್ಷ್ಮಿ ಸ್ವಾಗತಿಸಿದರು. ಡಾ. ಸುರೇಂದ್ರಕುಮಾರ ಕೆರಮಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ.ಬಲಭೀಮ ಸಾಂಗ್ಲಿ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಬುಕ್ಕಾ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಿಬ್ಬಂದೇತರ ವರ್ಗದವರು ಹಾಗೂ ಕಾಲೇಜಿನ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.