ಶ್ರಮಕ್ಕೆ ಪ್ರತಿಫಲ ಕೇಳದ ಏಕೈಕ ಜೀವಿ ತಾಯಿ: ಡಾ.ಜ್ಯೋತಿಲತಾ ತಡಿಬಿಡಿಮಠ.

ಶ್ರಮಕ್ಕೆ ಪ್ರತಿಫಲ ಕೇಳದ ಏಕೈಕ ಜೀವಿ ತಾಯಿ: ಡಾ.ಜ್ಯೋತಿಲತಾ ತಡಿಬಿಡಿಮಠ.

ಶ್ರಮಕ್ಕೆ ಪ್ರತಿಫಲ ಕೇಳದ ಏಕೈಕ ಜೀವಿ ತಾಯಿ: ಡಾ.ಜ್ಯೋತಿಲತಾ ತಡಿಬಿಡಿಮಠ.

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ನಾಲ್ಕನೆಯ ದಿನದ "ತಾಯಿಗೊಂದು ನಮನ" ಹಾಗೂ ಮಮತೆಯ ಮಡಿಲಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಾಗಿ ಭಾಗವಹಿಸಿದ ಡಾ.ಜ್ಯೋತಿಲತಾ ತಡಿಬಿಡಿಮಠ ನಿಷ್ಕಲ್ಮಶ ಮನಸ್ಸಿನ ತಾಯಿ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಅತ್ತೆ ತಾಯಿಯಾದರೆ ಸೊಸೆ ಮಗಳಾದರೆ ಮನೆ ಸ್ವರ್ಗವಾಗುವದು ಎಂದರು.

ಕಾರ್ಯಕ್ರಮದಲ್ಲಿ ಮಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಪೂರ್ಣಿಮಾ ನಮೋಶಿಯವರು ಮಾತನಾಡುತ್ತಾ ನಾವು ಎಂದಿಗೂ ತಾಯಿ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು .ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ದಿನದಿಂದ ದಿನಕ್ಕೆ ಹೆಚ್ಚು ಸ್ವಾರ್ಥಿಗಳಾಗುತ್ತಿದ್ದೆವೆ ಸಂಸ್ಕಾರ ಮರೆಯುತ್ತಿದ್ದೆವೆ ಇವತ್ತು ಕೇವಲ ತಾಯಿ ಮಾತ್ರವಲ್ಲದೆ ಪಾಲಕರಿಗೆ ಗೌರವ ನೀಡುವುದು ಮಕ್ಕಳ ಆದ್ಯ ಕರ್ತವ್ಯ ಎಂದ ಅವರು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ ಎಂದರು.ಅಕ್ಕಮಹಾದೇವಿ ವಿಶ್ವವಿದ್ಯಾಲಯದ ರಾ.ಸೇ.ಯೋ ನೋಡಲ್ ಅದಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಸರ್ವರನ್ನು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ,ಗೋದಾವರಿ ರಾಜಾ ಭೀಮಳ್ಳಿ,ಪುಷ್ಪಾ ಉದಯಕುಮಾರ್ ಚಿಂಚೋಳಿ,ಡಾ.ನೀತಾ .ಎಸ್.ಹರವಾಳ,ಡಾ.ರೇಣುಕಾ ಎಮ್ ರಾಂಪುರೇ,ಶಿವಲೀಲಾ ಎ.ಮರಗೋಳ,ಪಲ್ಲವಿ ಕಿರಣ ದೇಶಮುಖ, ಉಮಾ ಆರ್.ಕೊಂಡಾ, ಶ್ರೀಮತಿ ಉಮಾ ರೇವುರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ವೀಣಾ ಹೊನಗುಂಟಿಕರ್ ಅವರು ವಹಿಸಿಕೊಂಡಿದ್ದರು.ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ರೇಣುಕಾ ಹೆಚ್ ,ಕುಮಾರಿ ವಿಂದ್ಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು,ಕುಮಾರಿ ನಂದಿನಿ ನಿರೂಪಿಸಿದರು.

ಬಾಕ್ಸ ಐಟಮ್.

ನಾನು ಓರ್ವ ಶಿಕ್ಷಕಿ ನನ್ನ ಮಗಳ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೆ ಎನೋ ತಾಯಂದಿರ ಪಾದ ಪೂಜೆ ಕಾರ್ಯಕ್ರಮ ಇದೇನೊ ಅಂದುಕೊಂಡಿದ್ದೆ ಆದರೆ ಇಲ್ಲಿ ಬಂದ ನಂತರ ನನಗೆ ಅನ್ನಿಸಿದ್ದು ಕಾರ್ಯಕ್ರಮಕ್ಕೆ ಬರದಿದ್ದರೆ ಎಂತಹ ದೊಡ್ಡ ತಪ್ಪು ಮಾಡುತ್ತಿದ್ದೆ ಎಂದು .

ಮಗಳ ಹೆಸರಿನಲ್ಲೊಂದು ಮರ ಎಂಬ ವಿನೂತನ ಕಾರ್ಯಕ್ರಮದ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಇಂತಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅವಶ್ಯವಾಗಿ ಬೇಕಾಗಿವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡು ರಾ.ಸೇ.ಯೋ.ಶಿಬಿರದ ಈ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಐ.ಕೆ.ಪಾಟೀಲ,ಡಾ.ಮೋಹನರಾಜ ಪತ್ತಾರ,ಡಾ.ಪ್ರೇಮಚಂದ್ ಚವ್ಹಾಣ,ಡಾ.ಸುಭಾಶ ದೊಡ್ಡಮನಿ,ಡಾ.ಜ್ಯೋತಿಪ್ರಕಾಶ ದೇಶಮುಖ,ಶ್ರೀಮತಿ ಸುಷ್ಮಾ ಕುಲಕರ್ಣಿ, ಶ್ರೀಮತಿ ಶಿವಲಿಲಾ ಧೋತ್ರೆ ಹಾಗೂ ಬೋಧಕ- ಬೋಧಕೆತರ ಸಿಬ್ಬಂದಿ ಭಾಗವಹಿಸಿದ್ದರು ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಐ.ಕೆ.ಪಾಟೀಲ ತಿಳಿಸಿದ್ದಾರೆ.