ಸಮ್ಮೇಳನ ಯಶಸ್ವಿಗೆ ಕೃತಜ್ಞತೆ
ಸಮ್ಮೇಳನ ಯಶಸ್ವಿಗೆ ಕೃತಜ್ಞತೆ
ಶಹಾಬಾದ: ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಸಹಕರಿಸಿದ ಸಮ್ಮೇಳನದ ಸರ್ವಾಧ್ಯಕ್ಷರಾದ ಎಚ್ .ಬಿ.ತೀರ್ಥ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಸವರಾಜ ಮತ್ತಿಮಡು ಹಾಗೂ ತಹಶೀಲ್ದಾರ ಜಗದೀಶ ಚೌರ ಸೇರಿದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಸ್ವಚ್ಚತೆಯನ್ನ ಕಾಪಾಡಿದ ನಗರ ಸಭೆ ಪೌರ ಕಾರ್ಮಿಕರಿಗೆ, ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ ಪೋಲಿಸ್ ಇಲಾಖೆ, ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ, ಸಮ್ಮೇಳನದ ವಿವಿಧ ಸಮಿತಿ ಸದಸ್ಯರಿಗೆ, ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ನಗರದ ವ್ಯಾಪಾರಸ್ಥರು ನಗರದ ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳ ಕನ್ನಡಾಭಿಮಾನಿಗಳಿಗೆ ಅನಂತ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಕೋಬಾಳ ತಿಳಿಸಿದ್ದಾರೆ.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ