ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮ

ನಾಗರಾಜ್ ದಂಡಾವತಿ ವರದಿ ಶಹಾಬಾದ್: ಗೋಳಾ(ಕೆ) ಗ್ರಾಮದ ಅಭಿವೃದ್ಧಿಗೆ ಈಗಾಗಲೇ 2.80 ಕೋಟಿ ರೂ. ನೀಡಿದ್ದು,

ಅದರಲ್ಲಿ ಸಮುದಾಯ ಭವನ, ವಿವಿಧ ರಸ್ತೆಗಳ ಸುಧಾರಣೆ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ಗೋಳಾ(ಕೆ) ಗ್ರಾಮದಲ್ಲಿ ಭಾನುವಾರ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಸರ್ವರಿಗೂ ಅನುಕೂಲವಾಗಲು ಸಮುದಾಯ ಭವನ ಬೇಕು ಎಂದು ಶ್ರೀ ಸಿದ್ದಲಿಂಗ ಸ್ವಾಮಿಗಳು ಹೇಳಿದ್ದರು. ಅವರ ಮಾತಿನಂತೆ 50 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಗ್ರಾಮಗಳ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು. ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಶರಣಗೌಡ ಪಾಟೀಲ್, ನಿಂಗಣ್ಣ ಹುಳಗೋಳ, ಬಸವರಾಜ ಮಾಲಿಪಾಟೀಲ್, ನಾಗರಾಜ ಮೇಲಗಿರಿ, ವಿಶ್ವಾರಾಧ್ಯ ದಿಡ್ಡಿ, ರಜನಿಕಾಂತ ಶೃಂಗೇರಿ, ಮಿರಾಜುದ್ದಿನ್, ಅರ್ಜುನ್ ಚೌಗುಲೆ, ವಿಜಯಕುಮಾರ ಚವ್ಹಾಣ್, ಅಲಿ ಪಟೇಲ್‌, ಭೀಮರಾವ ಸಾಳೊಂಕೆ, ವಿಜಯಾನಂದ ಮಾಣಿಕ, ಮರಲಿಂಗ ಗಂಗಬೋ. ಸುಷ್ಮಾ ಗಂಗಬೋ, ರಾಜೇಶ ಯನಗುಂಟಿಕರ, ದಿನೇಶ ಗೌಳಿ, ಸಿದ್ದರಾಮ ಕುಸಾಳೆ, ಅಮರ ಕೋರೆ ಇತರರಿದ್ದರು. ಅಣವೀರ ಇಂಗಿನಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಅರುಣ ಪಟ್ಟಣಕರ ಸ್ವಾಗತಿಸಿದರು. ಬಸವರಾಜ ಬಿರಾದಾರ ನಿರೂಪಣೆ ಮಾಡಿದರು.

ಗೋಳಾ(ಕೆ) ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಅಣವೀರ ಇಂಗಿನಶೆಟ್ಟಿ, ಶರಣಗೌಡ ಇತರರಿದ್ದರು.