ಎಲ್‌ಎಲ್‌ಎಫ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ವಿತರಣಾ ಕೈಂಕರ್ಯಕ್ಕೆ ಶ್ಲಾಘನೆ,

ಎಲ್‌ಎಲ್‌ಎಫ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ವಿತರಣಾ ಕೈಂಕರ್ಯಕ್ಕೆ ಶ್ಲಾಘನೆ,

ಎಲ್‌ಎಲ್‌ಎಫ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ವಿತರಣಾ ಕೈಂಕರ್ಯಕ್ಕೆ ಶ್ಲಾಘನೆ,

ಕ್ರೀಡೆಗಳು ಬೌದ್ಧಿಕ ಮಟ್ಟ ಹೆಚ್ಚಿಸಲು ಸಹಕಾರಿ: ಸಚಿವ ಪ್ರಿಯಾಂಕ್ ಖರ್ಗೆ

ಚಿತ್ತಾಪುರ:ಕ್ರೀಡೆಗಳ ಮೂಲಕ ಕೇವಲ ದೈಹಿಕ ಸಮರ್ಥತೆ ರೂಪುಗೊಳ್ಳದೇ ಬೌದ್ಧಿಕ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಬಾಪುರಾವ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ಅಶೋಕ ಲೇಲ್ಯಾಂಡ್ ಹಾಗೂ ಲರ್ನಿಂಗ್ ಲಿಂಕ್ ಫೌಂಡೇಶನ್ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಆಟ ನನ್ನ ಹಕ್ಕು ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯ ಅಡಿಯಲ್ಲಿ ಚಿತ್ತಾಪುರ ತಾಲೂಕಿನ ೨೪೨ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡುತ್ತಿರುವುದು ಅತ್ಯಂತ ಪ್ರಶಂಸನಾರ್ಹವಾಗಿದೆ. ಸಾಮಗ್ರಿಗಳ ಜತೆಗೆ ದೈಹಿಕ ಶಿಕ್ಷಕರು, ಕೋಚ್ ಶಿಕ್ಷಕರು ಸಹ ವಿದ್ಯಾರ್ಥಿಗಳಿ ಕ್ರೀಡಾ ಶಿಕ್ಷಣ ನೀಡುತ್ತಿದ್ದಾರೆ. ಇದು ಕೇವಲ ಕ್ರೀಡಾ ಸಾಮಗ್ರಿಗಳ ವಿತರಣೆಯ ಕಾರ್ಯಕ್ರಮವಾಗಿರದೇ ೨೬,೦೦೦ ಮಕ್ಕಳ ಕ್ರೀಡಾ ಭವಿಷ್ಯ ರೂಪಿಸುವ ಕಾರ್ಯಕ್ರಮವಾಗಲಿದೆ ಎಂದು ಆಶಿಸಿದರು.

ಕ್ರೀಡೆಗಳಿಗೆ ಅಗತ್ಯವಾದ ಸ್ಪೂರ್ತಿದಾಯಕ ಕೆಲಸಗಳು ಆಗಬೇಕು. ಕ್ರೀಡೆಗಳಿಂದ ನಾಯಕತ್ವ ರೂಪುಗೊಳ್ಳುತ್ತದೆ. ಇದಕ್ಕೆ ತಕ್ಕದಾದ ವಾತಾವರಣ ನಿರ್ಮಾಣ ವಾಗುತ್ತದೆ. ಜಿಲ್ಲೆಯ ಶಾಲೆಗಳಿಗೆ ಆಟದ ಮೈದಾನ ನಿರ್ಮಾಣ ಮಾಡಲು ಅಧಿಕಾರಿಗಳು ರೂಪರೇಷ ತಯ್ಯಾರಿಸಬೇಕು. ಅದಕ್ಕೆ ಬೇಕಾಗುವ ಹಾಗೂ ಕ್ರೀಡಾ ಸಾಮಗ್ರಿ ಒದಗಿಸಲು ಸೇರಿದಂತೆ ಕ್ರೀಡೆಗೆ ಸಂಬAಧಿಸಿದ ಕಾರ್ಯಕ್ರಮ ರೂಪಿಸಿದರೆ ಅದಕ್ಕೆ ತಗುಲುವ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಅಭಿವೃದ್ಧಿಗೆ ತಾವು ಅವಿರತ ಶ್ರಮ ವಹಿಸುತ್ತಿರುವುದಾಗಿ ಹೇಳಿದ ಪ್ರಿಯಾಂಕ್, ಚಿತ್ತಾಪುರದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ತಾಲೂಕು ಕ್ರೀಡಾ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಆಕಾಶ ಕಲ್ಯಾಣ ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಯಲ್ಲಿ ೮೯೩ ಹಾಗೂ ಪೌಢ ಶಾಲೆಯಲ್ಲಿ ೨೩೧ ದೈಹಿಕ ಶಿಕ್ಷಕರಿದ್ದು ಇನ್ನೂ ೩೧೦ ದೈಹಿಕ ಶಿಕ್ಷಕರ ಕೊರತೆ ಇದೆ. ಕೇವಲ ದೈಹಿಕ ಶಿಕ್ಷಕರಲ್ಲದೇ ಬೇರೆ ಬೇರೆ ವಿಷಯಗಳ ಶಿಕ್ಷಕರ ಕೊರತೆ ಇದ್ದು ಈ ಕೊರತೆ ನೀಗಿಸಲು ಹತ್ತು ಸಾವಿರ ಶಿಕ್ಷಕರ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಸಂಸ್ಥೆಯ ನಿರ್ದೇಶಕ ಅನಿಲ್ ಕುಡಂಬಲ್ ಮಾತನಾಡಿದರು.

ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್.ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯ್ತುಕ್ತ ಪ್ರಭು ರೆಡ್ಡಿ, ಡಿಡಿಪಿಐ ಸೂರ್ಯಕಾಂತ ಮದಾನಿ, ತಹಸೀಲ್ದಾರ ನಾಗಯ್ಯ ಹಿರೇಮಠ, ಬಿಇಓ ಶಶಿಧರ ಬಿರಾದಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ತಾಪಂ ಇಓ ಅಕ್ರಂ ಪಾಷಾ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಎಲ್‌ಎಲ್‌ಎಫ್ ಉಪಾಧ್ಯಕ್ಷ ಗಿರೀಶ್, ಅಶೋಕ ಲೇಲ್ಯಾಂಡ್ ವಿಭಾಗೀಯ ನಿರ್ದೇಶಕ ವೆಂಕಟಸುಬ್ರಮಣೀಯA, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ರಮೇಶ ಮರಗೋಳ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ, ತಿರುಪತಿ, ಗುರಪ್ಪ, ಸೇರಿದಂತೆ ಇತರರಿದ್ದರು.

ಶರಣಪ್ಪ ಅಬ್ಬಿಗೇರ್ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಣೆ ಮಾಡಿದರು. ಸಂತೋಷಕುಮಾರ ಪಸಾರ ವಂದಿಸಿದರು.