ಕ್ಷೇತ್ರದಲ್ಲಿ ಬೋಗಸ್ ಅಡಿಗಲ್ಲುಗಳ ಪಟ್ಟಿ ಬೆಳೆದಿದ್ದೆ ಬೆಳೆದಿದ್ದು, ಶಾಸಕರೇ ಕೆಡಿಪಿ ಸಭೆ ಯಾವಾಗ : ಶರಣು ಪಾಟೀಲ ಮೋತಕಪಳ್ಳಿ

ಕ್ಷೇತ್ರದಲ್ಲಿ ಬೋಗಸ್ ಅಡಿಗಲ್ಲುಗಳ ಪಟ್ಟಿ  ಬೆಳೆದಿದ್ದೆ ಬೆಳೆದಿದ್ದು,  ಶಾಸಕರೇ ಕೆಡಿಪಿ  ಸಭೆ ಯಾವಾಗ : ಶರಣು ಪಾಟೀಲ ಮೋತಕಪಳ್ಳಿ

ಕ್ಷೇತ್ರದಲ್ಲಿ ಬೋಗಸ್ ಅಡಿಗಲ್ಲುಗಳ ಪಟ್ಟಿ ಬೆಳೆದಿದ್ದೆ ಬೆಳೆದಿದ್ದು, 

ಶಾಸಕರೇ ಕೆಡಿಪಿ ಸಭೆ ಯಾವಾಗ : ಶರಣು ಪಾಟೀಲ ಮೋತಕಪಳ್ಳಿ 

ಚಿಂಚೋಳಿ: ಎರಡನೇ ಬಾರಿಗೆ ಚಿಂಚೋಳಿ ಶಾಸಕರಾಗಿ ಆಯ್ಕೆಯಾಗಿರುವ ಡಾ. ಅವಿನಾಶ ಜಾಧವ ಅವರು ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆ ಏನು ? ಚಿಂಚೋಳಿ ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು? ಕ್ಷೇತ್ರದ ಅಭಿವೃದ್ಧಿಗಾಗಿ ಎಷ್ಟು ಬಾರಿ ಕೆಡಿಪಿ ನಡೆಸಿದ್ದೀರೇ ಎನ್ನುವುದು ಶಾಸಕರು ಆತ್ಮಾವಲೋಕನ ಮಾಡಿಕೊಂಡು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡಲಿ ಎಂದು ಚಿಂಚೋಳಿ ಕಾಂಗ್ರೆಸ್ ವಕ್ತಾರ ಶರಣುಪಾಟೀಲ್ ಮೋತಕಪಳ್ಳಿ ಅವರು ಆಗ್ರಹಿಸಿದ್ದಾರೆ.

 ಅವರು ಪತ್ರಿಕಾ ಹೇಳಿಕೆ ನೀಡಿದವರು,

ಶಾಸಕರು ಚಿಂಚೋಳಿಯಲ್ಲಿ 2024 ಜುಲೈ 12 ರಂದು ಜರುಗಿಸಿರುವ ಕೊನೆಯ ಕೆಡಿಪಿ ಸಭೆ ಆಗಿದೆ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲು ನಿಮ್ಮಿಂದ ಆಗಿಲ್ಲ. ಶಾಸಕರೇ ಕ್ಷೇತ್ರಕ್ಕೆ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಮಾಡಿದ್ದೀರಿ. ಇದಕ್ಕೆ ಜೀವಂತ ಉದಾಹರಣೆ ತಾಲೂಕ ಒಳಾಂಗಣ ಕ್ರೀಡಾಂಗಣ! ಅಷ್ಟೇ ಅಲ್ಲ ನೂತನ ತಹಸೀಲ್ ಕಚೇರಿಗೆ ಅನುದಾನ ಕೊಟ್ಟಿದ್ದು, ಕಾಂಗ್ರೆಸ್ ಸರಕಾರ. ಅದಕ್ಕೆ ಪೀಠೋಪಕರಣ ತರಲಿಕ್ಕೆ ನಿಮ್ಮಿಂದ ಸಾಧ್ಯ ಆಗಲಿಲ್ಲ. ಇವತ್ತಿಗೂ ಪಾಳು ಬಿದ್ದಿದೆ. ಮತ್ತೆ ರಿಪೇರಿ ಕಾರ್ಯ ಇಡುವ ಹಂತಕ್ಕೆ ತಲುಪಿದೆ. ಶಾಪಿಂಗ್ ಮಾಲಗೆ ಕೊಟ್ಟ ಅನುದಾನದ ಸದ್ಬಳಕೆಯ ಕಥೆ ಎಲ್ಲಿಗೆ ಬಂದಿದೆ ಅನ್ನುವದು ಸ್ಥಳೀಯ ಜನ ನೋಡ್ತಾ ಇದ್ದಾರೆ. ಕ್ಷೇತ್ರದಲ್ಲಿ ಬೋಗಸ್ ಅಡಿಗಲ್ಲುಗಳ ಪಟ್ಟಿ ಬೆಳೆದಿದ್ದೆ ಬೆಳೆದಿದ್ದು, ತಮ್ಮದೇ ಪಕ್ಷದ ಮುಖಂಡರು ಶಾಸಕರನ್ನು ಹುಡುಕಿ ಕೊಡಿ ಎಂದು ಮಾಧ್ಯಮಗಳಲ್ಲಿ ಕೇಳುವಾಗ ಯಾವ ಮುಖ ಇಟ್ಕೊಂಡು ಸಚಿವ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತು ಆಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಖರ್ಗೆ ಅವರು ಕೆಡಿಪಿ ಸಭೆ ಮಾಡಿಲ್ಲ. ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸ್ತಾರೆ, ಅಂತ ಹೇಳುವ ನೀವು. ಮೊದಲು ನೀವು ಎಷ್ಟು ದಿನ ಚಿಂಚೋಳಿಯಲ್ಲಿ ವಾಸ್ತವ್ಯ ಮಾಡಿದ್ದೀರಿ? ತಾವು ಚಿಂಚೋಳಿಯಲ್ಲಿ ಕೆಡಿಪಿ ಸಭೆ ನಡೆಸಿ 11 ತಿಂಗಳು ಆಯ್ತು. ಕೆಡಿಪಿ ಸಭೆ ಎಷ್ಟು ದಿನಕ್ಕೊಮ್ಮೆ ಮಾಡಬೇಕು. ಸಚಿವ ಪ್ರಿಯಾಂಕ ಖರ್ಗೆ ಅವರ ಇಲಾಖೆಗಳು ಯಾವುವು? ಆ ಇಲಾಖೆಗಳ ವ್ಯಾಪ್ತಿ ಆಳ ಅಗಲ ಎಷ್ಟಿದೆ ಅನ್ನುವದು ಶಾಸಕರು ಮೊದಲು ತಿಳಿಯುವದು ಸೂಕ್ತ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಖರ್ಗೆ ಅವರ ಇಲಾಖೆಗಳಡಿ ಕೆಲಸ ಮಾಡ್ತಾರೆ. ಸರಕಾರ ಜನಪರವಾಗಿ ಕೆಲಸ ಮಾಡಬೇಕಾದರೆ ಸಚಿವರು ಹೇಗೆ ದುಡಿಯಬೇಕು ಎನ್ನುವುದನ್ನು ಪ್ರಿಯಾಂಕ ಖರ್ಗೆ ಅವರನ್ನು ನೋಡಿ ಕಲಿಯಬೇಕು. ಯಾರನ್ನೋ ಖುಷಿ ಪಡಿಸಲಿಕ್ಕೆ ಶಾಸಕರು ಬಲಿಪಶು ಆಗಿ, ಈ ರೀತಿ ಹೇಳಿಕೆ ಕೊಡುವದು ಸೂಕ್ತವಲ್ಲ. ಸ್ವಂತ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆ ಇರುವ ಯಾವ ಶಾಸಕರು ತಮ್ಮದೇ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಹೀಗೆ ನಿರಾಧಾರ ಅಸಂಬದ್ಧ ಹೇಳಿಕೆ ಕೊಡುವುದಿಲ್ಲ. ಸಚಿವ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಮೊದಲ ಜನ ಸ್ಪಂದನ ಕಾರ್ಯಕ್ರಮ ನಡೆಸಿದ್ದು, ಚಿಂಚೋಳಿಯಲ್ಲಿ. ಅವರು ಯಾವತ್ತೂ ಚಿಂಚೋಳಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ್ ಅವರು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡುವದು ಸೂಕ್ತ. ಕೂಡಲೇ ಕೆಡಿಪಿ ಸಭೆ ಕರೆದು ಕ್ಷೇತ್ರದ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಕಾರಾತ್ಮಕ ದಾರಿಯಲ್ಲಿ ಸರಕಾರದೊಂದಿಗೆ ಸ್ಪಂದಿಸಲು ಶರಣು ಪಾಟೀಲ್ ಮೋತಕಪಳ್ಳಿ ಅವರು ಶಾಸಕ ಡಾ. ಅವಿನಾಶ ಜಾಧವ್ ಅವರನ್ನು ಆಗ್ರಹಿಸಿ, ಒತ್ತಾಯಿಸಿದ್ದಾರೆ.