ನಾಳೆ ಸಗರ ಕಾವೇರಿ ಶಾಲಾ ವಾರ್ಷಿಕೋತ್ಸವ

ನಾಳೆ ಸಗರ ಕಾವೇರಿ ಶಾಲಾ ವಾರ್ಷಿಕೋತ್ಸವ
ಶಹಪುರ : ತಾಲೂಕಿನ ಸಗರ ಗ್ರಾಮದ ಕಾವೇರಿ ವಿದ್ಯಾ ಮಂದಿರದ 17ನೇ ವರ್ಷದ ಶಾಲಾ ವಾರ್ಷಿಕೋತ್ಸವ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ದೇವೇಂದ್ರಪ್ಪ ಹಡಪದ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಹಿರೇಮಠದ ಪರಮಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು ಹಾಗೂ ನಾಗಠಾಣ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಹಿರಿಯ ಸಾಹಿತಿ ಲಿಂಗಣ್ಣ ಪಡಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ,
ಹಿರಿಯ ಮುಖಂಡರಾದ ಮಹಾಂತಗೌಡ ಸುಬೇದಾರ,ಸಿದ್ದಲಿಂಗಣ್ಣ ಆನೆಗೊಂದಿ,ಖಾಸಗಿ ಶಾಲಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಆರ್.ಚನ್ನಬಸು ವನದುರ್ಗ, ರಾಜಶೇಖರ್ ನಗನೂರ,ಅಡಿವಪ್ಪ ಜಾಕಾ,ತಿರುಪತಿ ಹತ್ತಿಕಟಗಿ,ಗಿರಿಯಪ್ಪ ಗೌಡ ಕಟ್ಟಿಮನಿ,ರಾಮರಾವ್ ಕುಲಕರ್ಣಿ, ಶೇಖರಪ್ಪ ಅರಕೇರಿ,ವಿನೋದ್ ದೇವರಗುಡಿ,ವಾಸುದೇವ ವಠಾರ, ಪತ್ರಕರ್ತ ಬಸವರಾಜ ಶಿನ್ನೂರ,ಮುಖ್ಯ ಅತಿಥಿಗಳಾಗಿ ಭಾಗವಹಿಸುವರು,ನಂತರ ನಾಡಿನ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ನಂತರದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವು.