ಶೇರು ಮಾರುಕಟ್ಟೆಯ ಹೂಡಿಕೆ ಹೆಸರಿನಲ್ಲಿ ಮೋಸ ತಡೆಗಟ್ಟಲು ಕನ್ನಡ ಭೂಮಿ ಆಗ್ರಹ
ಶೇರು ಮಾರುಕಟ್ಟೆಯ ಹೂಡಿಕೆ ಹೆಸರಿನಲ್ಲಿ ಮೋಸ ತಡೆಗಟ್ಟಲು ಕನ್ನಡ ಭೂಮಿ ಆಗ್ರಹ
ಕಲಬುರಗಿ: ಕಲಬುರಗಿಯಲ್ಲಿ ರಾಜಾರೋಷವಾಗಿ ಕೆಲವು ಲೇವಾದೇವಿ ಸಂಸ್ಥೆಗಳಲ್ಲಿ ಶೇರು ಮಾರುಕಟ್ಟೆಯ ಹೆಸರಿನಲ್ಲಿ ಜನರಿಂದ ಹಣ ಲೂಟಿ ಮಾಡಿ ಮೋಸ ಮಾಡುತ್ತಿದ್ದಾರೆ.ಇದನ್ನು ಪೊಲೀಸ್ ಇಲಾಖೆ ಕೂಡಲೇ ತಡೆಗಟ್ಟಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಪ್ರಶಾಂತ ತಂಬೂರಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆಲವು ಲೇವಾದೇವಿ ಸಂಸ್ಥೆಗಳನ್ನು ನಡೆಸುತ್ತಿರುವವರು ತಮ್ಮ ಕಚೇರಿಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ತಿಂಗಳಿಗೆ ಶೆೇಕಡ 10 ರಿಂದ 20 ರವರೆಗೆ ಬಡ್ಡಿ ಕೊಡಲಾಗುವುದು ಎಂದು ಜನರನ್ನು ನಂಬಿಸಿ ಹಣ ಲೂಟಿ ಮಾಡುತ್ತಿದ್ದಾರೆ.ಅವರನ್ನು ನಂಬಿಸಲು ನಮ್ಮ ಸಂಘದಿಂದ ರಿಯಲ್ ಎಸ್ಟೇಟ್ ದಂಧೆ ನಡೆಸಲಾಗುತ್ತಿದೆ.ಇದರಲ್ಲಿ ನಿಮಗೆ ಖಾಲಿ ನೀವೆಶನ ಕೊಡಲಾಗುವುದು ಎಂದು ನಕಲಿ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ.ಇನ್ನು ಅನೇಕ ಕಡೆ ಹಣವನ್ನು ಹೂಡಿಕೆ ಮಾಡಲಾಗುತ್ತಿದ್ದು ನಿಮ್ಮ ಹಣಕ್ಕೆ ತಿಂಗಳಿಗೆ ಶೆಕಡ 20 ರಂತೆ ಬಡ್ಡಿ ನೀಡುತ್ತೆವೆ ಎಂದು ಹೇಳಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.ಹಿಂದೊಮ್ಮೆ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.ನೂರಾರು ಜನರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.ಪ್ರಕರಣ ದಾಖಲಾದರೂ ಆರೋಪಿಗಳಿಗೆ ಯಾವುದೇ ಶಿಕ್ಷೆಗೆ ಗುರಿಪಡಿಸಿಲ್ಲ.ಸಕ್ರೀಯವಾಗಿ ಇಂಥಹ ಅಕ್ರಮ ಅವ್ಯವಹಾರ ನಡೆೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಮಗರಿವಿಲ್ಲದಂತೆ ಮೌನ ವಹಿಸಿವೆ ಎಂದು ಅವರು ಆರೋಪಿಸಿದ್ದಾರೆ.
ನಗರದಲ್ಲಿ ಲೇವಾದೇವಿ ಹೆಸರಿನ ಸಂಸ್ಥೆ ಹಾಗೂ ರಿಯಲ್ ಎಸ್ಟೇಟ್ ಮತ್ತು ಯಾವುದೇ ಪರವಾನಗಿ ಇಲ್ಲದೆ ಶೇರು ಮಾರುಕಟ್ಟೆ ಕೋಚಿಂಗ್ ನಡೆಸುವ ಕಚೇರಿ ಹುಟ್ಟುಹಾಕಿ ಕಾನೂನು ಬಾಹಿರ ವ್ಯವಹಾರಗಳನ್ನು ನಡೆಸಲಾಗುತ್ತಿದೆ.ಕೂಡಲೆ ನಗರ ಪೊಲೀಸ್ ಆಯುಕ್ತರು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಬಡ್ಡಿ ಆಸೆಗಾಗಿ ಮೋಸ ಹೋಗುವ ಜನರನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.