ಯುವ ಅಧ್ಯಕ್ಷ ಪ್ರವೀಣ್ ಜಾದವ ಅವರ ನೆತೃತ್ವದಲ್ಲಿ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆ
ಯುವ ಅಧ್ಯಕ್ಷ ಪ್ರವೀಣ ಜಾದವ್ ಅವರ ನೆತೃತ್ವದಲ್ಲಿ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆ
ಕಲಬುರಗಿ: ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಅ. ಗುತ್ತೇದಾರ ರವರ ಸಮ್ಮುಖದಲ್ಲಿ ಜಿಲ್ಲಾ ಯುವ ಅಧ್ಯಕ್ಷ ಪ್ರವೀಣ್ ಜಾಧವ ಅವರ ನೇತೃತ್ವದಲ್ಲಿ ರುದ್ರಪ್ಪ ಶಿವಮೂರ್ತಿ ಹಡಪದ ಅವರು ತಮ್ಮ ಸ್ನೇಹಿತರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ದಂತವನ್ನು ಮೆಚ್ಚಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೀರಬಿಟ್ಟಿ, ಹಿರಿಯ ಮುಖಂಡ ಶಾಮರಾವ್ ಸೂರನ್, ಮುಖಂಡರಾದ ಮಲ್ಲಿಕಾರ್ಜುನ ಸಂಗಾಣಿ, ಆರ್.ಆರ್. ಪಾಟೀಲ್, ಮಹಾಂತಪ್ಪ ಮದರಿ, ಸುಭಾಷ್ ಖಾಬಾ, ದೇವಿಂದ್ರಾ ಹಸನಾಪುರ್, ಮಾರುತಿ ಚವಾಣ್, ವಲಸಲ್ ಕುಮಾರ್, ಸುನೀಲ ಗಾಜರೆ, ರಾಜೆ ಪಟೇಲ್, ಬೈಲಪ್ಪ ಪತ್ತೇದಾರ, ಚಂದು ಮೋರೆ, ಯೇಸುನಾಥ, ನಾಗಯ್ಯ ಸ್ವಾಮಿ, ನಾಗಣ್ಣ ವಾರದ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.