ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸವನ್ನು ರಾವೂರ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ. : ಕೋಟೇಶ್ವರರಾವ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸವನ್ನು ರಾವೂರ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ. : ಕೋಟೇಶ್ವರರಾವ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸವನ್ನು ರಾವೂರ ಸಂಸ್ಥೆ ಯಶಸ್ವಿಯಾಗಿ ಮಾಡುತ್ತಿದೆ. : ಕೋಟೇಶ್ವರರಾವ 

ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಬೆಳೆಸುವ ಕೆಲಸವನ್ನು ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಿ ಮಾಡುತ್ತಿದೆ ಎಂದು ಎಸಿಸಿಯ ಸಿ ಎಸ್ ಆರ್ ಕ್ಲಸ್ಟರ್ ಹೆಡ್ ಕೋಟೇಶ್ವರರಾವ ಹೇಳಿದರು. ಅವರು ರಾವೂರ ಗ್ರಾಮದಲ್ಲಿ ನಡೆದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ 42ನೇ ವಾರ್ಷಿಕೋತ್ಸವದ ಸಮಾರಂಭದವನ್ನು ಉದ್ಘಾಟಿಸಿ ಮಾತನಾಡಿದರು.ಉತ್ತಮ ಸಂಸ್ಕಾರ ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಸಿಗದೆ ವಿಚಿತ್ರ ಪೀಳಿಗೆ ಹುಟ್ಟುತ್ತಿದೆ. ಸಮಾಜದಲ್ಲಿ ಇಂತಹ ಪೀಳಿಗೆ ಅನೇಕ ಸಮಾಜಘತುಕ ಚಟುವಟಿಕೆ ಮಾಡುತ್ತಿವೆ. ಸಂಸ್ಕಾರದ ಕೊರತೆಯಾದಲ್ಲಿ ಸಮಾಜ ಹಾಳಾಗುತ್ತದೆ. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವೆಂದರು.

ಮುಖ್ಯಅತಿಥಿಗಳಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ ನಮ್ಮ ಭಾಗದಲ್ಲಿ ಮಕ್ಕಳ ಸರ್ವಾoಗಿಣ ವಿಕಾಸದ ಜೊತೆಗೆ ಉತ್ತಮ ಸಂಸ್ಕಾರವನ್ನು ಈ ಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ಕಲಿತಿರುವ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೇವಲ ಅಂಕಗಳಿಕೆಯೇ ನಮ್ಮ ಶಿಕ್ಷಣವಾಗಬಾರದು ಬದಲಾಗಿ ನಮ್ಮಲ್ಲಿ ವರ್ತನೆಗಳನ್ನು ಬದಲಾಯಿಸಬೇಕು ಎಂದು ಹೇಳಿದರು.

ಹೊನ್ನಕಿರಣಿಗಿಯ ಚಂದ್ರಗುoಡ ಶಿವಾಚಾರ್ಯರು. ರಾವೂರ ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಸಿಂಪಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಿತ್ರಾ ತುಮಕೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ ವೇದಿಕೆ ಮೇಲಿದ್ದರು.

3 ಗಂಟೆಗಳ ಕಾಲ ಮಕ್ಕಳಿಂದ ಮಲ್ಲಕಂಬ, ಗೋಪುರ ರಚನೆ, ಯೋಗಾಸನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಶಿವಲಿಂಗಪ್ಪ ವಾಡೆದ, ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ, ಜಾಕಿರ್ ಹುಸೇನ್, ಗಣ್ಯರಾದ ಗುರುನಾಥ ಗುದಗಲ್, ಸತೀಶ್ ಸಗರ, ದೇವಿoದ್ರ ತಳವಾರ, ಶರಣು ಜ್ಯೋತಿ. ಚಂದ್ರು ಹಾವೇರಿ,ಕಾಂತಪ್ಪ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿಕ್ಷಕ ಸಿದ್ದಲಿಂಗ ಬಾಳಿ ಸಂಸ್ಥೆಯ ವರದಿ ವಾಚನ ಮಾಡಿದರು. ಈಶ್ವರ ಬಾಳಿ ಸ್ವಾಗತಿಸಿದರು, ಈಶ್ವರಗೌಡ ಪಾಟೀಲ್ ಹಾಗೂ ಭುವನೇಶ್ವರಿ ಎಂ ಕಾರ್ಯಕ್ರಮ ನಿರೂಪಿಸಿದರು.

ಮಲ್ಲಕಂಬಕ್ಕೆ ಮನಸೋತು ದೇಣಿಗೆ :

ಸಂಸ್ಥೆಯ ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾದ ಮಕ್ಕಳ ರೋಮಾಂಚನಕಾರಿ ಮಲ್ಲಕಂಬವನ್ನು ನೋಡಿ ಮನಸೋತ ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಶಿಲ್ಪಿ ಅವರು ಸ್ಥಳದಲ್ಲಿಯೇ ಹತ್ತು ಸಾವಿರ ರೂಪಾಯಿ ದೇಣಿಗೆಯನ್ನು ನೀಡಿದರು.