ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಸ್ಥೆ ರಹದಾರಿ -ಆಬೀದಾ ಬೇಗಂ
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಸಂಸ್ಥೆ ರಹದಾರಿ -ಆಬೀದಾ ಬೇಗಂ
ಚಿತ್ತಾಪುರ:ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥ್ಯೆಯವರು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದರ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವ ಉದ್ಯೋಗ ಮಾಡಲು ತರಬೇತಿ ನೀಡುತ್ತಿರುವುದು ಅವರ ಸಾಮಾಜಿಕ ಸೇವೆಯ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಆಬೀದಾ ಬೇಗಂ ಹೇಳಿದರು.
ಪಟ್ಟಣದ ಪ್ರಕಾಶ ನಗರದ ಪೆದ್ದು ಮಠದಲ್ಲಿ ಧರ್ಮಸ್ಥಳ ಸಂಸ್ಥೆಯ ಜ್ಞಾನವಿಕಾಸ ವಿಭಾಗದಿಂದ ಹಮ್ಮಿಕೊಂಡಿದ್ದ ಆಯ್ದ ೩೦ ಮಹಿಳೆಯರಿಗೆ ಒಂದು ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ಸಂಸ್ಥೆಯ ಆಶಯ ಸಕಲರೂ ಸಂವೃದ್ಧಿಯಾಗಬೇಕು ಎನ್ನುವುದು . ಸಮಾಜದ ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯವೆಂದರು.
ಈ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಅರ್ಚನಾ,ವಲಯ ಮೇಲ್ವಿಚಾರಕರಾದ ಫಕೀರೇಶ, ಗೋದಾವರಿ, ಬ್ಯೂಟಿ ಪಾರ್ಲರ್ ತರಬೇತುದಾರರಾದ ಲತಾ ಪೆಂದು , ಸರುಬಾಯಿ ಅವರು ಸೇರಿದಂತೆ ಇತರರು ಇದ್ದರು.