ಶಿಕ್ಷಕ ವೃತ್ತಿ ಪವಿತ್ರವಾದದ್ದು : ಮರುಳ ಮಹಾಂತ ಶ್ರೀ

ಶಿಕ್ಷಕ ವೃತ್ತಿ ಪವಿತ್ರವಾದದ್ದು : ಮರುಳ ಮಹಾಂತ ಶ್ರೀ

ಶಿಕ್ಷಕ ವೃತ್ತಿ ಪವಿತ್ರವಾದದ್ದು : ಮರುಳ ಮಹಾಂತ ಶ್ರೀ 

ಶಹಪುರ : ಮುಗ್ಧ ಮಕ್ಕಳಲ್ಲಿ ಅಕ್ಷರವ ಬಿತ್ತಿ ಜ್ಞಾನಾರ್ಜನೆಯನ್ನು ತುಂಬಿ ವಿದ್ಯಾರ್ಥಿಗಳ ಬಾಳಿನ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ಹಾಗೂ ಸ್ವಾಸ್ಥ್ಯ ಸಮಾಜ ಕಟ್ಟುವ ಶಿಲ್ಪಿಗಳು ಶಿಕ್ಷಕರಾಗಿದ್ದಾರೆ ಆದ್ದರಿಂದ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಸಗರ ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶ್ರೀಗಳು ಹೇಳಿದರು.

ನಗರದ ಪ್ರತಿಷ್ಠಿತ ವೈಷ್ಣವಿ ಫಂಕ್ಷನ್ ಹಾಲಿನಲ್ಲಿ ಸರಕಾರಿ ಪ್ರೌಢಶಾಲೆ ಸಗರ 2005 -6 ನೇ ಸಾಲಿನ ಎಸ್, ಎಸ್,ಎಲ್,ಸಿ ವಿದ್ಯಾರ್ಥಿಗಳ ವತಿಯಿಂದ ಹಮ್ಮಿಕೊಂಡಿರುವ ಗುರು ವಂದನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಗುರುವಂದರೆ ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂದು ಬಣ್ಣಿಸಿದರು.

ನಾಗಠಾಣೆ ಹಿರೇಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ ಅಜ್ಞಾನದಿಂದ ಜ್ಞಾನದೆಡಗೆ,ಕತ್ತಲಿಯಿಂದ ಬೆಳಕಿನೆಡೆಗೆ,ಭಯದಿಂದ ನಿರ್ಭಯದೆಡಗೆ ಕರೆದುಕೊಂಡು ಹೋಗುವನೆ ನಿಜವಾದ ಗುರು, ಗುರುವಿನ ಮಹತ್ವವನ್ನು ತಿಳಿದುಕೊಂಡು ನಡೆದರೆ ಬದುಕಿನಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದು ನುಡಿದರು.

 ನಿವೃತ್ತ ಹಾಗೂ ಹಿರಿಯ ಶಿಕ್ಷಕ ಎಸ್.ಎನ್.ಪಾಟೀಲ್ ಮಾತನಾಡಿ, ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದಾರೆ,ಪಾಠ ಕಲಿಸಿದ ಗುರುಗಳಿಗೆ ಇದಕ್ಕಿಂತ ಸಂತೋಷ ಮತ್ತೊಂದಿಲ್ಲ ಮತ್ತೆ 20 ವರ್ಷಗಳ ನಂತರ ಎಲ್ಲಾ ವಿದ್ಯಾರ್ಥಿಗಳು ಸೇರಿ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಹಮ್ಮಿಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು 

ಈ ಸಮಾರಂಭದ ವೇದಿಕೆಯ ಮೇಲೆ,ನಿವೃತ್ತ ಶಿಕ್ಷಕ ವೀರಭದ್ರಯ್ಯ ಸ್ವಾಮಿ ದೇಸಾಯಿ ಮಠ, ಅಂದಿನ ಶಿಕ್ಷಕ ವೃಂದದವರಾದ ಶಿವವಶರಣಪ್ಪ ಶಿರೂರ ಶೈಲಜಾ ಕುಲಕರ್ಣಿ,ಮಹಾಂತಮ್ಮ ಅಕ್ಕಿ,ಸುರೇಖಾ ಶಕಾಪುರೆ,ಜಯಶ್ರೀ ಆಸ್ರಿತ,ಮಹಾದೇವಿ ಇಂಜಗನೇರಿ,ಶಿವಾನಂದ ಜಾಯಿ,ಅಂದಿನ ಅತಿಥಿ ಶಿಕ್ಷಕರಾದ ರಮೇಶ್ ಕಂಬಾರ,ಅಣ್ಣಾರಾಯ

ಕೂಡ್ಲೂರು,ಗುಡದಪ್ಪ ಲಿಂಗಸೂಗುರ,ಶರಣಪ್ಪ ಖಾದಿ,ದ್ವಿತೀಯ ದರ್ಜೆ ಸಹಾಯಕ ಇರ್ಷಾದ್ ಅಹಮದ್,ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.