ಪೌಷ್ಠಿಕವಾದ ಹಾಲು ಬಡ ಮಕ್ಕಳಿಗೆ ಹಾಲು ಕುಡಿಸಿ ಅಪೌಷ್ಟಿಕತೆ ನಿವಾರಣೆ ಮಾಡಿ :ಸುನೀಲ ಮಾರುತಿ ಮಾನಪಡೆ

ಪೌಷ್ಠಿಕವಾದ ಹಾಲು ಬಡ ಮಕ್ಕಳಿಗೆ ಹಾಲು ಕುಡಿಸಿ ಅಪೌಷ್ಟಿಕತೆ ನಿವಾರಣೆ ಮಾಡಿ  :ಸುನೀಲ ಮಾರುತಿ ಮಾನಪಡೆ

ಪೌಷ್ಠಿಕವಾದ ಹಾಲು ಬಡ ಮಕ್ಕಳಿಗೆ ಹಾಲು ಕುಡಿಸಿ ಅಪೌಷ್ಟಿಕತೆ ನಿವಾರಣೆ ಮಾಡಿ :ಸುನೀಲ ಮಾರುತಿ ಮಾನಪಡೆ

ಕಲಬುರ್ಗಿ ನಗರದ ಶಹಾಬಾದ ರಸ್ತೆಯ ತಳ ಸಮುದಾಯ ಬುಡುಗ ಜಂಗಮ ಬಡವಾಣೆಯಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವ ಪಂಚಮಿ ಕಾರ್ಯಕ್ರಮ ಆಚರಿಸಲಾಯಿತು.

ಹೋರಾಟಗಾರ ಸುನೀಲ ಮಾರುತಿ ಮಾನಪಡೆ ಮಾತನಾಡಿ ಸಂಪ್ರದಾಯದ ಹೆಸರಿನಲ್ಲಿ ನಾಡಿನಲ್ಲಿ ಮೌಢ್ಯತೆ, ಕಂದಾಚಾರ, ನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕ ಆಹಾರವನ್ನು ನೆಲಕ್ಕೆ ಚೆಲ್ಲುವ ಮೂಲಕ ಅಜ್ಞಾನ ಬೆಳಸುವ ನಿಲ್ಲಿಸಬೇಕು ವಿಜ್ಞಾನ, ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿರುವ ದಿನಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು .

ಬಸವಣ್ಣನವರು ೧೨ ನೇ ಕಾಯಕ ದಾಸೋಹದ ಮೂಲಕ ಆಹಾರದ ಮಹತ್ವ ಸಾರಿ ಹೇಳಿದ್ದಾರೆ ಬಸವ ತತ್ವ ಚಿಂತನೆ ಮೈಗುಡಿಸಿಕೊಳ್ಳಬೇಕು ಎಂದರು.

ಕಾAಗ್ರೆಸ್ ಮುಖಂಡ ದಿನೇಶ ದೊಡ್ಡಮನಿ ಅವರು ಮಾತಾಡಿ ಭಾರತ ದೇಶದ ಮೂಲ ನಿವಾಸಿಗಳಾದ ನಾಗಾ ಸಮುದಾಯ ಜನರನ್ನು ಕೊಂದಿರುವ ದಿನವನ್ನು ಹಾಗು ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಲಿಂಗಐಕ್ಯ ಆದ ದಿನವನ್ನು ವೈದಿಕರು ನಮ್ಮ ಹಿರಿಯರನ್ನು ಕೊಂದಿರುವ ದಿನವನ್ನು ಶತಮಾನಗಳಿಂದ ನಾಗರ ಹಾವಿಗೆ ಹಾಲು ಎರೆಯುವ ನಾಗರ ಪಂಚಮಿ ಹಬ್ಬ ಆಚರಣೆ ಮಾಡುತ್ತಿರುವದು ನೋಡಿದರೆ ನಮ್ಮ ಹಿರಿಯರನ್ನು ಕೊಂದಿರುವ ದಿನವನ್ನು ಖುಷಿ ಪಡುವಂತೆ ಮಾಡಿದ್ದಾರೆ ಇದು ನಿಲ್ಲಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುಲಿಂಗ ಮಹಾಗಾಂವಕರ್ ವಹಿಸಿದರು. ಮಾನವ ಬಂಧುತ್ವ ವೇದಿಕೆ ನಾಗೇಂದ್ರ ಜವಳಿ, ಸಂತೋಷ ಮೇಲಿನಮನಿ, ಸಂಸ್ಕಾರ ಪ್ರತಿಷ್ಠಾನ ನಿರ್ದೇಶಕರಾದ ವಿಠ್ಠಲ ಚಿಕಣ , ಮೈಲಾರಿ ದೊಡ್ಡಮನಿ ಜಾಗತಿಕ ಲಿಂಗಾಯತ ಮಹಾ ಸಭಾದ ಸಂಗಮೇಶ ಗುಬ್ಬೇವಾಡ, ಶಶಿಕಾಂತ್ ಪಸಾರ್, ಬುಡುಗ ಜಂಗಮ ಮುಖಂಡರಾದ ಮರೆಪ್ಪ ಇತರರು ಇದ್ದರು

.