ಪಿಡಿಎ ಇಂಜಿನಿಯರಿಂಗ್ ಕಾಲೇಜು ಕಲಬುರ್ಗಿ ಮತ್ತು ಐಐಐಟಿ ಧಾರವಾಡ ಜೋತೆ ಒಪ್ಪಂದ.

ಪಿಡಿಎ ಇಂಜಿನಿಯರಿಂಗ್ ಕಾಲೇಜು ಕಲಬುರ್ಗಿ ಮತ್ತು ಐಐಐಟಿ ಧಾರವಾಡ ಜೋತೆ ಒಪ್ಪಂದ.
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು ಹಾಗೂ ಧಾರವಾಡದ ಐಐಐಐಟಿ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಪಾರ್ಮೆಶನ ಟೆಕ್ನಾಲಜಿ) ನಡುವೆ ಪರಸ್ಪರ ಶೈಕ್ಷಣಿಕ ಒಪ್ಪಂದ ಏರ್ಪಟ್ಟಿತು
ಐಐಐಟಿ ಧಾರವಾಡವು ಸಂಸತ್ತಿನ ಕಾಯ್ದೆ (23 ಆಫ್ 2017) ಯಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿದ್ದು, ಇದನ್ನು ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಕಿಯೋನಿಕ್ಸ್ ನಡುವೆ ಪಿಪಿಪಿ ಮೋಡ್‌ನಲ್ಲಿ ಸ್ಥಾಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ, ಮಂಡಳಿ ಮತ್ತು ಸೆನೆಟ್ ಆಡಳಿತ, ಶೈಕ್ಷಣಿಕ ಮತ್ತು ಉದ್ಯಮದ ಅತ್ಯಂತ ಶ್ರೇಷ್ಠ ನಾಯಕರನ್ನು ಒಳಗೊಂಡಿದೆ. ಅವರು ಸಂಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಐಐಐಟಿ ಧಾರವಾಡವು ಸ್ವಾವಲಂಬಿ ಪಿಪಿಪಿ ಸಂಸ್ಥೆಯಾಗಿದ್ದು, ಅಲ್ಲಿ ಸಂಬಳ ಸೇರಿದಂತೆ ಎಲ್ಲಾ ನಿರ್ವಹಣಾ ವೆಚ್ಚಗಳನ್ನು ವಿದ್ಯಾರ್ಥಿಗಳ ಬೋಧನೆ ಮತ್ತು ಇತರ ಶುಲ್ಕಗಳಿಂದ ಪೂರೈಸಲಾಗುತ್ತದೆ. ಇಂತಹ ಸಂಸ್ಥೆಯ ಜೋತೆ ನಮ್ಮ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಒಪ್ಪಂದ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅಭಿಪ್ರಾಯ ಪಟ್ಟಿದ್ದಾರೆ.
ಐಐಐಟಿ ಧಾರವಾಡವು ಬೋಧನೆ, ಪಠ್ಯಕ್ರಮ, ಕ್ಯಾಂಪಸ್ ವಿನ್ಯಾಸ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ: ಎಲ್ಲಾ ಅಂಶಗಳಲ್ಲಿಯೂ ನಾವೀನ್ಯತೆಯನ್ನು ಸಾಧಿಸುತ್ತಿದೆ ಇದರಿಂದಾಗಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೂ ಹಾಗೂ ಪ್ರಾಧ್ಯಾಪಕರಿಗೂ ಬಹಳಷ್ಟು ಅನೂಕೂಲವಾಗಲಿದೆ.
ಈ ಒಪ್ಪಂದ ಕಾರ್ಯಕ್ರಮದಲ್ಲಿ ಧಾರವಾಡದ ಐಐಐಟಿ ನಿರ್ದೇಶಕರಾದ ಪ್ರೊ ಎಸ್ ಆರ್ ಮಹಾದೇವ , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ದೀಪಕ ಕೆ ಟಿ, ಸಿರಿಯಲ್ ಎಂಟರಪೇನರ್ ರಾಮ ಸುಬ್ರಮಣ್ಯ, ಮಾರ್ಕೆಟಿಂಗ್ ಮ್ಯಾನೇಜರ್ ರಕ್ಷಿತಾ ಅಥಣಿ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್,ಡಾ ನಾಗೇಶ್ ಸಾಲಿಮಠ, ಪ್ರೋ ಸಿದ್ಧರಾಮ ಸಂಗೋಳಗಿ ಉಪಸ್ಥಿತರಿದ್ದರು
ಐಐಐಟಿ ಧಾರವಾಡ ಜೋತೆ ನಮ್ಮ ಸಂಸ್ಥೆಯ ಒಪ್ಪಂದ ಮಾಡಿಕೊಂಡಿರುವದಕ್ಕೆ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.