ವಾಡಿ ಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ

ವಾಡಿ ಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ
ವಾಡಿ: ಪಟ್ಟಣದಲ್ಲಿ ಬರುವಜೂನ್ 21 ರ ಅಂತರಾಷ್ಟ್ರೀಯ ಯೋಗ ದಿನಾಚರಣೆ,ಹಿನ್ನಲೆಯಲ್ಲಿ ನಡೆಯುವ ಸಾಮೂಹಿಕ ಯೋಗ ಅಭ್ಯಾಸದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಕರೆ ನೀಡಿದ್ದಾರೆ.
ಈ ಹನ್ನೊಂದನೇ ವಿಶ್ವ ಯೋಗ ದಿನಾಚರಣೆಯ ಒಂದು ಭೂಮಿ, ಒಂದು ಆರೋಗ್ಯ ಎಂಬ ಘೋಷ ವಾಕ್ಯದಂತೆ ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದರ ಜೊತೆಗೆ ನಮ್ಮ ನೈಸರ್ಗಿಕ ಸಂಪತ್ತಿನ ಪ್ರಯೋಜನದೊಂದಿಗೆ ಪ್ರತಿಯೊಬ್ಬರು ಉತ್ತಮ ಆರೋಗ್ಯ ಹೊಂದಲು ಈ ಯೋಗ ದಿನಾಚರಣೆ ಸ್ಫೂರ್ತಿಯಾಗಲಿದೆ.
ಪತಂಜಲಿ ಯೋಗ ಸಮಿತಿ ಹಾಗೂ ಬೆಳಗಿನ ಬಳಗದ ವತಿಯಿಂದ ಬರುವ ಜೂನ್ 21 ರಂದು ಬೆಳಗ್ಗೆ 06:00 ಗಂಟೆಯಿಂದ 07:00 ರವರೆಗೆ
ಶ್ರೀ ಮುನಿಯಪ್ಪ ದಾಸ ಶಾಲಾ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸಕ್ತರೊಂದಿ ಯೋಗಾಭ್ಯಾಸ ಮಾಡುವುದರ ಮೂಲಕ ಆಚರಿಸಲಾಗುವುದು ಎಂದು ಹೇಳಿದ್ದಾರೆ.