ಕಲಬುರಗಿ ನಗರದಲ್ಲಿ ‘ಕ್ರಿಸ್‌ಮಸ್‌’ ಹಬ್ಬದ ತೈಯಾರಿ

ಕಲಬುರಗಿ ನಗರದಲ್ಲಿ ‘ಕ್ರಿಸ್‌ಮಸ್‌’ ಹಬ್ಬದ ತೈಯಾರಿ

ನಗರದಲ್ಲಿ ‘ಕ್ರಿಸ್‌ಮಸ್‌’ ಹಬ್ಬದ ತೈಯಾರಿ 

ಕ್ರೈಸ್ತರ ಮನೆಗಳಲ್ಲಿ ಹಬ್ಬಕ್ಕೆ ತಯಾರಿ, ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

ಕಲಬುರಗಿ: ಯೇಸು ಕ್ರಿಸ್ತನ ಹುಟ್ಟಿದ ದಿನದಂದು ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ ಡಿಸೆಂಬರ್‌ ತಿಂಗಳ ಆರಂಭದಿಂದಲೇ ಹಬ್ಬದ ಸಿದ್ಧತೆ ನಡೆದಿದೆ.

ನಗರ ,ಜಿಲ್ಲೆ, ಮತ್ತು ಹಳ್ಳಿಗಳಲ್ಲಿ ಕ್ರೈಸ್ತರ ಮನೆ, ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಡಿಸೆಂಬರ್ 25 ರಂದು ಯೇಸು ಕ್ರಿಸ್ತನ ಜನನದ ಅಂಗವಾಗಿ ವಿಶೇಷ ಆರಾಧನೆ ಕೂಟಗಳು ನಡೆದಿವೆ. ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಇನ್ನೂ ನಗರದ ವಿಜಯ ವಿದ್ಯಾಲಯದ ಆವರಣದಲ್ಲಿ ಮತ್ತು ಆನಂದ ಹೋಟೆಲ್ ಹತ್ತಿರದ ಸಂತ ಮೇರಿ ಚರ್ಚ್ ಸೇರಿದಂತೆ ವಿವಿಧೆಡೆ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಜಗಮಗಿಸುತ್ತಿದೆ. ಕೊರೆಯುವ ಚಳಿ ಮಧ್ಯೆಯೂ ನಡೆದ ಕ್ರಿಸ್‌ಮಸ್‌ ಕ್ಯಾರೆಲ್‌ 

ಏನಿದು ಕ್ಯಾರೆಲ್‌ ಸಿಂಗಿಂಗ್‌:

ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತನು ಹುಟ್ಟಿದ ದಿನವನ್ನು ಪ್ರಚುರ ಪಡಿಸಲು ಹಾಡುಗಳ ಮೂಲಕ ಮನೆ–ಮನೆಗೆ ಹೋಗಿ ಕ್ಯಾರೆಲ್‌ ಸಿಂಗಿಂಗ್‌ ಎನ್ನಲಾಗುತ್ತಿದೆ. ಮನೆ ಮನೆಗೆ ತೆರಳಿ ಯೇಸು ಕ್ರಿಸ್ತನ ಶುಭ ಸಂದೇಶ ಸಾರುವ ಕ್ಯಾರೆಲ್‌ ಗಾಯನ ಮಹತ್ವ ಸ್ಥಾನ ಪಡೆದಿದೆ. ಸಂಜೆ ಚರ್ಚ್‌ಗಳಲ್ಲಿ ಸೇರಿ ಅಲ್ಲಿಂದ ಕ್ರೈಸ್ತರ ಮನೆಗಳಿಗೆ ತೆರಳುತ್ತಾರೆ. ಹಾಡು, ಬೋಧನೆ ನಂತರ ಬಂದವರಿಗೆ ಮನೆಯವರು ಉಪಹಾರ, ಚಹಾ, ಕಾಫಿ ನೀಡುತ್ತಾರೆ.

ವಿವಿಧ ಚರ್ಚ್‌ಗಳಲ್ಲಿ ಮಕ್ಕಳಿಂದ ನೃತ್ಯ, ಸೆಂಟಾ ಕ್ಲಾಸ್‌ ಉಡುಗೆ ಧರಿಸುತ್ತಾರೆ . ಈಗ ಕ್ಯಾರೆಲ್‌ ಗಾಯನದಲ್ಲಿ ಮನೆ ಮನೆಗೆ ತೆರಳಿ ‘ಸೆಂಟಾ ಕ್ಲಾಸ್’ ವೇಷ ಧರಿಸಿದ ಯುವಕರು ಚಿಕ್ಕಮಕ್ಕಳಿಗೆ ಚಾಕೊಲೇಟ್‌ ನೀಡಿ ಖುಷಿ ಪಡಿಸಿ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಬಂಧು– ಬಳಗ, ಸ್ನೇಹಿತರಿಗೆ ತಮ್ಮ ಮನೆಗೆ ಆಹ್ವಾನಿಸಿ ಸಹ ಭೋಜನವನ್ನು ಮಾಡಿಸುತ್ತಾರೆ.

ನಗರದ ಚರ್ಚ್‌ನಲ್ಲಿ ಬ‌ಗೆಬಗೆಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಚರ್ಚ್‌ನ ಒಳಗಡೆ ವಿವಿಧ ಕಾಗದಗಳಿಂದ ಸಿಂಗಾರಗೊಳಿಸಲಾಗಿದೆ. ಚರ್ಚ್‌ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಿ ಅದರಲ್ಲಿ ಯೇಸು ಕ್ರಿಸ್ತನ ಜನನಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಇಡಲಾಗಿದೆ.

ಯೇಸು ಕ್ರಿಸ್ತನ ಜನನದ ಕುರಿತಾದ ಸಂದೇಶವೇ ಕ್ರಿಸ್‌ಮಸ್‌ ಹಬ್ಬವಾಗಿದೆ. ಜಗತ್ತಿನೆಲ್ಲಡೆ ಕ್ರಿಸ್‌ಮಸ್‌ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ