ಕಲ್ಯಾಣ ನಾಡಿನಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮಮಹಾದೇವಪ್ಪ ರಾಂಪುರೆ.
ಕಲ್ಯಾಣ ನಾಡಿನಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮಮಹಾದೇವಪ್ಪ ರಾಂಪುರೆ.
ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ ರಾಂಪುರೆ ಅವರು ಎಂದು ಹೈ.ಕ.ಶಿ.ಸಂಸ್ಥೆಯ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಚ ಲಿಂಗೈಕ್ಯ ಮಹಾದೇವಪ್ಪ ರಾಂಪುರೆಯವರ 53 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಮಹೇಶ ಗಂವ್ಹಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.
ಮುಂದುವರೆದು ಮಾತನಾಡಿದ ಅವರು ತಮ್ಮ ಪಾಲಕರ ಒತ್ತಾಶಯದ ಮೆರೆಗೆ ದೂರದ ಕುಂಬಾರಿಯಿಂದ ಕಲಬುರಗಿಗೆ ಬಂದು ತಮ್ಮ ಬದುಕಿನ ಜೊತೆಗೆ ಈ ಭಾಗದ ಜನರು ಬದಕು ಕಟ್ಟಿಕೊಳ್ಳಲು ಶಿಕ್ಚಣ ಸಂಸ್ಥೆಯನ್ನು ಹುಟ್ಟುಹಾಕಿದ ಪುಣ್ಯಾತ್ಮ ಎಂದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕರಾದ ಆನಂದ ಪಾಟೀಲ,ಸವಿತಾ ಪಾಟೀಲ,ಜಾನಕಿ ಪಾಟೀಲ,ಸರಸ್ವತಿ ರಾಜಶ್ರೀ, ಝೈಬಾ ಅಕ್ತರ,ಬೋಧಕೇತರ ಸಿಬ್ಬಂದಿ ಅನಸುಯಾ ಗಾದಾ,ಪ್ರೀತಿ ಸೊರಡೆ, ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
