ಸರಸಂಬಾದ ಶ್ರೀ ಧನಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆ

ಸರಸಂಬಾದ ಶ್ರೀ ಧನಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆ
ಆಳಂದ: ಗ್ರಾಮೀಣ ಭಾಗದಲ್ಲಿ ಸೌಹಾರ್ದ ಸಹಕಾರಿ ಸಂಘದ ಮೂಲಕ ಆರ್ಥಿಕ ಕ್ರಾಂತಿಗೆ ಮಾದರಿಯಾಗಿರುವ ಸರಸಂಬಾದ ಶ್ರೀ ಧನಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 14, 2025ರಂದು ಬೆಳಗ್ಗೆ 11:00 ಗಂಟೆಗೆ ಸರಸಂಬಾ ಗ್ರಾಮದ ಶ್ರೀ ದಯಾಲಿಂಗೇಶ್ವರ ಆಶ್ರಮದಲ್ಲಿ ನಡೆಯಲಿದೆ.
ಕಳೆದ 22 ವರ್ಷಗಳಿಂದ ಹಗಲಿರುಳು ಶ್ರಮಿಸಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಸಂಸ್ಥಾಪಕ ಅಧ್ಯಕ್ಷ ಮಹಾಂತಪ್ಪ ಆಲೂರು ಅವರ ದಿಢೀರ್ ಕೊಲೆ ಇಡೀ ಜಿಲ್ಲೆಯನ್ನು ಬೆಚ್ಚಿಬಿಳಿಸಿತ್ತು. ಈ ದುರಂತದ ನಡುವೆಯೂ ಸಂಘದ ಆಡಳಿತ ಮಂಡಳಿಯು ಅವರ ಧರ್ಮಪತ್ನಿ ರತ್ನಬಾಯಿ ಆಲೂರು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಸಂಘದ ಕಾರ್ಯವೈಖರಿಯನ್ನು ಮುಂದುವರೆಸಿದೆ.
ಸಂಘದ ನಿಯಮಾವಳಿಯಂತೆ, ಸೆಪ್ಟೆಂಬರ್ 14ರಂದು ನಡೆಯಲಿರುವ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಗ್ರಾಮದ ಬಸ್ ನಿಲ್ದಾಣದ ಸಮೀಪವಿರುವ ಶ್ರೀ ದಯಲಿಂಗೇಶ್ವರ ಆಶ್ರಮದಲ್ಲಿ ಏರ್ಪಾಟು ಮಾಡಲಾಗಿದೆ. ಸರ್ವ ಸದಸ್ಯರು ಮತ್ತು ಹಿತೈಷಿಗಳು ಭಾಗವಹಿಸಿ, ಸಲಹೆ-ಸೂಚನೆಗಳನ್ನು ನೀಡಬೇಕೆಂದು ಸಂಘವು ಕೋರಿದೆ.
ಸಭೆಯಲ್ಲಿ ಚಿಣಮಗೇರಾ ಮಹಾಂತೇಶ್ವರ ಮಠದ ಶ್ರೀ ಶ.ಬ್ರ. ವೀರ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ದಯಾಲಿಂಗೇಶ್ವರ ಆಶ್ರಮದ ಪ್ರಕಾಶ್ ಮುತ್ಯ ಅವರು ನೇತೃತ್ವ ವಹಿಸಲಿದ್ದು, ಮಾಜಿ ಶಾಸಕ ಶ್ರೀ ಸುಭಾಷ್ ಗುತ್ತೇದಾರ್ ಅವರು ಸಭೆಯನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷೆ ರತ್ನಬಾಯಿ ಮಹಾಂತಪ್ಪ ಆಲೂರು ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸೌಹಾರ್ದ ಸಂಘದ ರಾಜ್ಯ ನಿರ್ದೇಶಕರಾದ ಶೈಲಜಾ ತಪ್ಲಿ, ಸಂಜೀವ್ ಮಹಾಜನ್, ಎಸ್.ಎಸ್. ಪಾಟೀಲ್ ಆಗಮಿಸಲಿದ್ದಾರೆ. ಜೊತೆಗೆ, ಸುರೇಶ್ ಬಡಿಗೇರ್ ಅವರು ಉಪನ್ಯಾಸ ನೀಡಲಿದ್ದಾರೆ.
ಸಂಘದ ನಿಧನರಾದ ಸದಸ್ಯರಿಗೆ ಮರಣಾಂತರ ನಿಧಿ ಅಡಿಯಲ್ಲಿ ಚೆಕ್ ವಿತರಣೆ, ಅತ್ಯುತ್ತಮ ಗ್ರಾಹಕರಿಗೆ ಹಾಗೂ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸಮಾರಂಭದಲ್ಲಿ ಗೌರವಿಸಲಾಗುವುದು
ವರದಿ ಡಾ. ಅವಿನಾಶ್ S ದೇವನೂರ