ಕಲಬುರಗಿ: ವಿಕಾಸ್ ಭಾರತ್ 2047 – ಶೈಕ್ಷಣಿಕ ಅವಕಾಶಗಳು ಮತ್ತು ನಾವಿನ್ಯತೆಗಳು ರಾಷ್ಟ್ರೀಯ ವಿಚಾರಸಂಕಿರಣ
ಕಲಬುರಗಿ: ವಿಕಾಸ್ ಭಾರತ್ 2047 – ಶೈಕ್ಷಣಿಕ ಅವಕಾಶಗಳು ಮತ್ತು ನಾವಿನ್ಯತೆಗಳು ರಾಷ್ಟ್ರೀಯ ವಿಚಾರಸಂಕಿರಣ
ಕಲಬುರಗಿ: ನಗರದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಬಿ.ಎಡ್ ಮತ್ತು ಎಂ.ಎಡ್ ಕಾಲೇಜು ಹಾಗೂ ಕುಮಾರಿ ಶರಣೇಶ್ವರಿ ರೇಷ್ಮೆ ವುಮನ್ಸ್ ಬಿ.ಎಡ್ ಕಾಲೇಜುಗಳ ಜಂಟಿ ಆಶ್ರಯದಲ್ಲಿ ರೇಷ್ಮೆ ವಿದ್ಯಾಭವನದಲ್ಲಿ “ವಿಕಾಸ್ ಭಾರತ್ 2047: ಶೈಕ್ಷಣಿಕ ಅವಕಾಶಗಳು ಮತ್ತು ನಾವಿನ್ಯತೆಗಳು” ವಿಷಯ ಕುರಿತ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಭಾನುವಾರ ಅದ್ದೂರಿಯಾಗಿ ನಡೆಸಲಾಯಿತು.
ವಿಚಾರಸಂಕಿರಣವನ್ನು ಉದ್ಘಾಟಿಸಿದ ವಾರಾಣಾಸಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಯುಸಿಟಿಇ ನಿರ್ದೇಶಕರಾದ ಪ್ರೊ. ಪ್ರೇಮ ನಾರಾಯಣ ಸಿಂಗ್ ಅವರು, “ಹೊಸ ಯುಗದ ಭಾರತ ನಿರ್ಮಾಣಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸಮಗ್ರ ಶೈಕ್ಷಣಿಕ ನೀತಿಗಳು ಅತ್ಯಗತ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಚಂದ್ರ ಶರ್ಮ,ಡಾ. ಭಾರತಿ ರೇಷ್ಮೆ,ಪ್ರೊ. ಬಿ.ಎಲ್. ಹೂವಿನಭಾವಿ,ಪ್ರೊ. ಮಧುಸೂದನ ಜೆ.ವಿ,ಶರದ ರೇಷ್ಮಿ,ಡಾ. ರಾಜಶೇಖರ ಶಿರವಾಳಕರ್,ಡಾ. ಗೀತಾ ಆರ್.ಎಂ,ಡಾ. ಓಂ ಪ್ರಕಾಶ ಎಚ್.ಎಂಶಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಬಂದ ಅತಿಥಿ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಿದರು.
