ಇಂದು"ಸಗರನಾಡು ಸಾಂಸ್ಕೃತಿಕ ಉತ್ಸವ

ಇಂದು"ಸಗರನಾಡು ಸಾಂಸ್ಕೃತಿಕ ಉತ್ಸವ

ಇಂದು"ಸಗರನಾಡು ಸಾಂಸ್ಕೃತಿಕ ಉತ್ಸವ 

ಸಗರನಾಡು ಸಿರಿ" ಸ್ಮರಣ ಗ್ರಂಥ ಲೋಕಾರ್ಪಣೆ 

  ಸಗರನಾಡು ಸಂಸ್ಥೆಯ‌ ದಶಮಾನೋತ್ಸವದ ಕಾರ್ಯಕ್ರಮ ನಾಳೆ ಸುರಪುರದಲ್ಲಿ ಜರುಗಲಿದೆ ಎಂದು ಶ್ರೀ ಪ್ರಕಾಶ ಅಂಗಡಿ ಕನ್ನಳ್ಳಿ ಅವರು ತಿಳಿಸಿದ್ದಾರೆ.

   ಸಗರನಾಡ ಸಿರಿ ಸ್ಮರಣ ಗ್ರಂಥದ ಸಂಪಾದಕರು, ಪ್ರದಾನ ಸಂಪಾದಕರುಹಾಗೂ ಗೌರವ ಸಂಪಾದಕರಾದ ಸಿದ್ದರಾಮ ಹೊನ್ಕಲ್,ನಬಿಲಾಲ ಮಕಾನದಾರ, ಕೃತಿ ಲೋಕಾರ್ಪಣೆ ಗೊಳ್ಳಲಿದೆ .

ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭ ಹಾಗೂ ಸಗರನಾಡು ಸಾಂಸ್ಕೃತಿಕ ಉತ್ಸವ ಮತ್ತು ಗ್ರಂಥ ಲೋಕಾರ್ಪಣೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಮಾಡಲಾಗುವುದು, ಜಾನಪದ ಸಂಭ್ರಮ, ಕಾರ್ಯಕ್ರಮ ಜರುಗಲಿದ್ದು ಕಾರ್ಯಕ್ರಮದಲ್ಲಿ ನಾಲವಾರದ ಷ.ಬ್ರ. ಸಿದ್ಧತೋಟೇಂದ್ರ ಶಿವಾಚಾರ್ಯರು, ನಾಡೋಜ ಬಸವಲಿಂಗ ಪಟ್ಟದ ದೇವರು, ಶಾಂತವೀರ ಸ್ವಾಮೀಜಿ ದಿವ್ಯ ಸಾನಿಧ್ಯ 

 ವಹಿಸಲಿದ್ದಾರೆ. ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಡಾ. ಬಸವರಾಜ್ ಪಾಟೀಲ್ ಸೇಡಂ .ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಚೆನ್ನಾರೆಡ್ಡಿ ಪಾಟೀಲ್, ಶಾಸಕ ಶರಣಗೌಡ ಕಂದುಕುರ, ರಾಜಕೃಷ್ಣಪ್ಪ ನಾಯಕ್, ಕಾರ್ಯಕ್ರಮದಲ್ಲಿ ಭಾಗವಹಿಸುವರು. 

ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ 50 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಗರನಾಡು 

ಸೇವಾ ರತ್ನ ಪ್ರಶಸ್ತಿ, ರಾಜ್ಯದ ವಿವಿಧ ಅಕಾಡೆಮಿಯ ಪ್ರಾಧಿಕಾರಕ್ಕೆ ನೇಮಕಗೊಂಡ ವ್ಯಕ್ತಿಗಳಿಗೆ ಗೌರವ ಸನ್ಮಾನ, ನಡೆಯಲಿದೆ.