ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ
ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ
ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅಂಬೇಡ್ಕರ್ ಅಂಬೇಡ್ಕರ್ ಅನ್ನುವುದು ಫ್ಯಾಶನ್ ಆಗಿದೆ ಬದಲಾಗಿ ದೇವರ ಹೆಸರು ನೆನೆದಿದ್ದರೆ ಸ್ವರ್ಗ ಆದರೂ ಸಿಗುತಿತ್ತು ಎಂದು ಉದ್ದಟತನ ಮಾತನ್ನು ಆಡಿರುವುದು ನೋಡಿದರೆ ಗೊತ್ತಾಗುತ್ತೆ ಬಿಜೆಪಿ ಮತ್ತು ಅಲ್ಲಿರುವ ಮುಖಂಡರುಗಳು ಸಂವಿಧಾನ ವಿರೋಧಿಗಳು ಮತ್ತು ಡಾ. ಅಂಬೇಡ್ಕರ್ ವಿರೋಧಿಗಳೆಂದು, ಈ ಹೇಳಿಕೆಯಿಂದ ದೇಶದ ಸಮಸ್ತ ಡಾ. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ನೋವುಂಟಾಗಿದ್ದು ಕೂಡಲೇ ಇದನ್ನು ಪ್ರಧಾನಮಂತ್ರಿಗಳು ಅಮಿತ್ ಷಾ ಹೇಳಿಕೆಯನ್ನು ಖಂಡಿಸಬೇಕು ಮತ್ತು ಅಮಿತ್ ಷಾ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ದಿನೇಶ ಎನ್. ದೊಡ್ಡಮನಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.