ಗಾಂಧೀ ಸರ್ವೋದಯ ಕಲ್ಪನೆ ಪ್ರಸ್ತುತ-ಪ್ರೊ.ಶಿವರಾಜ ಪಾಟೀಲ

ಗಾಂಧೀ ಸರ್ವೋದಯ ಕಲ್ಪನೆ ಪ್ರಸ್ತುತ-ಪ್ರೊ.ಶಿವರಾಜ ಪಾಟೀಲ

ಗಾಂಧೀ ಸರ್ವೋದಯ ಕಲ್ಪನೆ ಪ್ರಸ್ತುತ-ಪ್ರೊ.ಶಿವರಾಜ ಪಾಟೀಲ

ಕಲಬುರಗಿ: ಗಾಂಧೀಜಿ ಒಬ್ಬ ಮಾಡೆಲ್ ಸುಧಾರಕ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು,ಸತ್ಯ,ಪ್ರಮಾಣಿಕತೆ, ಸತ್ಯಾಗ್ರಹ, ಚಳವಳಿಯ ಮೂಲಕ ಹೇಗೆ ಸ್ಪಂದಿಸಿದರೋ ಹಾಗೆ ಸರ್ವರ ಉದಯವಾಗಬೇಕೆಂಬ ಅವರ ಕಲ್ಪನೆ ಇಂದಿಗೂ ಪ್ರಸ್ತುತ ವಾಗಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಶಿವರಾಜ ಪಾಟೀಲ ಬಣ್ಣಿಸಿದರು.

      ವಾಣಿ ವಿಲಾಸ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವೇದಿಕೆ ಹಮ್ಮಿಕೊಂಡ ಗಾಂಧೀಜಿ ಮತ್ತು ಸರ್ವೋದಯ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ನಮಗೆ ಸ್ವಾತಂತ್ರ್ಯ, ಸಮಾನತೆ,ಸಹೋದರತ್ವ,ಬಡವ,ಬಲ್ಲಿದರು ಸಮಾನವಾಗಿ

ಬದುಕಬೇಕೆಂಬ ಸರ್ವೋದಯ ಅವಶ್ಯವಾಗಿದೆ.ತಮಗಾಗಿ

ಮಾಡದೇ ದೇಶಕ್ಕಾಗಿ ತ್ಯಾಗ ಮಾಡಿದವರೆಂದರು.

       ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಗಾಂಧೀಜಿಯ ಮನೆ,ಸಮಾಧಿ ಎಲ್ಲಾ ನೋಡಿ ನಾನು ಗಾಂಧೀ ನಾಡಲ್ಲಿ ಪ್ರವಾಸ ಕಥನ ಬರೆದಿರುವೆ.ನಾನು ಫೇಲ್ ಆದೆ ಉನ್ನತ ವಿಚಾರ ಹೊಂದಿ ಈ ಮಟ್ಟದಲ್ಲಿ ಬಂದಿದ್ದೇನೆಂದು ತಮ್ಮ ಸ್ವಗತ‌ ಬಿಚ್ಚಿಟ್ಟರು.

ವಾಣಿ ವಿಲಾಸ ಶಿಲಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಿ.ಅರ್ .ಪ್ರಸಾದಅಧ್ಯಕ್ಷತೆ ವಹಿಸಿದರು.ವಾಣಿ ವಿಲಾಸ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಶ್ರೀಮತಿ ವಾಣಿ ಪ್ರಸಾದ, ಉಮಾಕಾಂತ ಪಾಟೀಲ ಇದ್ದರು.  

         ಶಿಕ್ಷಕಿ ಶ್ರೀಮತಿ ಶಿವಗೀತಾ ಪ್ರಾರ್ಥನಾ ಗೀತೆ ಹಾಡಿದರು,ಚಕೋರ ವೇದಿಕೆ ಸಂಚಾಲಕ ಸ್ವಾಗತಿಸಿದರು, ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ‌.ಚಂದ್ರಕಲಾ ಬಿದರಿ

ಪ್ರಾಸ್ತಾವಿಕ ನುಡಿ ಆಡಿದರು. ಶಿಕ್ಷಕಿ ಶ್ರೀಮತಿ ಸುನೀತಾ ಹಿರೇಮಠ ನಿರೂಪಿಸಿದರು ಶಿಕ್ಷಕಿ ಶ್ರೀಮತಿ ಶೀಲಾವತಿ ವಂದಿಸಿದರು.ಡಾ.ಶೀಲಾದೇವಿ ಬಿರಾದಾರ, ಡಾ.ರಾಜಕುಮಾರ ಮಾಳಗೆ,ಜೈಭೀಮ ಹೋಳಿಕೇರಿ, ಢಾಕಪ್ಪ ರಾಠೋಡ,ಆಕಾಶ ತೆಗನೂರು ಇತರರು ಇದ್ದರು