ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ಸವ
ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ಸವ
ಕಲಬುರಗಿ: ನಗರದ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಥನಿ ಉತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಫಾದರ್ ಜೋಸೆಫ್ ಪ್ರವೀಣ್, ಕೆನರಾ ಬ್ಯಾಂಕಿನ ಮ್ಯಾನೇಜರ್ ಜಾವೇದ್ ಮೆಮನ್, ಜೇವರ್ಗಿ ಕ್ಲಸ್ಟರ್‌ಸಿ ಆರ್ ,ಪಿ .ಯಾದ ನದಾಫ್ ಮಲಿಕ್, ಸೆಂಟ್ ಮೇರಿ ಶಾಲೆಯ ಮುಖ್ಯ ಗುರು ಸಿಸ್ಟರ್ ಜಯಶ್ರೀ, ಟ್ರಾಫಿಕ್ ಪೊಲೀಸ್ ಎಎಸ್‌ಐ ಅರ್ಜುನ್ ಸಿಂಗ್, ಪಿ.ಟಿ.ಎ ಉಪಾಧ್ಯಕ್ಷ ಧರ್ಮರಾಜ್ ಹೇರೂರ, ಶಾಲೆಯ ಸಂಚಾಲಕಿ ಸಿಸ್ಟರ್ ಸಿಂಪ್ಲಿನ, ಮುಖ್ಯ ಗುರು ಸಿಸ್ಟರ್ ಫಿಲೋಮಿನ್ ಸಲ್ದಾನ ಸೇರಿದಂತೆ ಶಾಲೆಯ ಶಿಕ್ಷಕರು, ಪೋಷಕರು, ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ನಂತರ ಮಕ್ಕಳಿಂದ ವಿಭಿನ್ನವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಕ್ಕಳ ಸ್ಯಾರಿ ಡ್ಯಾನ್ಸ್ ಪಿಕಾಕ್ ಡ್ಯಾನ್, ಅಂಬ್ರೆಲಾ ಡಾನ್ಸ್, ಜಾನಪದ ನೃತ್ಯ ಎಲ್ಲರ ಗಮನವನ್ನು ಸೆಳೆದರು. ಮಕ್ಕಳ ಯೋಗಭ್ಯಾಸ ಮತ್ತು ಕರಾಟೆ ಪ್ರದರ್ಶನಗಳನ್ನು ನೋಡಿ ಮೈಝಮ್ಮೆನಿಸಿದವು.