ಭಾರತೀಯ ಸಂಸ್ಕೃತಿ ಉತ್ಸವದಿಂದ ದಿಶಾ ದರ್ಶನವಾಗಲಿದೆ : ಕೆ.ಎನ್ ಗೋವಿಂದಾಚಾರ್ಯ

ಭಾರತೀಯ ಸಂಸ್ಕೃತಿ ಉತ್ಸವದಿಂದ ದಿಶಾ ದರ್ಶನವಾಗಲಿದೆ : ಕೆ.ಎನ್ ಗೋವಿಂದಾಚಾರ್ಯ

ಭಾರತೀಯ ಸಂಸ್ಕೃತಿ ಉತ್ಸವದಿಂದ ದಿಶಾ ದರ್ಶನವಾಗಲಿದೆ : ಕೆ.ಎನ್ ಗೋವಿಂದಾಚಾರ್ಯ

ಕಲಬುರಗಿ: ಭಾರತದ ಸುಸ್ಥಿರ ಬೆಳವಣಿಗೆ ಮತ್ತು ದೀರ್ಘಕಾಲಿಕ ಪರಿವರ್ತನೆಗೆ ಭಾರತೀಯ ಸಂಸ್ಕೃತಿ ಉತ್ಸವ ದಿಶಾ ದರ್ಶನ ಮಾಡಲಿದೆ ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್ ಗೋವಿಂದಾಚಾರ್ಯ ಹೇಳಿದರು.

ಕಲ್ಬುರಗಿಯ ವಿಕಾಸ ಅಕಾಡೆಮಿ ಕಚೇರಿಯಲ್ಲಿ ಡಿಸೆಂಬರ್ 13ರಂದು ನಡೆದ 7ನೇ ಭಾರತೀಯ ಸಂಸ್ಕ್ರತಿ ಉತ್ಸವ -ಕೊತ್ತಲ ಸ್ವರ್ಣ 2025

ರ ಸಂಭ್ರಮಧ ಯಶಸ್ವಿಗಾಗಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಮಾಜ ಮತ್ತು ಪ್ರಕೃತಿ ಮಾತೆಯ ನಡುವೆ ಸಂಬಂಧವನ್ನು ಬೆಸೆದು ಸುಸ್ಥಿರ ಆರ್ಥಿಕ, ಸಾಮಾಜಿಕ ಶೈಕ್ಷಣಿಕ, ಪರಿಸರ ಬೆಳವಣಿಗೆಯೊಂದಿಗೆ ಪ್ರಗತಿ ಹೊಂದಲು ಭಾರತೀಯ ಸಂಸ್ಕೃತಿ ಉತ್ಸವವು ವಿಶ್ವಮಟ್ಟದಲ್ಲಿ ದಿಶಾ ದರ್ಶನವನ್ನು ಮಾಡುವಲ್ಲಿ ಯಶಸ್ವಿಯಾಗಲಿದೆ. ಸಂಪನ್ಮೂಲ ಹಂಚಿಕೆ ಆಹಾರ ಕ್ರಮ ಕೃಷಿ ವಿಧಾನ ಗ್ರಾಮ ಸ್ವರಾಜ್ಯ ಉತ್ಪಾದನೆ ಹೆಚ್ಚಳ ದೊಂದಿಗೆ ವಿಕೇಂದ್ರಿತ ಗ್ರಾಮ ವಿಕಸನವು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಆದುದರಿಂದ ಸೇಡಂನಲ್ಲಿ ಜನವರಿ 29ರಿಂದ ಫೆಬ್ರವರಿ 6 ರ ತನಕ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವವು ಸ್ಪಷ್ಟ ಸ್ವರೂಪದೊಂದಿಗೆ ಆರ್ಥಿಕ, ಆಧ್ಯಾತ್ಮಿಕ, ಸಾಮಾಜಿಕ ಬೆಳವಣಿಗೆಗೆ ಹೊಸ ದೃಷ್ಟಿಕೋನ ನೀಡುವ ಅಭಿವೃದ್ಧಿ ಹೊಂದಲು ಚಿಮ್ಮು ಹಲಗೆ (ಲಾಂಚಿಂಗ್ ಪ್ಯಾಡ್) ಆಗಲಿದೆ. ಕಡಿಮೆ ವೆಚ್ಚ ಮತ್ತು ಕಡಿಮೆ ಬಂಡವಾಳದೊಂದಿಗೆ ಸುಸ್ಥಿರ ಬದುಕಿನತ್ತ ಹೆಜ್ಜೆ ಹಾಕಲು ಸಮಾಜ ಪರಿವರ್ತನೆಗೆ ಹೊಸ ದೆಸೆಯನ್ನು ಈ ಉತ್ಸವ ಸಾರಲಿದೆ ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಗೋವಿಂದಾಚಾರ್ಯ ಹೇಳಿದರು.

   ಭಾರತೀಯ ಸಂಸ್ಕೃತಿ ಉತ್ಸವದ ಮುಖ್ಯ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಮಾತನಾಡಿ ಉತ್ಸವದ ಪೂರ್ವ ತಯಾರಿಯಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು ಆಮಂತ್ರಣ ಹಂಚಿಕೆ ವಸತಿ , ಸಂಪರ್ಕ ದೇಣಿಗೆ ಸಂಗ್ರಹ ಕಾರ್ಯಗಳು ಪ್ರಗತಿಯಲ್ಲಿದೆ. ಸಮ್ಮೇಳನ ಸ್ಥಳದಲ್ಲಿ ಮುಖ್ಯ ವೇದಿಕೆಯ ಜೊತೆಗೆ 9 ಮಂಟಪಗಳು ಇರಲಿದ್ದು ಈಗಾಗಲೇ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರವಚನ, ಪ್ರಚಾರ ಅಭಿಯಾನ, 5 ರಥಗಳ ಪ್ರಯಾಣ,ವಿಶೇಷ ಜಾಥಾ ಹೀಗೆ ಹಲವು ರೂಪಗಳಲ್ಲಿ ಉತ್ಸವದ ಯಶಸ್ವಿಗಾಗಿ ಕಾರ್ಯಕ್ರಮ ಯೋಜಿಸಲಾಗಿದೆ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದು ಭಾರತೀಯ ಸಂಸ್ಕೃತಿ ಉತ್ಸವ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು. 

ಸಭೆಯಲ್ಲಿ ಕಾರ್ಯಕ್ರಮ ಮೇಲ್ ವಿಚಾರಣಾ ಸಮಿತಿಯ ಸಹ ಸಂಯೋಜಕರಾದ ಮಾರ್ತಾಂಡ ಶಾಸ್ತ್ರಿ, ಕಲ್ಬುರ್ಗಿ ನಗರದ ಜಿಲ್ಲಾ ಸಂಯೋಜಕರಾದ ಉಮೇಶ್ ಶೆಟ್ಟಿ ಮಾಧ್ಯಮ ವಿಭಾಗದ ಡಾ. ಸದಾನಂದ ಪೆರ್ಲ, ಕಲಾವಿದರಾದ ಮಾನಯ್ಯ ಬಡಿಗೇರ್, ಮೋಹನ ಸೀತ ನೂರು, ಕಚೇರಿ ವ್ಯವಸ್ಥಾಪಕರಾದ ಎಂ. ಲಕ್ಷ್ಮಿ ನಾರಾಯಣ, ಭೀಮರಾವ್ ಅಶೋಕ್ ಜೀವಣಗಿ, ನಿಖಿಲ್ ಶ್ರೀಕಾಂತ್ ಮಲ್ಲಿಕಾರ್ಜುನ್ ವರದರಾಜ ಬಡಿಗೇರ್, ಡಾ. ನಿರ್ಮಲಾ ಕೆರೆ ಮನೆ ,ಆಶಿತಾ, ಶಿವಾನಿ, ಸಂಜೀವ್ ಕುಮಾರ್ ವೀರಣ್ಣ ಶೀಲವಂತ್ ,

ಶಿವ ರಾವ್, ಮಹಾದೇವಯ್ಯ ಕರದಳ್ಳಿ, ಶಿವರಾಜ್ ಪ್ಯಾಟಿ, ಕರಬಸಪ್ಪ ವಾಲಿ ಮತ್ತಿತರರು ಇದ್ದರು. ಶೈಲಶ್ರೀ ಅವರು ಪ್ರಾರ್ಥನೆ ನೆರವೇರಿಸಿದರು.