ರಾಯಚೂರು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ
ರಾಯಚೂರು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ
ಶಹಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ 5 ನೇ ಸೆಮಿಸ್ಟರ್ ವಿದ್ಯಾರ್ಥಿ ಮೌನೇಶ ತಂದೆ ಬಸವರಾಜ ಹಾಗೂ ಬಿ.ಎ 3 ನೇ ಸೆಮಿಸ್ಟರ್ ವಿದ್ಯಾರ್ಥಿ ಮಲ್ಲಿಕಾರ್ಜುನ ತಂದೆ ಮಾರುತಿ ಇವರು ರಾಯಚೂರು ವಿಶ್ವವಿದ್ಯಾಲಯದ ಕರಾಟೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಎಲ್.ಎನ್.ಸಿ.ಟಿ ವಿಶ್ವವಿದ್ಯಾಲಯದಲ್ಲಿ ಜರುಗುವ ಕರಾಟೆ ಪಂದ್ಯಾವಳಿಯಲ್ಲಿ ರಾಯಚೂರು ವಿಶ್ವವಿದ್ಯಾಲಯ ತಂಡದಿಂದ ಸ್ಪರ್ಧಿಸಲಿದ್ದಾರೆ. ಈ ವಿಧ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್ ರಾಂಪೂರೆ , ಕ್ರೀಡಾ ಸಂಚಾಲಕರಾದ ಡಾ.ಎಮ್.ಎನ್ ಸೌದಾಗರ ಮತ್ತು ದೈಹಿಕ ಶಿಕ್ಷಣ ನಿರ್ಧೇಶಕರಾದ *ಡಾ. ಪ್ರದೀಪಕುಮಾರ ಎಮ್. ಪಾಟೀಲ್* ಮತ್ತು ಕಾಲೇಜಿನ ಎಲ್ಲಾ ಭೋಧಕ- ಬೋಧಕೇತರ ಸಿಬ್ಬಂದಿವರ್ಗದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಶಹಾಪುರ :-ಸುದ್ದಿ ನಾಗರಾಜ್ ದಂಡಾವತಿ