ಕಗ್ಗತ್ತಲೆ ನಾಡಿನಲ್ಲಿ ಬೆಳಗಿದ ಕನ್ನಡ ಜ್ಯೋತಿ

ಕಗ್ಗತ್ತಲೆ ನಾಡಿನಲ್ಲಿ ಬೆಳಗಿದ ಕನ್ನಡ ಜ್ಯೋತಿ

ಲಿಂ ಪೂಜ್ಯ ಡಾ ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ನಿಮಿತ್ಯ ಬಸವ ಜ್ಯೋತಿ ಪಾದಯಾತ್ರೆ

 

ಕಗ್ಗತ್ತಲೆ ನಾಡಿನಲ್ಲಿ ಬೆಳಗಿದ ಕನ್ನಡ ಜ್ಯೋತಿ

ಕಮಲನಗರ: ಕಗ್ಗತ್ತಲೆ ನಾಡಿನಲ್ಲಿ ಕನ್ನಡದ ಜ್ಯೋತಿ ಬೆಳಗಿಸಿದ ಭಾಲ್ಕಿ ಹಿರೇಮಠದ ಲಿಂ.ಡಾ. ಚನ್ನಬಸವಪಟ್ಟದ್ದೇವರು ಬಸವ ತತ್ವದ ಬೆಳಕು ಮತ್ತು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ಶಿಲ್ಪಿಗಳಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ನುಡಿದರು. 

ಪಟ್ಟಣದ ಶಾಖಾ ಮಠದಲ್ಲಿ ಗುರುವಾರ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂ.ಡಾ. ಚನ್ನಬಸವಪಟ್ಟದ್ದೇವರ ೧೩೫ನೇ ಜಯಂತ್ಯೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಬಸವ ಜ್ಯೋತಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಧಾರ್ಮಿಕ ಪರಿಶುದ್ಧತೆ ಮತ್ತು ನಿಸ್ವಾರ್ಥ ಸಮಾಜ ಸೇವಯಲ್ಲಿಬಸವಣ್ಣವರನ್ನು ಕಂಡ ಲಿಂ. ಪಟ್ಟದ್ದೇವರು ಸಾಮಾಜಿಕ ಮೌಢ್ಯತೆಗಳನ್ನು ಅಲ್ಲಗಳೆದರು. ಕಾಯಕಕ್ಕೆ ದಾಸೋಹದ

ಚೌಕಟ್ಟು ಹಾಕಿದರು. ದಾನದ ಬದಲು ದಾಸೋಹ ತತ್ವವನ್ನು ಉಸಿರಾಗಿಸಿಕೊಂಡು ಶಿಕ್ಷಣದ ಮೂಲಕ ಜ್ಞಾನವನ್ನು ಪಸರಿಸುವ ಕಾರ್ಯ ಕೈಗೊಂಡರು ಎಂದರು.

 ಸಾನಿಧ್ಯ ವಹಿಸಿದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ಚನ್ನಬಸವ ಪಟ್ಟದ್ದೇವರ ಶಕ್ತಿ, ಬಸವಣ್ಣವರ ಕಾಯಕ ಮತ್ತು ದಾಸೋಹ ತತ್ವಗಳು ಪ್ರತಿಫಲದಿಂದ ಕಲ್ಯಾಣ ನಾಡು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿವೆ ಎಂದರು. 

ಭಾಲ್ಕಿ ಹಿರೇಮಠದ ಪೀಠಾಧಿಕಾರಿ ಗುರುಬಸವಪಟ್ಟದ್ದೇವರು ಮಾತನಾಡಿ, ಲಿಂ.ಡಾ.ಚನ್ನಬಸವ ಪಟ್ಟದೇವರು ಬಸವ ತತ್ವದ ಬೆಳಕು ಎಂದರು.

 ಭಾಲ್ಕಿ ಹಿರೇಮಠದ

 ಮಹಾಲಿಂಗದೇವರು, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮಿ, ಪ್ರಭುಲಿಂಗ ಸ್ವಾಮಿ, ಶಿವ ಬಸವಯ್ಯ ಸ್ವಾಮಿ, ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಗ್ರಾಪಂ ಅಧ್ಯಕ್ಷೆ ಸುಶೀಲಾ ಬಾಯಿ ಮಹೇಶ್, ತಹಸಿಲ್ದಾರ್ ಅಮಿತ್ ಕುಮಾರ್ ಕುಲಕರ್ಣಿ, ಗ್ರೇಟ್ ೨, ತಹಶೀಲ್ದಾರರ ರಮೇಶ್ ಪೆದ್ದೆ, ಜೈರಾಜ್ ಖಂಡ್ರೆ, ಶಕುಂತಲಾ ಬೆಲ್ದಾಳೆ, ಡಾ. ಸಂಜುಕುಮಾರ್ ಜುಮ್ಮಾ, ಬಂಡೆಪ್ಪ ಕಂಟೆ ಇನ್ನಿತರರಿದ್ದರು.

ಬಸವ ಜ್ಯೋತಿ ಪಾದಯಾತ್ರೆ ಶಾಖಾಮಠದಿಂದ ಆರಂಭಗೊಂಡಿತು. ಲಿಂ ಪೂಜ್ಯ ಡಾ ಚನ್ನಬಸವ ಪಟ್ಟದ್ದೇವರ ಭಾವಚಿತ್ರ ಮತ್ತು ವಾಹನ ಮತ್ತು ವಿವಿಧ ಶರಣರ ಬಾವ ಚಿತ್ರಗಳ ವೇಷದಾರಿಗಳು ದಾರಿ ಉದ್ದಕ್ಕೂ ಭಕ್ತರಿಂದ ಪಾದಪೂಜೆ ಮತ್ತು ಮಕ್ಕಳು ನೃತ್ಯ ವಿಶೇಷವಾಗಿತ್ತು. ಪಾದಪೂಜೆ ಅಕ್ಕಮಹಾದೇವಿ ಪ್ರತಾಪ್ ತಶೀಲ್ ಕಾರ್ಯಾಲಯ, ಪ್ರವಾಸಿ ಮಂದಿರ, ಅಲ್ಲಂಪ್ರಭು ವೃತದ ಮೂಲಕ ನಾಂದೇಡ್ ಬೀದರ್ ರಸ್ತೆಗೆ ಬಂದು ತಲುಪಿತು. ಅಲ್ಲಿಂದ ಪಾದಯಾತ್ರೆ ಡಿಗ್ಗಿ ,ಹೊಳೆಸಮುದ್ರ, ಸವಳಿ, ಮೂಲಕ ಸಂಗಮ ಗ್ರಾಮಕ್ಕೆ ಬಂದು ತಲುಪಿತು.