ಕೃತಿಗಳು ಸಂವೇದನಾ ಶೀಲತೆ ಹೊಂದಿರಬೇಕು: ಕೆ ವಿ ಪ್ರಭಾಕರ

ಕೃತಿಗಳು ಸಂವೇದನಾ ಶೀಲತೆ ಹೊಂದಿರಬೇಕು: ಕೆ ವಿ ಪ್ರಭಾಕರ

ಕಲಬುರಗಿ : ಜುಲೈ ೨೯. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ  ಪತ್ರಕರ್ತರ  ಮೂರು ಕೃತಿಗಳನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೃತಿಗಳು ಸಂವೇದನಾ ಶೀಲತೆಯನ್ನು ಹೊಂದಿರುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

 ಪತ್ರಕರ್ತರು ದಿನನಿತ್ಯವೂ ಸುದ್ದಿ ಬರೆಯುವುದರಲ್ಲಿ ಸಮಯ ಸಿಗುವುದಿಲ್ಲ,ಇದರ ಮಧ್ಯೆಯೂ ಕೃತಿಗಳನ್ನು ಬರೆದು ಓದುಗರ ಕೈಗೆ ನೀಡಿರುವುದು ಶ್ಲಾಘನೀಯವಾಗಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ. ಆರ್ .ಪಾಟೀಲ್ ಹೇಳಿದರು. 

 ಪತ್ರಕರ್ತ ,ರಂಗಕರ್ಮಿ ಮಹಿಪಾಲ್ ರೆಡ್ಡಿ ಮುನ್ನೂರ ಅವರ "ಬೆಳಕು ತಾಗಿದ ಬೆರಳು, ಮನೋಜ್ ಕುಮಾರ್ ಗುದ್ದಿ ಅನುವಾದಿಸಿದ "ಗಾಂಧೀಜಿಯ ಹಂತಕ; ಸಂಗಮನಾಥ್ ರೇವತಗಾಂವ ಅವರ "ಕರೋನ ಕನವರಿಸುವ ವಚನಗಳು,' ಎಂಬ ಮೂರು 

ಕೃತಿಗಳನ್ನು ಬಿಡುಗಡೆ ಮಾಡಲಾಯಿತು. 

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರಂತರ ಪತ್ರಕರ್ತರ ರಾಜ್ಯಾಧ್ಯಕ್ಷರಾದ ಶಿವಾನಂದ್ ತಗಡೂರು, ಹಿರಿಯ ಪತ್ರಕರ್ತ ಶ್ರೀಕಾಂತಾಚಾರ್ಯ ಮಣ್ಣೂರ ಭಾಗವಹಿಸಿದ್ದರು. ಕಾರ್ಯನಿರತರ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸ್ವಾಗತಿಸಿದರು. 

ಮನೋಜ್ ಕುಮಾರ ಗುದ್ದಿ 

ಪತ್ರಕರ್ತ ಶಿವರಂಜನ್ ಸತ್ಯಂ ಪೇಟ್ ಮೂರು ಕೃತಿಗಳನ್ನು ಪರಿಚಯಿಸಿದರು. 

ಭವಾನಿ ಸಿಂಗ್ ಠಾಕೂರ್,ಸಿದ್ದಪ್ಪ ತಳಳ್ಳಿ, ಪ್ರೊ. ಯಶವಂತರಾಯ ಅಷ್ಠಗಿ, ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಕೆ ಎಸ್ ಬಂಧು, ಶರಣಗೌಡ ಪಾಟೀಲ ಪಾಳಾ, ಅಂಬಾರಾಯ ಕೋಣಿ, ನಾಗಯ್ಯ ಸ್ವಾಮಿ, ಪತ್ರಕರ್ತ ಆನಂದ್ ಮಣ್ಣೂರ, ಸಾಹಿತಿ ಡಾ ವಿಜಯಕುಮಾರ ಪರೂತೆ, ದೇವೇಂದ್ರಪ್ಪ ಆವಂಟಿ,ಸುರೇಶ ಗೌರೆ, ಮಡಿವಾಳಪ್ಪ , ಮಲ್ಲಿಕಾರ್ಜುನ ಮೂಡಬೂಳಕರ್ ಸೇರಿದಂತೆ ಅನೇಕ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.