ಡಿಸೆಂಬರ್ 10ಕ್ಕೆ ಬೆಳಗಾವಿ ಚಲೋ
ಡಿಸೆಂಬರ್ 10ಕ್ಕೆ ಬೆಳಗಾವಿ ಚಲೋ
ಶಹಾಪುರ : ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಹಾಗೂ ಲಿಂಗಾಯಿತ ಉಪಜಾತಿಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿಸೆಂಬರ್ 10 ರಂದು ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ,ಕೊಟ್ಟ ಕರೆಗೆ ಯಾದಗಿರಿ ಜಿಲ್ಲಾ ಪಂಚಮಸಾಲಿ ಸಮಾಜದ ಸಂಪೂರ್ಣ ಬೆಂಬಲವಿದೆ ಎಂದು ಶಹಪೂರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ತೋಟಗೇರ ತಿಳಿಸಿದ್ದಾರೆ.
ಪಂಚಮಸಾಲಿಗಳ ನಡಿಗೆ ಬೆಳಗಾವಿಯ ವಿಧಾನಸೌಧದ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬೃಹತ್ ಪ್ರತಿಭಟನೆ ನಡೆಯಲಿದ್ದು ಸುಮಾರು 5 ಸಾವಿರ ಟ್ರ್ಯಾಕ್ಟರ್ ಗಳೊಂದಿಗೆ 10.ಸಾವಿರ ವಕೀಲರು ಸೇರಿದಂತೆ ಸಮುದಾಯದ ಲಕ್ಷಾಂತರ ಜನರು ಈ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಇದೊಂದು ಐತಿಹಾಸಿಕ ಚಳುವಳಿ ಎಂದು ಹೇಳಿದರು.
ಪಂಚಮಸಾಲಿ,ದೀಕ್ಷಾ,ಮಲೆಗೌಡ, ಗೌಡ - ಲಿಂಗಾಯಿತ ಸಮಾಜದಿಂದ ಮಹಾಮುತ್ತಿಗೆ ಹಾಗೂ ವಕೀಲರಿಂದ ಬೃಹತ್ ಪ್ರತಿಭಟನೆ ಪಂಚಮಸಾಲಿ ರೈತ ಬಾಂಧವರಿಂದ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಸಹಸ್ರಾರು ಸಮಾಜ ಬಾಂಧವರು ಈ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.