ಚಂದನಕೇರಾದ ಭೃಂಗಿ ಪಾಚೇಶ್ವರ ಮಠದಲ್ಲಿ ಜಾತ್ರೆ, ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ಸೇರಿ 4 ಜನರಿಗೆ ಭೃಂಗಿಶ್ರೀ ಪ್ರಶಸ್ತಿ

ಚಿಂಚೋಳಿ ತಾಲ್ಲೂಕಿನ ಚಂದನಕೇರಾದ ಭೃಂಗಿ ಪಾಚೇಶ್ವರ ಕಟ್ಟಿಮಠ ಸಂಸ್ಥಾನ ಮಠದ ದಶಮಾನೋತ್ಸವ , ಪುರಾಣ ,ಪ್ರಶಸ್ತಿ ಪ್ರಧಾನ ಸಮಾರಂಭ
ಪ್ರಶಸ್ತಿ ಪುರಸ್ಕೃತರು:
ಗುಂಡೇರಾಯ ಪಾಟೀಲ ಧೂಳಗೊಂಡ,ಡಾ ದೀಪಕ್ ಸಿ. ಪಾಟೀಲ,ಜಗನ್ನಾಥ ಡಿ. ಶೇರಿಕಾರ,ರಾಜಶೇಖರ ಬಿರಾದಾರ
ಮುಖ್ಯಾಂಶಗಳು:
ಭೃಂಗಿ ಪಾಚೇಶ್ವರ ಜಾತ್ರೆಗೆ ದಶಮಾನೋತ್ಸವ ಸಂಭ್ರಮನಾಲ್ವರಿಗೆ ಚಂದನ ಸುಗಂಧ ಹಾಗೂ ಭೃಂಗಿಶ್ರೀ ಪ್ರಶಸ್ತಿಇಂದಿನಿಂದ ಆಲೂರಿನ ಕೆಂಚಬಸವೇಶ್ವರ ಮಹಾ ಪುರಾಣ
(ಅಭಿನವ ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವಚಂದನಕೇರಾ: ಲಿಂಗೈಕ್ಯ ರಾಚೋಟೇಶ್ವರ ಪುಣ್ಯಸ್ಮರಣೆ ಅಂಗವಾಗಿ ಏ.2ರಂದು ರಥೋತ್ಸವ)
ಚಿಂಚೋಳಿ:ತಾಲ್ಲೂಕಿನ ಚಂದನಕೇರಾ ಗ್ರಾಮದ ಭೃಂಗಿ ಪಾಚೇಶ್ವರ ಕಟ್ಟಿಮಠ ಸಂಸ್ಥಾನ ಮಠದಲ್ಲಿ
ಮಾ.22 ಶನಿವಾರದಿಂದ ಏ.2ರವರೆಗೆ ಜಾತ್ರಾ ಮಹೋತ್ಸವ ಶ್ರೀಮಠದ ಪೀಠಾಧಿಪತಿ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ.
ಜಾತ್ರೆಯ ದಶಮಾನೋತ್ಸವ ಹಾಗೂ ರೇಣುಕಾಚಾರ್ಯರ ಜಯಂತ್ಯುತ್ಸವ ಮತ್ತು ಲಿಂಗೈಕ್ಯ ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ಅಂಗವಾಗಿ ಶ್ರೀಮಠದಲ್ಲಿ ಆಲೂರಿನ ಕೆಂಚಬಸವೇಶ್ವರ ಮಹಾ ಪುರಾಣವನ್ನು ಶಿವರುದ್ರಯ್ಯ ಶಾಸ್ತ್ರಿಗಳು ಶನಿವಾರದಿಂದ ನಡೆಸಿಕೊಡಲಿದ್ದಾರೆ. ಸಂಗೀತ ಸೇವೆ ಶಿವರಾಜ ಚೌಡಾಪುರ, ತಬಲಾ ಸೇವೆ ಮಲ್ಲಿಕಾರ್ಜುನ ಆಳಂದ ಸಲ್ಲಿಸಲಿದ್ದಾರೆ.
ಪುರಾಣ ಉದ್ಘಾಟನೆ ಮತ್ತು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಮಾಜಿ ಸಂಸದ ಡಾ. ಉಮೇಶ ಜಾಧವ ಉದ್ಘಾಟಿಸಲಿದ್ದಾರೆ. ಸೂಗೂರಿನ ರುದ್ರಮುನೀಶ್ವರ ಹಿರೇಮಠದ ಚನ್ನರುದ್ರಮುನಿ ಶಿವಾಚಾರ್ಯರು ದಿವ್ಯ ಸಾನಿಧ್ಯ ಮತ್ತು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸುವರು. ರಟಕಲ್ ಠಾಣೆಯ ಸಬ್ ಇನಸ್ಪೆಕ್ಟರ್ ಶಿಲಾದೇವಿ, ಮಹಿಳಾ ಠಾಣೆಯ ನರ್ಮದಾ ಎಸ್ ಪಾಟೀಲ, ತಾ.ಪಂ. ಮಾಜಿ ಅಧ್ಯಕ್ಷೆ ವೀರಮ್ಮ ಸಂಗಯ್ಯಸ್ವಾಮಿ, ಗುಂಡಯ್ಯಸ್ವಾಮಿ ಗಣಾಚಾರಿ, ಶಿವಬಸಯ್ಯ ಸ್ವಾಮಿ, ಹೀರಾಸಿಂಗ್ ರಾಠೋಡ್, ಸಿದ್ದಮಲ್ಲಪ್ಪ ಮುಗುಳಿ, ರೇವಣಸಿದ್ದಪ್ಪ ಪಾಟೀಲ ಅಣವಾರ, ಶಂಕರ ತೊಟ್ನಳ್ಳಿ ಪಾಲ್ಗೊಳ್ಳಲಿದ್ದಾರೆ ಎಂದರು.
ಏ.1ರಂದು ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರಾದ ಗುಂಡೇರಾಯ ಪಾಟೀಲ ಧೂಳಗೊಂಡ, ಡಾ. ದೀಪಕ ಸಿ. ಪಾಟೀಲ, ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ಅವರಿಗೆ ಚಂದನ ಸುಗಂಧ ಪ್ರದಾನ ನಡೆಯಲಿದೆ. ಚೌಡಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಸ್ಟೇಷನ ಬಬಲಾದನ ಶಿವಮೂರ್ತಿ ಶಿವಾಚಾರ್ಯರು, ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಸಂಸದ ಸಾಗರ ಖಂಡ್ರೆ, ಸಚಿವ ಡಾ, ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ, ಮೊದಲಾದವರು ಪಾಲ್ಗೊಳ್ಳಲಿದ್ದಾರೆ,
ಏ.2ರಂದು ಸಂಜೆ 5 ಗಂಟೆಗೆ ನಡೆಯುವ ಮಹಾ ರಥೋತ್ಸವ ನಂತರ ಆಯೋಜಿಸಿದ ಧರ್ಮಸಭೆಯಲ್ಲಿ ಪಂಚಾಯತ ರಾಜ್ ತಾಂತ್ರಿಕ ಉಪ ವಿಭಾಗದ ನಿವೃತ್ತ ಎಂಜಿನೀಯರ್ ರಾಜಶೇಖರ ಬಿರಾದಾರ ಭೃಂಗಿಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.
ಇದಕ್ಕೂ ಮೊದಲು ಬೆಳಿಗ್ಗೆ 6 ಗಂಟೆಗೆ ಭೃಂಗಿ ಪಾಚೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಹೋಮ, ಶಿವಾಷ್ಟೋತ್ತರ, ಮಹಾ ಮಂಗಳಾರತಿ ಪೂಜೆ ಬೆಳಿಗ್ಗೆ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಸುಮಂಗಲೆಯರ ಕುಂಬ ಕಳಸ, ಆರತಿ ಸೇವೆ ನಡೆಯಲಿವೆ.
ಮಹಿಳೆಯರೇ ಅರ್ಪಿಸಿದ ತೇರು:
ಸುಮಾರು 6 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಶ್ರೀಮಠಕ್ಕೆ ರಥವನ್ನು ಅರ್ಪಿಸಿದ ಶ್ರೇಯಸ್ಸು ಮಹಿಳಾ ಭಕ್ತರದ್ದಾಗಿದೆ. ಪಾಳು ಬಿದ್ದ ಮಠವನ್ನು ಜೀರ್ಣೋದ್ದಾರಗೊಳಿಸಿದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಧರ್ಮ, ಸಂಸ್ಕೃತಿಯ ಜಾಗೃತಿಯ ಉದ್ದೇಶದಿಂದ ಶ್ರೀಮಠದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.