ಪೌರ ಕಾರ್ಮಿಕರ ಜೋತೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ಉಪಹಾರ ಸೇವನೆ
ಪೌರ ಕಾರ್ಮಿಕರ ಜೋತೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ಉಪಹಾರ ಸೇವನೆ
ಕಲಬುರಗಿ: ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ನೇತೃತ್ವದಲ್ಲಿ ಶುಕ್ರವಾರ ಶಾಂತಿನಗರದದಲ್ಲಿ ಬೆಳಗ್ಗೆ ಪೌರ ಕಾರ್ಮಿಕರಿಗೆ ನೀಡುವ ಬೆಳಗ್ಗಿನ ಉಪಹಾರ ಗುಣಮಟ್ಟ ಪರಿಶೀಲನೆ ಮಾಡಿದರು ನಂತರ ಹಲವು ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿನ ಪೌರಕಾರ್ಮಿಕರ ಜೊತೆ ಮಾತನಾಡಿದರು.
ಪೌರ ಕಾರ್ಮಿಕರ ಉಪಹಾರ ಮಾಡುವ ಸಂದರ್ಭದಲ್ಲಿ ಸಚಿನ ಅವರು ಉಪಹಾರ ಸೇವಿಸಿದರು, ಮೊಟ್ಟೆ ನೀಡದೆ ಇರುವದರಿಂದ ಗುತ್ತಿಗೆದಾರರ ಮೇಲೆ ಗರಂ ಆದ ಅವರು ಅಗ್ರಿಮೆಂಟ್ ಕಾಪಿ ಒಳಗ್ ಏನೇನು ಕೊಡ್ತಿನ್ ಅಂತ ಬರ್ಸಿದ್ದಿ ಅದು ತಗೊಂಡು ಕಚೇರಿಗೆ ಬಾ ಎಂದು ಹೇಳಿದರು.
ಪೌರಕಾರ್ಮಿಕರ ಸಮಸ್ಯೆಗಳಲ್ಲಿ ಬಹು ದೊಡ್ಡ ಸವಾಲಾದ ವೇತನ 4 ತಿಂಗಳಿAದ ನಿಂತಿದ್ದು ಕಂಡು ಬಂದಿದ್ದು ಕಾರ್ಮಿಕರೊಬ್ಬ ನಮಗೆ ಸಾಲ ಯಾರು ಕೊಡೋದಿಲ್ಲ, ಮನೆ ಬಾಡಿಗೆಗೆ ಕೊಡಲ್ಲ, ನಮ್ಮ ಪರಿಸ್ಥಿತಿ ಗಂಭೀರ ಇದೆ ಅಂತ ಹೇಳಿದರು, ಕಮಿಷನರ್ ಅವರಿಗೆ ದೂರವಾಣ ಕರೆ ಮಾಡಿ, ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡ್ತೀವಿ ಅಂತ ಟೆಂಡರ್ ಮಾಡ್ಕೊಂಡ ಗುತ್ತೇದಾರ್, ಈಗ ಸರಿಯಾದ ಸಮಯಕ್ಕೆ ಪೇಮೆಂಟ್ ಮಾಡ್ತಿಲ್ಲ, ಅವರನ್ನ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಿ ಎಂದು ಹೇಳಿದರು.
70% ಪೌರ ಕಾರ್ಮಿಕರ ಸಮವಸ್ತ್ರ ಇಲ್ಲ, ಹ್ಯಾಂಡ್ ಗ್ಲವ ಇಲ್ಲದಿರುವದು ಕಂಡುಬAದಿರುತ್ತದೆ. ಅವರ ಸಮವಸ್ತ್ರ ಧರಿಸುವದು ಮತ್ತು ಕೈಗವಸುಗಳು ಹಾಕಿಕೊಂಡು ಕೆಲಸ ಮಾಡುವಂತೆ ನೋಡುವದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಅಧಿಕಾರಿಗಳಿಗೆ ನಿರ್ಲಕ್ಷ್ಯತನ ವಹಿಸಬೇಡಿ, ಇಲ್ಲವಾದಲ್ಲಿ ನಿಮ್ಮ ಮೇಲು ಕ್ರಮ ಕೈಗೊಳ್ಳಬೇಕಾಗುತ್ತೆ ರೇಗಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸುಷ್ಮಾ, ಬಾಬುರಾವ, ರಾಘವೇಂದ್ರ ಜೊತೆಗಿದ್ದರು.