ಕಲಬುರಗಿಯ ಜಾನಪದ ಕಲಾವಿದ ವಿಶ್ವನಾಥ್ ತೋಟ್ನಳ್ಳಿಗೆ ರಾಷ್ಟ್ರಮಟ್ಟದ ಭಾರತ ಭೂಷಣ ಪ್ರಶಸ್ತಿಯ ಗರಿ

ಕಲಬುರಗಿಯ ಜಾನಪದ ಕಲಾವಿದ ವಿಶ್ವನಾಥ್ ತೋಟ್ನಳ್ಳಿಗೆ ರಾಷ್ಟ್ರಮಟ್ಟದ ಭಾರತ ಭೂಷಣ ಪ್ರಶಸ್ತಿಯ ಗರಿ

ಕಲಬುರಗಿಯ ಜಾನಪದ ಕಲಾವಿದ ವಿಶ್ವನಾಥ್ ತೋಟ್ನಳ್ಳಿಗೆ ರಾಷ್ಟ್ರಮಟ್ಟದ ಭಾರತ ಭೂಷಣ ಪ್ರಶಸ್ತಿಯ ಗರಿ

 ಕಲಬುರಗಿ : ಜಿಲ್ಲೆಯಾದಂತ ಹಲವಾರು ಜಾನಪದ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲಗೆ (ತಮಟೆ) ವಾದನ ಮತ್ತು ಪೋತರಾಜ ಕುಣಿತದ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿರುವ ಜಾನಪದ ಕಲಾವಿದ ವಿಶ್ವನಾಥ್ ತೋಟ್ನಳ್ಳಿ ಅವರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ (ರಿ) ರವರು ಕೊಡಮಾಡುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ *ಭಾರತ ಭೂಷಣ* ಪ್ರಶಸ್ತಿ ಲಭಿಸಿದೆ.

ವಿಶ್ವನಾಥ್ ತೋಟ್ನಳ್ಳಿ ಯವರು ಯಾದಗಿರಿ ರಾಯಚೂರ, ಕೊಪ್ಪಳ, ಬೀದರ್, ದಾವಣೆಗೆರೆ, ಬೆಂಗಳೂರು, ಧಾರವಾಡ, ಹುಬ್ಬಳ್ಳಿ ಮೈಸೂರ ದಸರಾ ಉತ್ಸವ ಸೇರಿದಂತೆ ಅನೇಕ ಕಡೆಗಳಲ್ಲಿ ಅವರ ಕಲಾಪ್ರದರ್ಶನ ಮಾಡಿದ್ದಾರೆ.

ಸುಮಾರು 24 ವರ್ಷಗಳಿಂದ ಜಾನಪದ ಕಲೆ ಹಾಗೂ ಪೋತರಾಜ ಪಾತ್ರದಿಂದ ಈ ಭಾಗದಲ್ಲಿ ಕಲಾಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ..

ವಿಶ್ವನಾಥ್ ತೋಟ್ನಳ್ಳಿ ಅವರಿಗೆ ಭಾರತ ಭೂಷಣ ಪ್ರಶಸ್ತಿ ಲಭಿಸಿರುವುದಕ್ಕೆ ಜಾನಪದ ಕಲಾವಿದರು, ಕನ್ನಡಾಭಿಮಾನಿಗಳು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ..