ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆ ಇದ್ದರೆ ಸದೃಢ ಸಮಾಜ ನಿರ್ಮಿಸಬಹುದು : ಗುಪ್ತಲಿಂಗ ಪಾಟೀಲ
ಸಹಕಾರಿ ಸಂಘವು ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆ ಇದ್ದರೆ ಸದೃಢ ಸಮಾಜ ನಿರ್ಮಿಸಬಹುದು ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ ಹೇಳಿದರು.
ಕಲಬುರಗಿ ನಗರದ ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ನಿಯಮಿತದ ಎರಡನೇ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡುತ್ತಾ ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬುವುದು ಸಹಕಾರಿಯ ತತ್ವವಾಗಿದೆ. ಹೆಸರಿಗೆ ತಕ್ಕ ಹಾಗೆ ವಕೀಲರಿಗೆ ಕಲ್ಯಾಣ ಮಾಡಬೇಕೆಂಬ ಉದ್ದೇಶದಿಂದ ಈ ಸಂಘವು ಸ್ಥಾಪಸಿ ಉತ್ತಮವಾದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈ ಸಹಕಾರಿ ಸಂಘದಿಂದ ಸಮಾಜದಲ್ಲಿ ವಕೀಲರ ಗೌರವ ಹೆಚ್ಚಿಸಿದೆ ಎಂದು ಮಾರ್ಮಿಕವಾಗಿ ನುಡಿದರು. ಸಹಕಾರಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ ಮಾತನಾಡುತ್ತ ಸಂಘದ ಬೆಳವಣಿಗೆಗೆ ಸರ್ವ ಸದಸ್ಯರು ಕಾರಣಿಕರ್ತರು. ತಮ್ಮ ಸಹಕಾರದಿಂದ ಯಶಸ್ವಿಯಾಗಿ 2ನೇ ವರ್ಷದಲ್ಲಿ ಲಾಭಾಂಶ ಕೊಡುವಂತಾಗಿದೆ ಎನ್ನುತ ವಾರ್ಷಿಕ ವರದಿ ಓದಿದರು. ಗುಲ್ಬರ್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಬಸವಲಿಂಗ ನಾಸಿ ಮಾತನಾಡಿದರು. ವಿಜಯಲಕ್ಷ್ಮಿ ಯರಗೋಳ ಪ್ರಾರ್ಥಿಸಿದರು. ಶಿವಕುಮಾರ ಬೆಳಕೇರಿ ಸ್ವಾಗತಿಸಿದರು. ರಾಜಕುಮಾರ ಕಡಗಂಚಿ ನಿರೂಪಿಸಿದರು. ದೇವನಾಥ ಮಾಳ್ಗೆ ವಂದಿಸಿದರು.ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಶ್ವರಾಧ್ಯ ಇಜೇರಿ ನಿರ್ದೇಶಕರಾದ ಹಣಮಂತ ಎನ್ ಭಾವಿಕಟ್ಟಿ, ರಮೇಶ ಕಡಾಳೆ, ಅಶೋಕ ಬೇನೂರ,ಸಂತೋಷ ಕುಮಾರ ಮರಡಿ, ಸುರೇಶ ಜಿ ಕುಲಕರ್ಣಿ, ಮಹಮ್ಮದ್ ಖಾದರ ಖಾನ, ಫತ್ರುಬಿ ಅಬ್ದುಲ ಅಜೀಮ, ಮುಖ್ಯ ಕಾರ್ಯನಿರ್ವಾಹಕರಾದ ಅಶ್ವಿನಿ ಎಸ್ಎಂ ವೇದಿಕೆಯ ಮೇಲಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ಅಮೃತ ಎ ಜೋಶಿ, ಆದಿತ್ಯ ಕೆ ಕುಲಕರ್ಣಿ, ದೀಪ್ತಿ ಕುಲಕರ್ಣಿ, ಕಾಂಚನಾ, ಅಮೂಲ್ಯ ಜೋಶಿ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ಅನುಶಕುಮಾರ ಅವರಿಗೆ ಸಂಘದ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಸದಸ್ಯರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.