ಗೌತಮ್ ಮುತಂಗಿಕರಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

ಗೌತಮ್ ಮುತಂಗಿಕರಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ

ಗೌತಮ್ ಮುತಂಗಿಕರಗೆ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ 

ಬೀದರ್ : ವಿಶ್ವ ಕನ್ನಡಿಗರ ಸಂಸ್ಥೆವತಿಯಿಂದ ಬೀದರ್‌ನ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನವ ಬಂಧುತ್ವ ವೇದಿಕೆ ಬೀದರ ತಾಲೂಕು ಸಂಚಾಲಕ ಗೌತಮ್ ಮುತಂಗಿಕರ್ ಇವರಿಗೆ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೆ ವೇಳೆ ಡಾ.ಜಿ.ಪಿ.ವಿಶ್ವನಾಥ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರು ಮತ್ತು ಅಮೃತ ಸಿ.ಪಾಟೀಲ ಶಿರೋನೋರು, ಸಂಸ್ಥಾಪಕ ರಾಜ್ಯ ಅಧ್ಯಕ್ಷರು-ವೀರ ಕನ್ನಡಿಗರ ಸೇನೆ ಕಲಬುರ್ಗಿ ಹಾಗೂ ಡಾ.ಸಬ್ಬಣ್ಣ ಕರಕನಹಳ್ಳಿ, ಸಂಸ್ಥಾಪಕ ರಾಜ್ಯ ಅಧ್ಯಕ್ಷರು- ವಿಶ್ವ ಕನ್ನಡಿಗರ ಸಂಸ್ಥೆ, ಅವಿನಾಶ ರಾಯ್ ಜಿಲ್ಲಾ ಅಧ್ಯಕ್ಷರಾದ ವೀರಕನ್ನಡಗರ ಸೇನೆ ಇವರ ಅಮೃತ ಹಸ್ತದಿಂದ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು

  ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್