ವರ್ತಮಾನದ ಸ್ಥಿತಿಗತಿಗಳನ್ನು ಅರಿತು ಮಾತನಾಡುವಲ್ಲಿ ಸಾಹಿತ್ಯದ ಅಧ್ಯಯನ ಅಗತ್ಯ – ಎಸ್.ಜಿ. ಸಿದ್ಧರಾಮಯ್ಯ

ವರ್ತಮಾನದ ಸ್ಥಿತಿಗತಿಗಳನ್ನು ಅರಿತು ಮಾತನಾಡುವಲ್ಲಿ ಸಾಹಿತ್ಯದ ಅಧ್ಯಯನ ಅಗತ್ಯ – ಎಸ್.ಜಿ. ಸಿದ್ಧರಾಮಯ್ಯ

ವರ್ತಮಾನದ ಸ್ಥಿತಿಗತಿಗಳನ್ನು ಅರಿತು ಮಾತನಾಡುವಲ್ಲಿ ಸಾಹಿತ್ಯದ ಅಧ್ಯಯನ ಅಗತ್ಯ – ಎಸ್.ಜಿ. ಸಿದ್ಧರಾಮಯ್ಯ

ಕಲಬುರಗಿ: ವರ್ತಮಾನದ ಸ್ಥಿತಿಗತಿಗಳನ್ನು ಅರಿತು ಮಾತನಾಡುವವರು ಸಾಹಿತ್ಯವನ್ನು ಗಂಭೀರವಾಗಿ ಓದಿದವರಾಗಿರಬೇಕು. ಅಂತಹವರ ಮಾತಿನಲ್ಲಿ ಸದಾ ವಿವೇಕ ಮತ್ತು ಪರಿಪಕ್ವತೆ ವ್ಯಕ್ತವಾಗುತ್ತದೆ ಎಂದು ಖ್ಯಾತ ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ– ಗ್ರಂಥಾಲಯದಲ್ಲಿ ಡಾ. ಸಿದ್ದರಾಮ ಹೊನ್ಕಲ್ ಅವರ ಸಮಗ್ರ ಸಾಹಿತ್ಯದ ಕೃತಿ ‘ಕನ್ನಡಿಯಲ್ಲಿ ಕಂಡ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

 “ನಮ್ಮ ಮನಸ್ಥಿತಿಯಂತೆ ಪರಿಸ್ಥಿತಿ ರೂಪುಗೊಳ್ಳುತ್ತದೆ; ಪರಿಸ್ಥಿತಿಯಂತೆ ಬದುಕಿನ ಉನ್ನತಿ ಸಾಧ್ಯ. ಆದ್ದರಿಂದ ಸಾಹಿತ್ಯದ ಅಧ್ಯಯನ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತದೆ” ಎಂದು ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಅವರು ಹೇಳಿದರು.

ಇಂದಿನ ದಿನಗಳಲ್ಲಿ ಪುಸ್ತಕ ಉದ್ಯಮ ಬಡವಾಗುತ್ತಿರುವುದು ಆತಂಕಕಾರಿ ಸಂಗತಿ. ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ನಿರ್ಮಾಣವಾಗಬೇಕು. ಎಲ್ಲರನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

  ಡಾ. ಸಿದ್ದರಾಮ ಹೊನ್ಕಲ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಗೈದಿರುವುದನ್ನು ಸ್ಮರಿಸಿ, ಈ ಕೃತಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಎಂದು ಪ್ರಭುಲಿಂಗ ನೀಲೂರೆ ಅವರುಕೃತಿ ಪರಿಚಯ ಮಾಡಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ. ಪೋತೆ, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎಸ್ ಎಲ್ ಪಾಟೀಲ,ಡಾ ಆನಂದ ಸಿದ್ದಾಮಣಿ, ಶರಣಗೌಡ ಪಾಟೀಲ ಪಾಳಾ, ನದಾಫ, ಅಪ್ಪಾರಾವ ಅಕ್ಕೊಣಿ, ಸೂರ್ಯಕಾಂತ್ ಸುಜಾತ ,ಶ್ರೀ ಶೈಲ ನಾಗರಾಳ, ಶಿವಾನಂದ ಮಠಪತಿ 

 ಸೇರಿದಂತೆ ಅನೇಕ ಸಾಹಿತಿಗಳು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.