ನಾಡು ಇರುವವರೆಗೆ ನಾಡಗೀತೆ ಇರುತ್ತದೆ-ಪ್ರೊ. ಮಲ್ಲಿಕಾರ್ಜುನ ಪಾಲಾಮೂರ

ನಾಡು ಇರುವವರೆಗೆ ನಾಡಗೀತೆ ಇರುತ್ತದೆ-ಪ್ರೊ. ಮಲ್ಲಿಕಾರ್ಜುನ     ಪಾಲಾಮೂರ

ನಾಡು ಇರುವವರೆಗೆ ನಾಡಗೀತೆ ಇರುತ್ತದೆ-ಪ್ರೊ. ಮಲ್ಲಿಕಾರ್ಜುನ ಪಾಲಾಮೂರ

ಚಿಂಚೋಳಿ ,- ಕನ್ನಡ ನಾಡು ಸಮೃದ್ಧಿಯ ನಾಡಾಗಿದೆ. ಸಿರಿವಂತ ಬೀಡಾಗಿದೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿದ " ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ " ಎನ್ನುವ ಗೀತೆ ನಮ್ಮ ರಾಜ್ಯ ಸರ್ಕಾರ 2011ರಲ್ಲಿ ಅಧಿಕೃತವಾಗಿ ಪದ್ಯದಲ್ಲಿನ ಐದೂ ನುಡಿಗಳು ಹಾಡಬೇಕೆಂದು ಸ್ವೀಕಾರ ಮಾಡಿದೆ. ಕವಿತೆಯ ಪ್ರತಿಯೊಂದು ಸಾಲುಗಳು ನಮ್ಮ ನಾಡಿನ ಇತಿಹಾಸ, ರಾಜವಂಶಗಳ ಪರಿಚಯ, ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆ, ಮಹಾಪುರುಷರ ಜೀವನ, ಪ್ರವಾಸಿ ತಾಣಗಳನ್ನು ಪ್ರತಿನಿಧಿಸುತ್ತದೆ. ಸಂಗೀತಗಾರರು ನಾಡಗೀತೆಯನ್ನು ಶುಶ್ರಾವ್ಯವಾಗಿ ಹಾಡಿ ಕನ್ನಡದ ಮನಸ್ಸುಗಳಿಗೆ ತಲುಪಿಸಿದ್ದಾರೆ. ಕುವೆಂಪು ಅವರು ಈ ಗೀತೆಯನ್ನು ತಮ್ಮ 20ನೆಯ ವಯಸ್ಸಿನಲ್ಲಿ; 1924ರಲ್ಲಿ ರಚಿಸಿದ್ದಾರೆ. ಇಂದಿಗೂ ಈ ಗೀತೆ ನವ ನವೀನತೆಯನ್ನು ಪಡೆದಿದೆ. ನಿತ್ಯ ನೂತನವಾಗಿದೆ. ಹೀಗಾಗಿ ನಮ್ಮ ನಾಡು ಇರುವವರಿಗೆ ಕುವೆಂಪು ಅವರು ರಚಿಸಿದ ನಾಡಗೀತೆ ಜೀವಂತವಾಗಿರುತ್ತದೆ ಎಂದು ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಇಲ್ಲಿನ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥೆಯಲ್ಲಿ, ಚಿಂಚೋಳಿ ತಾಲೂಕಾ ಸಿರಿಗನ್ನಡ ವೇದಿಕೆ, ೬೯ ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ, "ನಾಡ ಗೀತೆಗೆ ಶತಮಾನದ ಸಂಭ್ರಮ" ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಸವರಾಜ ಐನೋಳಿ, ಪ್ರಾಚಾರ್ಯ ಬಸವರಾಜ ಪಡಶೆಟ್ಟಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ಅವರು ಕನ್ನಡದ ವಿಶಿಷ್ಟ ಭಾಷಾ ಶೈಲಿಯನ್ನು ಅದರ ಉಚ್ಚರಣೆಯನ್ನು ಬೇರೆ ಬೇರೆ ಜನರು ಹೇಗೆ ಮಾಡುತ್ತಾರೆ ಎಂದು ವಿವರಿಸಿ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು. ವೇದಿಕೆ ಅಧ್ಯಕ್ಷೆ ಗೀತಾರಾಣಿ ಐನೋಳಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಸಂಗಮೇಶ ಕನಕಟ್ಟಾ ಶಿಕ್ಷಕರು ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಕನ್ನಡ ವ್ಯಾಕರಣ ರಸಪ್ರಶ್ನೆ ಹಾಗೂ ನಾಡಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.