ಪ್ರತ್ಯೇಕ ರಸ್ತೆ ಅಪಘಾತ ನಾಲ್ವರ ಸಾವು
ಪ್ರತ್ಯೇಕ ರಸ್ತೆ ಅಪಘಾತ ನಾಲ್ವರ ಸಾವು
ಆಳಂದ: ತಾಲೂಕಿನ ಸರಹದಿನ ವಾಗ್ದರಿ ರಿಬ್ಬನಪಲ್ಲಿ ಹೆದ್ದಾರಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ತಾಲೂಕಿನ ನರೋಣಾ ಮತ್ತು ಅಕ್ಕಲಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹಿರೋಳಿ ಗಡಿ ಸರಹದ್ದಿನ ಬಳಿಯ ಮಹಾರಾಷ್ಟçದ ಅಕ್ಕಲಕೋಟ ಠಾಣೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಲಾರಿ ಮತ್ತು ಕಬ್ಬಿನ ಟ್ರಾö್ಯಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಲಾರಿ ಚಾಲಕ ಸೇರಿ ಟ್ರಾಕ್ಟರ್‌ನಲ್ಲಿದ್ದ ಇಬ್ಬರು ಸೇರಿ ಮೂವರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಲಾರಿ ಚಾಲಕನಾಗಿದ್ದ ತಾಲೂಕಿನ ಕೊಡಲಹಂಗರಗಾ ಗ್ರಾಮದ ನಿವಾಸಿ ಶ್ರೀಮಂತ ನಾಗಪ್ಪ ಮೇಲಿನಕೇರಿ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮತ್ತೊಂದಡೆ ಇದೇ ಹೆದ್ದಾರಿಯ ಕಲಬುರಗಿ ಆಳಂದ ಮಾರ್ಗಮಧ್ಯದ ಲಾಡಚಿಂಚೋಳಿ ಕೊಡಲಹಂಗರಗಾ ಮಧ್ಯದ ಡೋಗಿಬನದ ಬಳಿ ಸಂಜೆ ಆಳಂದ ಮಾರ್ಗವಾಗಿ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಎದುಮುಖವಾಗಿ ಬಂದ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರನಾಗಿದ್ದ ಖಜೂರಿ ನಿವಾಸಿ ಓಂಕಾರ ಢಗೆ (20) ಎಂಬುವ ಯುವಕ ಮೃತಪಟ್ಟಿದ್ದು, ಹಿಂಬದಿ ಸವಾರ ಈಶ್ವರ ಕಲಶೆಟ್ಟಿ ಖಜೂರಿ (20) ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಎದುರಿನಿಂದ ಬಂದಿದ್ದ ದ್ವಿಚಕ್ರವಾಹನ ಸವಾರ ಧುತ್ತರಗಾಂವ ತಾಂಡಾ ನಿವಾಸಿಗಳಿಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.