ರಾಜ್ಯ ಸರಕಾರಕ್ಕೆ ಸಿಕ್ಕ ಬೆಂಬಲ: ನಾಗರಾಜ ಗುಂಡಗುರ್ತಿ
ರಾಜ್ಯ ಸರಕಾರಕ್ಕೆ ಸಿಕ್ಕ ಬೆಂಬಲ: ನಾಗರಾಜ ಗುಂಡಗುರ್ತಿ
ಕಲಬುರಗಿ: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಫಲಿತಾಂಶ ನಮ್ಮ ಗ್ಯಾರಂಟಿ ಮತ್ತು ಅಭಿವೃದ್ಧಿಗೆ ಹಿಡಿದ ಕೈಗನ್ನಡಿ, ರಾಜ್ಯ ಸರಕಾರ ಕೆಲಸಕ್ಕೆ ಜನರಿಂದ ಸಿಕ್ಕ ಜನಮನ್ನಣೆ. ಜತೆಗೆ ಇದು 2028 ರ ಚುನಾವಣೆ ಗೆಲುವಿಗೆ ಮುನ್ನುಡಿ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗುಂಡಗುರ್ತಿ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಗೆಲುವು ನಮ್ಮ ಸರಕಾರದ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದೃಢಗೊಂಡಿದೆ ಎಂಬುದು ಬೈಎಲೆಕ್ಷನ್ ಸಾಬಿತುಪಡಿಸಿದೆ. ಇದು ಕಾಂಗ್ರೆಸ್ ಪಕ್ಷದ ಯೋಜನೆ ಹಾಗೂ ಸಿದ್ದರಾಮಯ್ಯನವರ ಆಡಳಿತದ ಬಗ್ಗೆ ಜನ ನೀಡಿರುವ ತೀರ್ಪಾಗಿದೆ ಎಂದರು.
ಸಂಡೂರ ಕ್ಷೇತ್ರವನ್ನು ಉಳಿಸಿಕೊಳ್ಳುವ ಜೊತೆಗೆ ಬಿಜೆಪಿಯ ಶಿಗ್ಗಾವಿ ಕ್ಷೇತ್ರ ಮತ್ತು ಜೆಡಿಎಸ್‌ನ ಚನ್ನಪಟ್ಟಣ ಕ್ಷೇತ್ರವನ್ನು ಗೆದ್ದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಚಾಕಚಕ್ಯತೆಯನ್ನು ಎಲ್ಲೆಡೆ ಮೆರೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಚುನಾವಣೆಗೆ ದಿಕ್ಕೂಚಿಯಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನರು ಮತ ನೀಡಿ ಗೆಲ್ಲಿಸಿದ್ದಾರೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಕೆಲಸ ಮೆಚ್ಚಿ ಜನರು ಮತ ನೀಡಿದ್ದಾರೆ. ಸಮೀಕ್ಷೆ ಸುಳ್ಳಾಗಿವೆ. ಉಪ ಚುನಾವಣೆ ಫಲಿತಾಂಶವು 2028ರ ವಿಧಾನಸಭೆ ಚುನಾವಣೆಗೆ ದಿಕ್ಕೂಚಿಯಾಗಿದೆ ಎಂದರು.