ನಿರ್ಲಕ್ಷ ತೋರಿದ ರೈತ ಸಂಪರ್ಕ ಕೇಂದ್ರದ ಅವಳಿ ತಾಲೂಕಿನ ಅಧಿಕಾರಿಗಳ ವಿರುದ್ಧ ಗುಡುಗಿದ :ಡಾ ಮಲ್ಲಿಕಾರ್ಜುನ ನಾಯ್ಕೋಡಿ .

ನಿರ್ಲಕ್ಷ ತೋರಿದ ರೈತ ಸಂಪರ್ಕ ಕೇಂದ್ರದ ಅವಳಿ ತಾಲೂಕಿನ ಅಧಿಕಾರಿಗಳ ವಿರುದ್ಧ ಗುಡುಗಿದ :ಡಾ ಮಲ್ಲಿಕಾರ್ಜುನ ನಾಯ್ಕೋಡಿ .

ನಿರ್ಲಕ್ಷ ತೋರಿದ ರೈತ ಸಂಪರ್ಕ ಕೇಂದ್ರದ ಅವಳಿ ತಾಲೂಕಿನ ಅಧಿಕಾರಿಗಳ ವಿರುದ್ಧ ಗುಡುಗಿದ :ಡಾ ಮಲ್ಲಿಕಾರ್ಜುನ ನಾಯ್ಕೋಡಿ .

ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ರಾಜಕೀಯದವರು ರಾಜ್ಯ ಭಾರ ಮಾಡುತ್ತಿದ್ದಾರೆ ಆದರೆ ಇಲ್ಲಿನ ಅಧಿಕಾರಿಗಳು ರೈತರ ರಕ್ತ ಹೀರುತ್ತಿದ್ದಾರೆ ಈ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ರೈತರಿಗೆ ನೀಡಬೇಕಾದ ಕ್ರಿಮಿ ರಾಸಾಯನಿಕ ಔಷಧಿಗಳು ಹಾಗೂ ಸ್ಪಿಂಕಲರ ಪೈಪುಗಳು ಹಾಗೂ ಇನ್ನಿತರ ಸಲಕರಣೆಗಳನ್ನು ನೀಡದೆ ಸತಾಯಿಸ್ತಿದ್ದು ಪ್ರತಿನಿತ್ಯ ರೈತರಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮನೆಗೆ ತೆರಳುವುದು ಒಂದು ಕೆಲಸವಾಗಿ ಬಿಟ್ಟಿದೆ ಆದರೆ ಒಂದು ವರ್ಷವಾದರೂ ಇನ್ನೂ ಕೆಲವು ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ಯಾವುದೇ ಒಂದು ಉಪಕರಣವನ್ನು ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡ್ರಾಮಿ:ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ವಿತರಿಸಬೇಕಾಗಿದ್ದ ರಾಸಾಯನಿಕ ಬೆಳೆಗೆ ಸಿಂಪಡಿಸಬೇಕಾದ ರಾಸಾಯನಿಕ ಔಷಧಿಗಳು ಹಾಗೂ ರಾಸಾಯನಿಕ ದಾಸ್ತಾನುಗಳು ಮತ್ತು ರೈತರಿಗೆ ವಿತರಿಸಬೇಕಾದ ಸ್ಪಿಂಕ್ಲರ್ ಪೈಪುಗಳು ಸರ್ಕಾರಿ ನಿಯಮದ ಪ್ರಕಾರ ವಿತರಿಸದೆ ಸರ್ಕಾರಿ ಧಾರಣೆಯ ಪ್ರಕಾರ ಮಾರಾಟ ಮಾಡದೆ ದುಡ್ಡು ಕೊಟ್ಟವರಿಗೆ ವಿತರಣೆ ಮಾಡುತ್ತಿದ್ದಾರೆಂದು ತಾಲೂಕಿನ ರೈತರ ಅಳಲು ತೋಡಿಕೊಂಡಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಯಾದ ಡಾ.ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿ ಗುಡುಗಿದ್ದಾರೆ.

ಅಷ್ಟೇ ಅಲ್ಲದೆ ಮುಂದೆ ಬರುವಂತ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಕಲಬುರಗಿ ಜಿಲ್ಲಾ ಮುಖ್ಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಕಚೇರಿಗೆ ಮುತ್ತಿಗೆಯನ್ನು ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ರೈತ ಸಂಪರ್ಕ ಕೇಂದ್ರ ಬಾರದೆ ರಿಜಿಸ್ಟರ್ನಲ್ಲಿ ತಮ್ಮ ಹಾಜರತಿಯನ್ನು ಹಾಕಿ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೋಗಿ ನಮಗೆ ಆಫೀಸ್ ನಲ್ಲಿ ಮೀಟಿಂಗ್ ಇತ್ತು ಅದಕ್ಕಾಗಿ ಇವತ್ತು ಬಂದಿಲ್ಲ ಎನ್ನುವ ನಿರ್ಲಕ್ಷ ಮಾತನಾಡಿ ರೈತರಿಗೆ ದಾರಿ ತಪ್ಪಿಸುವಂತೆ ಮಾಡುತ್ತಿದ್ದಾರೆ. ಎಲ್ಲ ಬೆಳವಣಿಗೆಗಳಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಕಾಂತಪ್ಪ ಕಟ್ಟಿಮನಿ ಹಾಗೂ ಜಿಲ್ಲಾ ಅಧಿಕಾರಿಗಳಾದ ಸಮದ ಪಟೇಲ್ ಅವರ ಕೈವಾಡ ಇರಬಹುದು ಎಂದು ಅನುಮಾನವನ್ನು ಪಟ್ಟಿದ್ದಾರೆ.

ಅತಿ ಶೀಘ್ರದಲ್ಲಿ ಈ ಅವ್ಯವಸ್ಥೆಯ ವಿರುದ್ಧ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸಾಕ್ಷಾಧಾರ ಸಮೇತ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಆದಷ್ಟು ಶೀಘ್ರದಲ್ಲಿ ದೂರೂ ಸಲ್ಲಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಯಾದ ಡಾ .ಮಲ್ಲಿಕಾರ್ಜುನ್ ನಾಯ್ಕೋಡಿಯವರು ತಿಳಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ಲೂಟಿ ಮಾಡಲು ಸಿಸಿ ಕ್ಯಾಮೆರಾ ಗಳಿಗೆ ಅಡ್ಡಲಾಗಿ ಕಾಟನ್ ಬಾಕ್ಸ್ ಗಳು ಇಡಲಾಗಿದೆ ಇದರಿಂದ ಇಡೀ ರೈತ ಸಮುದಾಯಕ್ಕೆ ಗೊತ್ತಾಗುತ್ತದೆ ಅಧಿಕಾರಿಗಳು ಎಷ್ಟು ಕಳ್ಳರೆಂದು ಭಾವಿಸಿ ಇಜೇರಿ ಹಾಗೂ ಆಂದೋಲ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರಾಸಾಯನಿಕ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು ರೈತರಿಂದ ದುಪಟ್ಟ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು 

ಸ್ಪಿಂಕ್ಲರ್ ಪೈಪ್ ಕ್ರಿಮಿನಾಶಕಗಳು ಔಷಧಿ ಯಾವ ಕಂಪನಿಗಳಿಂದ ನೀವು ಟೆಂಡರ್ ಮಾಡಿದ್ದೀರಿ ಎಂಬುದಾಗಿ ರೈತರಿಗೆ ಬಹಿರಂಗವಾಗಿ ಅದರ ಬಗ್ಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ 

ರೈತ ಸಂಪರ್ಕ ಕೇಂದ್ರಗಳಲ್ಲಿ ಬರುತ್ತಿರುವ ಸಲಕರಣೆಗಳು ರೈತರಿಗೆ ಸೇರದೆ ದುಡ್ಡು ಕೊಟ್ಟ ಕಲ್ಲಾಳಿಗಳಿಗೆ ಹಾಗೂ ಅಧಿಕಾರಿಗಳ ಸಂಬಂಧಿಕರ ಮನೆಗಳಿಗೆ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದು ಇಂತಹ ನೀಚ ಕೃತ್ಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ನಾಯ್ಕೋಡಿ ಗಂವ್ಹಾರ ಅವರು ತಿಳಿಸಿದ್ದಾರೆ.

ಮುಖ್ಯಾಂಶಗಳು:

1) ಅವಳಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದುಪಟ್ಟ ಹಣ ವಸೂಲಿ

2)ರೈತರಿಗೆ ಸೇರಬೇಕಾದ ಸಲಕರಣೆಗಳು ಇನ್ಯಾರಿಗೋ ಸೇರುತ್ತವೆ.

3) ರೈತರು ವರ್ಷವಿಡೀ ಅಲೆದಾಡಿದರು ಸಿಗುತ್ತಿಲ್ಲ ಸ್ಪಿಂಕ್ಲರ್ ಪೈಪ್ 

4)ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತ ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು 

5) ಜಿಲ್ಲಾ ಕಚೇರಿ ಮುಂದೆ ಹೋರಾಟ ಕರ್ನಾಟಕರೈತ ಸಂಘ ಹಾಗೂ ಹಸಿರಸೇನೆ ರಾಜ್ಯ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ್ ನಾಯ್ಕೊಡಿ.ಗಂವ್ಹಾರ

6) ಸ್ಪಿಂಕ್ಲರ್ ಹಾಗೂ ಕ್ರಿಮಿನಾಶಕ ಔಷಧಿಗಳು ಯಾವ ಕಂಪನಿಯಿಂದ ಟೆಂಡರ್ ಮಾಡಿದ್ದೀರಿ ಎಂಬುದು ರೈತರಿಗೆ ಬಹಿರಂಗವಾಗಿ ತಿಳಿಸಿ

ವರದಿ ಜೆಟ್ಟೆಪ್ಪ ಎಸ್ ಪೂಜಾರಿ