ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಕೆ.ನೀಲಾ

ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಕೆ.ನೀಲಾ

ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಕೆ.ನೀಲಾ

ಆಳಂದ: ಚಿಂಚನಸೂರ ಗ್ರಾಮದಲ್ಲಿ ಸಿಪಿಐ (ಎಮ್ ) ಪಕ್ಷದ ಆಳಂದ ತಾಲೂಕ ಎಂಟನೇ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು, CPI(M) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೆಡ್ ಕೆ ನೀಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡವರ, ದಲಿತರ, ಮಹಿಳೆಯರ ರಕ್ಷಣೆ ಮಾಡುವಲ್ಲಿ ಮತ್ತು ಯುವಜನರಿಗೆ ಉದ್ಯೋಗ ಕೋಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. 

ಅಲ್ಲದೆ ಕೋಮುವಾದ ಸ್ಥಿತಿ ನಿರ್ಮಾಣ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ಗಂಜಿ ಅವರು ವಹಿಸಿದರು. ಮುಖ್ಯ ಅತಿಥಿಯಾಗಿ ಸಿಪಿಐ (ಎಂ) ನ ರಾಜ್ಯ ಸಮಿತಿ ಸದಸ್ಯೆ ಕಾಂ. ಗೌರಮ್ಮ ಅವರು ಆಗಮಿಸಿ ಸರ್ಕಾರದ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ಹೇಳಿ ಜನಸಾಮಾನ್ಯರ ಮೇಲೆ ಅನ್ಯಾಯ ಹೆಚ್ಚು ಆಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕಾಮ್ರೆಡ್ ಶ್ರೀಮಂತ ಬಿರಾದರ್ ಜಿಲ್ಲಾ ಸಹಕಾರ್ಯದರ್ಶಿಗಳು...

ಜಿಲ್ಲಾ ಸಮಿತಿಯ ಸದಸ್ಯರಾದ,ಕಾಂ.ಸುಧಾಮ ಧನ್ನಿ ,ಕಾಂ. ಬಾಬು ಇರಾನ್ ಶೆಟ್ಟಿ ಹಿರಿಯ ಹೋರಾಟಗಾರರು,ಕಾಂ. ಪ್ರಕಾಶ್ ಜಾನೆ,ಕಾಂ. ವಿರೂಪಾಕ್ಷಪ್ಪ ತಡಕಲ್ ,ಕಾಂ. ಪಾಂಡುರಂಗ ಮಾವಿನಕಾರ ಹಾಗೂ ಹಿರಿಯ ಸಾಹಿತಿ ,ಕಾಂ. ಪ್ರಭು ಖಾನಾಪುರೆ, ಪ್ರಮೋದ್ ಪಂಚಾಳ ಸೇರಿದಂತೆ ಗ್ರಾಮದ ಅನೇಕರು ಹಾಜರಿದ್ದರು. 

 ಈ ಸಂದರ್ಭದಲ್ಲಿ ಲವಿತ್ರ ವಸ್ತ್ರದ ಮತ್ತು ಮೇಘಾ ಅವರು ಕ್ರಾಂತಿಗೀತೆ ಹಾಡಿದರು. ಕಾಂ. ಸಲ್ಮಾನ್ ಖಾನ್ ಸ್ವಾಗತಿಸಿದರು,  ಪಾಂಡುರಂಗ ಮಾವಿನಕಾರ ವಂದಿಸಿದರು.

 ಈ ಸಂದರ್ಭದಲ್ಲಿ CPI(M) ನ ಹೊಸ ಕಾರ್ಯದರ್ಶಿಯಾಗಿ ಸಲ್ಮಾನ್ ಖಾನ್ ನಗರ ಅವರಿಗೆ ನೇಮಿಸಲಾಯಿತು.